ತುಮಕೂರು:
ಭಾರತ ಸ್ವಾತಂತ್ರ್ಯ ಅಂಗವಾಗಿ 75 ಪಾದಯಾತ್ರಿಗಳ ತಂಡ ಆ.12 ಶುಕ್ರವಾರ ದೊಡ್ಡಬಳ್ಳಾಪುರ ಟಿ.ಬಿ.ಸರ್ಕಲ್ ನಿಂದ ಹೊರಟು 14 ರಂದು ಸಂಜೆ ವಿದುರಾಶ್ವತ್ಥ ತಲುಪಲಿದೆ. 50 ರೋವರ್ಸ್, 15 ಎನ್‍ಎಸ್‍ಎಸ್ ವಿದ್ಯಾರ್ಥಿಗಳು, 10 ಹಿರಿಯ ಸರ್ವೋದಯ ಚಿಂತಕರು ಹೆಜ್ಜೆ ಹಾಕಲಿದ್ದಾರೆ ಎಂದು ಸರ್ವೋದಯ ಮಂಡಲ ಜಿಲ್ಲಾಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ತಿಳಿಸಿದ್ದಾರೆ. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಹಿರಿಯರ ತ್ಯಾಗ, ಬಲಿದಾನದ ಅರಿವನ್ನು ಯುವಕರಲ್ಲಿ ಮೂಡಿಸುವ ಸಲುವಾಗಿ ಕರ್ನಾಟಕ ಸರ್ವೋದಯ ಮಂಡಲ-ಬೆಂಗಳೂರು ಈ ಪಾದಯಾತ್ರೆ ಆಯೋಜಿಸಿದೆ. ಜೊತೆಗೆ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಗ್ರಾಮ, ಜನ ವಸತಿ ಪ್ರದೇಶದಲ್ಲಿ ಮಹಾತ್ಮ ಗಾಂಧೀಜಿ ಅವರ 100 ಭಿತ್ತಿ ಚಿತ್ರ ಪ್ರದರ್ಶನ, ಮಾರಾಟ ನಡೆಯಲಿದೆ. ಆ.14 ರಂದು ಬೆಳಗ್ಗೆ 7-30 ಗಂಟೆಗೆ ತುಮಕೂರು ಸರ್ವೋದಯ ಕಾರ್ಯಕರ್ತರು ಗಾಂಧೀಜಿ ವಾಸ್ತವ್ಯಹೂಡಿದ್ದ ಶಾಲೆಯಿಂದ ತೆರಳಲಿದ್ದು, ಗಾಂಧಿ ಚಿಂತಕರಾದ ಎಂ.ಬಸವಯ್ಯ, ಟಿ.ಆರ್.ರೇವಣ್ಣ, ಜಿ.ವಿ.ವಿ.ಶಾಸ್ತ್ರಿ , ಎಲ್.ನರಸಿಂಹಯ್ಯ ತೊಂಡೋಟಿ, ಎಂ.ವಿ.ನಂಜಪ್ಪ, ಕೆ.ಸಿ.ಬಸಪ್ಪ, ಎಸ್.ನಾಗಣ್ಣ ಇತರರು ಭಾಗವಹಿಸಿ ಪಾದಯಾತ್ರಿಗಳಿಗೆ ಶುಭಕೋರಲಿದ್ದಾರೆ. ತುಮಕೂರಿನ ಸರ್ವೋದಯ ಚಿಂತಕರು ವಾಹನದಲ್ಲಿ ತೆರಳಿ ಗೌರಿಬಿದನೂರಿನಿಂದ ಪಾದಯಾತ್ರೆ ಮೂಲಕ ವಿದುರಾಶ್ವತ್ಥ ತಲುಪಲಿದ್ದಾರೆ. ಅಂದು ಸಂಜೆ 6 ಗಂಟೆ ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟದ ವಿಶೇಷ ಚಿತ್ರ ಪ್ರದರ್ಶನ ನಡೆಯಲಿದ್ದು, ಸರ್ವ ಸದಸ್ಯರ ಸಭೆ ಆಯೋಜಿಸಲಾಗಿದೆ. ಸರ್ವೋದಯ ಸರ್ವ ಸೇವಾ ಸಂಘದ ಅಧ್ಯP್ಷÀ ಚಂದನ್‍ಪಾಲ್ ಉಪಸ್ಥಿತರಿರುವರು. ಆ.15 ರಂದು ಧ್ವಜಾರೋಹಣ, ಮೆರವಣಿಗೆ ನಂತರ ಸ್ವಾತಂತ್ರೋತ್ಸವದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸ್ಮಾರಕ ಸಮಿತಿ ಹಮ್ಮಿಕೊಂಡಿದೆ.