ತುಮಕೂರು:


ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ. ವೀರಭದ್ರಯ್ಯ ಮತ್ತು ಎಫ್.ಡಿ.ಎ ಹರೀಶ್ ಇಬ್ಬರೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು, ಇವರಿಬ್ಬರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಗೌರವಾಧ್ಯಕ್ಷ ಬಿ.ಬಿ.ಮಹದೇವಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿರುವ ಕರುನಾಡ ವಿಜಯಸೇನೆ ಗೌರವಾಧ್ಯಕ್ಷ ಬಿ.ಬಿ.ಮಹದೇವಪ್ಪ ಅವರು, ದಿನನಿತ್ಯ ರೋಗಿಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಖಾತೆಗೆ ಜಮಾ ಮಾಡದೇ 2018 ನೇ ಸಾಲಿನಿಂದ 2025 ರವರೆಗೆ ಒಟ್ಟು ರೂ.4,32,00,000 ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ರೂ.3,75,00,000 ಮಾತ್ರ ಸಂದಾಯ ಮಾಡಿರುತ್ತಾರೆ. ಇನ್ನುಳಿದ ರೂ. 57,46,000 ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಆಡಿಟ್‍ಗೆ ಬಂದಂತಹವರನ್ನು ಲಂಚದ ಆಮಿಷ ತೋರಿಸಿ ಸದರಿ ವಿಚಾರವನ್ನು ಮುಚ್ಚಿ ಹಾಕಲಾಗಿದೆ. ಸದರಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಇರುವ ಡಿ.ವಿ.ಡಿ ಹಾಗೂ ಮಾಹಿತಿ ಇರುವ ನಕಲು ಪ್ರತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸದರಿ ಪ್ರಕರಣವನ್ನು ಹೆಚ್ಚಿನ ಆಸಕ್ತಿ ವಹಿಸಿ ಸೂಕ್ತ ತನಿಖೆ ನಡೆಸಿ, ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಸದರಿ ಆರೋಪಿಗಳಿಗೆ ಕಾನೂನು ರೀತಿ ಕ್ರಮ ಜರುಗಿಸ ಬೇಕೆಂದು ಒತ್ತಾಯಿಸಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಂದ ಸಂಗ್ರಹವಾಗುವ ಹಣವನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಟಿ.ಎ.ವೀರಭದ್ರಯ್ಯ ಅವರು ಸಂಗ್ರಹವಾಗಿರುವ ಒಟ್ಟು 43293773,00 (ನಾಲ್ಕು ಕೋಟಿ ಮೂವತ್ತೆರಡು ಲಕ್ಷದ ತೊಂಭತ್ತ ಮೂರು ಸಾವಿರದ ಏಳುನೂರ ಎಪ್ಪತ್ತ ಮೂರು ರೂಗಳು) ಈ ಹಣವನ್ನು ಸಂಪೂರ್ಣವಾಗಿ ಜಿಲ್ಲಾ ಶಸ್ತ್ರಚಿಕಿತ್ಸಕರು ನಿರ್ವಹಿಸುತ್ತಿರುವ ಖಾತೆ ಸಂಖ್ಯೆ: 20001010002676 ಗೆ ಜಮಾ ಮಾಡದೆ, ಸುಮಾರು ಅರ್ಧ ಕೋಟಿಗಿಂತಲು ಹೆಚ್ಚು ರೂ. 5746647.00 ಈ ಹಣವನ್ನು ಜಮಾ ಮಾಡಿರುವುದಿಲ್ಲ, ಈ ಮೊತ್ತವು ಇ-ಆಸ್ಪತ್ರೆಯ ಅಂತರ್ಜಾಲದಲ್ಲಿನ ಮಾಹಿತಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ನಿರ್ವಹಿಸುತ್ತಿರುವ ಖಾತೆಯ ಪಾಸ್ ಶೀಟ್ ಅನ್ನು ಪರಿಶೀಲಿಸಿದಾಗ ಕಂಡುಬಂದಂತಹ ವ್ಯತ್ಯಾಸದ ಮೊತ್ತವನ್ನು ಡಾ. ವೀರಭದ್ರಯ್ಯ ಇವರು ಇವರ ವಯಕ್ತಿಕವಾಗಿ ಬಳಸಿಕೊಂಡಿದ್ದು ಕಂಡುಬಂದಿರುತ್ತದೆ. ಆದುದರಿಂದ ಇವರನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಿ ಆಸ್ಪತ್ರೆಗೆ ಬರುವ ಕಡುಬಡ ರೋಗಿಗಳ ಹಿತ ಹಾಗೂ ಆರೋಗ್ಯ ಕಾಪಾಡಲು ತಮ್ಮಲ್ಲಿ ವಿನಂತಿಸುತ್ತೇನೆ ಎಂದರು.
