ತುಮಕೂರು:
ಸತತವಾಗಿ ಬೀಳುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದಲ್ಲಿ ಅನೇಕ ಕಡೆ ಬಡವರಿಗೆ ಸೇರಿದ ಹೆಂಚಿನ ಮನೆಗಳಿಗೆ ಹಾನಿಯಾಗಿದೆ ಹಾಗೂ ಕೆಲವು ಮನೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಹೀಗೆ ನಗರದ ಗೂಡ್ಸ್ ಶೆಡ್ ಕಾಲೋನಿಯಲ್ಲೂ ಬಡ ಕುಟುಂಬಕ್ಕೆ ಸೇರಿದ ಮನೆಯ ಅರ್ಧ ಭಾಗ ಕುಸಿದು ಉಳಿದ ಭಾಗ ಶಿಥಿಲಗೊಂಡಿದ್ದು ಆರ್ಥಿಕವಾಗಿ ಹಿಂದುಳಿದವರಾದ ಇವರು ಬಾಡಿಗೆ ಮನೆಗೆ ಮುಂಗಡ ಹಣ ಕೊಡಲು ಅಶಕ್ತರಾಗಿದ್ದು ಅದೇ ಮನೆಯಲ್ಲಿ ವಾಸ ಮಾಡುವ ಸ್ಥಿತಿ ಇರುವದರಿಂದ ಶಿಥಿಲಗೊಂಡ ಗೋಡೆ ಬೀಳುವ ಶಂಕೆ ಇದ್ದು ಹೆಚ್ಚಿನ ಪ್ರಾಣಹಾನಿ ಆಗುವ ಸಂಭವವಿದೆ ಸಂತ್ರಸ್ತರ ಕುಟುಂಬ ಸದಸ್ಯರು ಸಹಾಯಕ್ಕಾಗಿ ಇಕ್ಬಾಲ್ ಅಹ್ಮದ್ ರವರಿಗೆ ಕರೆ ಮಾಡಿ ವಸ್ತು ಸ್ಥಿತಿ ತಿಳಿಸಿದ ಮೇರೆ ಸ್ಥಳಕ್ಕೆ ಭೇಟಿ ಕೊಟ್ಟ ಇಕ್ಬಾಲ್ ಅಹ್ಮದ್ ರವರ ಸ್ಥಳೀಯ ಮುಖಂಡರ ಜೊತೆಗೂಡಿ ಆರ್ಥಿಕ ಸಹಾಯ ಮಾಡಿದರು
ಮಳೆಯ ಆರ್ಭಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗೆ ನೆರೆಹೊರೆಯ ಸ್ಥಿತಿವಂತರು ಕೈಲಾದ ಸಹಾಯ ಮಾಡುವ ಮೂಲಕ ಸಂಕಷ್ಟಕ್ಕೊಳಗಾದ ಬಡ ಜನರಿಗೂ ಜೀವನ ನಡೆಸುವ ಹಕ್ಕು ಒದಗಿಸಿ ಕೊಡಬೇಕೆಂದು ಕರೆ ನೀಡಿದ
ಇಕ್ಬಾಲ್ ಅಹ್ಮದ್ ನಗರದಲ್ಲಿ ಸಂಕಷ್ಟಕ್ಕೊಳಗಾದ ಜನರಿಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು
ಸ್ಥಳೀಯ ಮುಖಂಡ ಇಮ್ರಾನ್ ಮಾತನಾಡಿ ಸರ್ಕಾರದಿಂದ ಬರಬಹುದಾದ ಪರಿಹಾರ ಮತ್ತೂ ನೆರವನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು ಪಾಲಿಕೆಯ ಸದಸ್ಯ ಮುಜೀದಾ ಪೀರಾನ್ ದಾ, ವಕ್ಫ್ ಉಪಾಧ್ಯಕ್ಷ ಸೈಯದ್ ಫಯಾಜ್, ಕೆಪಿಸಿಸಿಯ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿಗಳಾದ ಇಸ್ಮಾಯಿಲ್, ಸ್ಥಳೀಯ ಮುಖಂಡರಾದ ಸುಹೇಲ್,ಮಾಜ್, ಮುಂತಾದವರು ಉಪಸ್ಥಿತರಿದ್ದರು.