ತುರುವೇಕೆರೆ:


ಶರಣ ಕುಳುವ ನುಲಿಯ ಜಯಂತಿಯನ್ನ ಮುಂದೂಡುವಂತೆ ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಕುಳುವ ಸಮಾಜ ಮನವಿ ಸಲ್ಲಿಸಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಶಾಂತಿಯುವಾಗಿ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂಘದ ಪದಾದಿಕಾರಿಗಳಿ ತಾಲ್ಲೂಕು ಕಚೇರಿ ಆವರಣದಲ್ಲಿ ಶರಣ ನುಲಿಯ ಚಂದ್ರಯ್ಯನವರಿಗೆ ಜಯಕಾರ ಕೂಗುತ್ತಾ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ರವರ ಮಾತನಾಡಿ ದಿನಾಂಕ 12/08/22 ರಂದು ನೆಡೆಯಬೇಕಿದ್ದ ಶರಣ ಕುಳುವ ನುಲಿಯ ಚಂದಯ್ಯನವರ ಜಯಂತಿಯನ್ನು ನೂಲಿನ ಹುಣ್ಣಿಮೆಯ ದಿನದಂದು (ಆಗಸ್ಟ್ 12) ಸರ್ಕಾರಿ ರಜಾ ರಹಿತವಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದ್ದು,
ಅದರಂತೆ 05/08/22 ರಂದು ತುಮಕೂರಿನಲ್ಲಿ ಪೂರ್ವ ಭಾವಿ ಸಭೆಯ ತೀರ್ಮಾನದಂತೆ ಜಿಲ್ಲಾ ಕೇಂದ್ರದಲ್ಲಿ ಅದ್ದೂರಿ ಜಯಂತಿ ಆಚರಣೆಗೆ (ಅಖಿಲ ಕರ್ನಾಟಕ ಕುಳುವ ಮಹಾಸಂಘ) ಜಿಲ್ಲಾ ಘಟಕ ಎಲ್ಲ ತಾಲ್ಲೂಕು ಘಟಕಗಳಿಗೆ ಕರೆಕೊಟ್ಟಿದ್ದು ಆದ್ದರಿಂದ ತಾಲ್ಲೂಕಿನಲ್ಲಿ ಜಯಂತಿ ಆಚರಣೆ ಸಾಧ್ಯವಾಗುತ್ತಿಲ್ಲ ಮತ್ತೊಂದು ದಿನಾಕವನ್ನು ನಿಗದಿ ಪಡಿಸಲು ಸಮಾಜದ ಮುಖಂಡರ ಪೂರ್ವ ಭಾವಿ ಸಭೆಯನ್ನು ಕರೆಯುವಂತೆ ಒತ್ತಾಯಿಸಿದರು.
ನಂತರ ದಂಡಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಪತಹಸೀಲ್ದಾರ್ ರವರಿಗೆ ತಾಲ್ಲೂಕು ಕುಳುವ ಮಹಾ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಧು, ಸಣ್ಣಪ್ಪ, ವೆಂಕಟೇಶ್, ರಾಜು, ರೇಣುಕಮ್ಮ, ವಾಸು, ನಟರಾಜು, ಚಿದಾನಂದ್, ರತೀಶ್, ಮಂಜುಳಾ, ಕರಿಯಪ್ಪ ಮುನಿಸಿದ್ದಯ್ಯ, ರಮೇಶ್.,ಮೋಹನ್ ಕುಮಾರ್ ಮತ್ತು ಪದಾಧಿಕಾರಿಗಳು ಇದ್ದರು.

(Visited 5 times, 1 visits today)