2018ರಿಂದ 2021ರವರೆಗೆ ಒಟ್ಟು 4.32 ಕೋಟಿ ಹಣ ಸಂಗ್ರಹವಾಗಿದ್ದು ಬ್ಯಾಂಕ್ ಖಾತೆಗೆ 3.75 ಕೋಟಿ ರೂಪಾಯಿಗಳನ್ನು ಮಾತ್ರ ಜಮಾ ಮಾಡಲಾಗಿದೆ. ಇನ್ನುಳಿದ 57.46 ಲಕ್ಷ ರೂ.ಹಣವನ್ನು ಆರೋಗ್ಯ ರಕ್ಷಾ ಸಮಿತಿಯ ಖಾತೆಗೆ ಜಮಾ ಮಾಡಿದೆ ದುರ್ಬಳಕೆ ಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಆಡಿಟ್ ಬಂದಿದ್ದು, ಆಡಿಟ್ ಬಂದಿರುವ ಸಿಬ್ಬಂದಿಗಳಿಗೆ ಹೇಗೆ ಕ್ರಾಸ್ ಮಾಡಬೇಕೆಂದು ತಿಳಿದಿರುವುದಿಲ್ಲ. ಇವರ ಅಸಹಾಯಕತೆಯನ್ನ ಬಳಸಿಕೊಂಡು ತುಮಕೂರು ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ. ವೀರಭದ್ರಯ್ಯ ಅವರು ಎಫ್.ಡಿ.ಎ ಹರೀಶ್ ಅವರಿಂದ ಆಡಿಟ್‍ಗೆ ಬಂದಿರುವ ಎಲ್ಲ ಸಿಬ್ಬಂದಿಗಳಿಗೆ ಊಟಕ್ಕೆಂದು ವೃಶಾಲಿ ಬಾರ್ & ರೆಸ್ಟೋರೆಂಟ್‍ಗೆ ಕರೆದುಕೊಂಡು ಹೋಗಿ ಟೈಮ್‍ಪಾಸ್ ಮಾಡಿಸಿ, ಎಲ್ಲರಿಗೂ ತಲಾ 20 ಸಾವಿರ ರೂಪಾಯಿಗಳ ಲಂಚವನ್ನು ಕೊಟ್ಟು, ಸಾಕ್ಷಿಗಳನ್ನು ಮುಚ್ಚಿಹಾಕಿಸಿರುತ್ತಾರೆ ಎಂದು ಆರೋಪಿಸಿದರು. ದಿನ ನಿತ್ಯ ಕಲೆಕ್ಟ್ ಆಗಿರುವ ಹಣದ ಪಟ್ಟಿ ಮತ್ತು ಬ್ಯಾಂಕ್ ಪಾಸ್ ಶೀಟ್ ಅನ್ನು ಪಡೆದು ಅದರಲ್ಲಿನ ಕ್ಯಾಶ್ ಡೆಪಾಸಿಟ್‍ನ್ನು ಪರಿಶೀಲಿಸದೆ ಆಡಿಟ್ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಆದ ಕಾರಣ ಬ್ಯಾಂಕ್ ಪಾಸ್ ಶೀಟ್ ಅನ್ನು ಪಡೆದು ಅದರಲ್ಲಿನ ಕ್ಯಾಶ್ ಡೆಪಾಸಿಟ್ ಅನ್ನು ಮಾತ್ರ ಪರಿಗಣಿಸಿ ದಿನ ನಿತ್ಯದ ಕಲೆಕ್ಷನ್ ಹಣವನ್ನು ಆ ದಿನಗಳ ಹಣ ಡೆಪಾಸಿಟ್ ಮಾಡಿರುವ ಮಾಹಿತಿಯನ್ನು ಕ್ರಾಸ್‍ಚೆಕ್ ಮಾಡಿದರೆ ಮಾತ್ರ ಇವರು ಹಣ ದೋಚಿರುವ ಮಾಹಿತಿ ಸಿಗುತ್ತದೆ. ಈ ಇಬ್ಬರ ಮೇಲೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಸರ್ಕಾರಿ ಕೆಲಸದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

(Visited 29 times, 1 visits today)