ತುಮಕೂರು:

ನಗರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆಗಳು, ವಾಣಿಜ್ಯ ಕಟ್ಟಡಗಳು ಮತ್ತು ಉಪಯೋಗಕ್ಕೆ ಯೋಗ್ಯವಲ್ಲದ ಕಟ್ಟಡಗಳನ್ನು ಕೆ.ಎಂ.ಸಿಕಾಯ್ದೆ 1976 ಕಲಂ 338ರಂತೆ ಕೆಡವಿ ಹಾಕತಕ್ಕದ್ದು ಎಂದು ತುಮಕೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು ನಗರ ಸೇರಿದಂತೆ ರಾಜ್ಯದಲ್ಲಿ ಧಾರಕಾರವಾಗಿ ಮಳೆಯಾಗುತ್ತಿದ್ದು, ಇದರಿಂದ ಚರಂಡಿ, ಹಳ್ಳ, ಕೆರೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುತ್ತವೆ. ನಗರದ ಕೆಲವು ಕೊಳಚೆ ಪ್ರದೇಶಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಸಾಕಷ್ಟು ವರ್ಷಗಳ ಹಿಂದೆ ನಿರ್ಮಿಸಿರುವ ಮನೆಗಳು ಬೀಳುವ ಸ್ಥಿತಿಯಲ್ಲಿದ್ದರೂ ಅಂತಹ ಮನೆಗಳಲ್ಲಿಯೇ ವಾಸ ಮಾಡುತ್ತಿರುವುದು ಹಾಗೂ ನಗರದ ಕೆಲವು ಬಡಾವಣೆಗಳಲ್ಲಿ ಮನೆಗಳು / ವಾಣಿಜ್ಯ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಬೀಳುವ ಹಂತದಲ್ಲಿದ್ದರೂ/ ಉಪಯೋಗಕ್ಕೆ ಯೋಗ್ಯವಲ್ಲದಿದ್ದರೂ ಸಹ ಅಂತಹ ಕಟ್ಟಡಗಳನ್ನು ಉಪಯೋಗಿಸುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿರುತ್ತದೆ.
ಇಂತಹ ಕಟ್ಟಡಗಳನ್ನು ಸ್ವತಃ ಕಟ್ಟಡ ಮಾಲೀಕರೇ ತೆರವುಪಡಿಸಿಕೊಳ್ಳಲು ಈ ಹಿಂದೆಯೇ ತಿಳಿಸಲಾಗಿದ್ದರೂ ಸಹ ಕಟ್ಟಡ ಮಾಲೀಕರೂ ತೆರವುಪಡಿಸಿಕೊಳ್ಳದೇ ಇರುವುದು ಕಂಡು ಬಂದಿರುತ್ತದೆ. ಆದ್ದರಿಂದ ದಯಮಾಡಿ ಶಿಥಿಲಾವಸ್ಥೆಯಲ್ಲಿರುವ / ಉಪಯೋಗಕ್ಕೆ ಯೋಗ್ಯವಲ್ಲದ ಕಟ್ಟಡಗಳನ್ನು ಕೂಡಲೇ ಖಾಲಿ ಮಾಡಿ ಕೆಡವಿ ಹಾಕತಕ್ಕದ್ದು ಎಂದು ಅವರು ತಿಳಿಸಿದ್ದಾರೆ. ತಪ್ಪಿದ್ದಲ್ಲಿ ಮುಂದೆ ಆಗುವ ಆನಾಹುತ / ಪ್ರಾಣಾಹಾನಿಗಳಿಗೆ ಕಟ್ಟಡ ಮಾಲಿಕರೇ ನೇರ ಹೊಣೆಗಾರರಾಗುತ್ತಾರೆ. ಒಂದು ವೇಳೆ ಕಟ್ಟಡವನ್ನು ತೆರವುಪಡಿಸಿಕೊಳ್ಳದೇ ಇದ್ದಲ್ಲಿ, ಪಾಲಿಕೆಯಿಂದಲೇ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದೆಂದು ಎಂದು ಆಯುಕ್ತರು ತಿಳಿಸಿದ್ದಾರೆ.

(Visited 16 times, 1 visits today)