ತುಮಕೂರು:


ಸತತ ಮಳೆಯಿಂದ ಜಿಲ್ಲೆಯ ವಿವಿಧ ಕೆರೆ ಕಟ್ಟೆಗಳು, ಅಣೆಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯದಲ್ಲಿ ಸತತವಾಗಿ ಮುಂಗಾರು ಮಳೆಯಾಗುತ್ತಿರುವ ಹಾಗೆಯೇ ತುಮಕೂರು ಜಿಲ್ಲೆಯಲ್ಲಿಯೂ ನಿರಂತರವಾಗಿ ಮಳೆಯಾಗುತ್ತಿದ್ದು,ಜಿಲ್ಲೆಯಲ್ಲಿ ಹುಟ್ಟುವ ಶಿಂಸಾ,ಜಯಮಂಗಲಿ, ಗರುಡದ್ವಜ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳು ತುಂಬಿ ಹರಿದ್ದ ಪರಿಣಾಮ ನದಿಪಾತ್ರಗಳ ಕೆರೆ, ಕಟ್ಟೆಗಳು ಸಹ ತುಂಬಿ ಕೋಡಿ ಬಿದ್ದಿವೆ.ಶಿಂಷಾ ನದಿ ನೀರಿನಿಂದ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯ ಮಂಗಳ ಜಲಾಶಯ ತುಂಬಿದ್ದು, ಜಲಾಶಯದಿಂದ ನದಿ ಪಾತ್ರಗಳಿಗೆ ನೀರು ಬಿಡುಗಡೆ ಮಾಡಲಾಗಿದೆ.
ಮಳೆಯಿಂದ ಜನಜೀವನದ ಮೇಲಾಗಿರುವ ದುಷ್ಪರಿಣಾಮಗಳ ಅಧ್ಯಯನದಲ್ಲಿ ಸರಕಾರ ತೊಡಗಿದೆ.ಈ ಹಿನ್ನೆಲೆಯಲ್ಲಿ ಸರಕಾರದ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಇಂದು ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ,ಹೇಮಾವತಿ ನಾಲಾವಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವ ಗೋವಿಂದ ಎಂ.ಕಾರಜೋಳ,ಈ ವರ್ಷ ಜುಲೈ 30ರಿಂದ ಆಗಸ್ಟ್ 08ರವರೆಗೆ ಕಾವೇರಿ ಕೊಳ್ಳದಲ್ಲಿ ಆದ ಅತಿ ಹೆಚ್ಚು ಮಳೆಯಿಂದ ರಾಜ್ಯದಲ್ಲಿ ಸುಮಾರು 76 ಕೆರೆ,ಕಟ್ಟೆಗಳು ಒಡೆದು ಹೋಗಿದ್ದು,ಹಲವಾರು ರಸ್ತೆ,ನಾಲೆಗಳು,ಸೇತುವೆಗಳು ಕೊಚ್ಚಿ ಹೋಗಿವೆ.ಸರಕಾರಕ್ಕೆ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸುಮಾರು 90ಕೋಟಿ ನಷ್ಟವಾಗಿ ಎಂದು ವರದಿ ನೀಡಿದ್ದರು.ಈ ಹಿನ್ನೆಲೆಯಲ್ಲಿ ಸರಕಾರ ಆಗಿರುವ ಹಾನಿಯ ಅಂದಾಜು ಮಾಡುವ ಸಲುವಾಗಿ ಪ್ರವಾಸ ಕೈಗೊಂಡಿದ್ದೇನೆ.
ಇಂದು ಬೆಳಗ್ಗೆಯಿಂದ ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಹೊರಟು, ಸಂಜೆ ಇಲ್ಲಿಗೆ ಬಂದಿದ್ದೇನೆ.ಅಧಿಕಾರಿಗಳಿಗೆ ತುತ್ರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದ್ದೇನೆ.ತಾತ್ಕಾಲಿಕ ದುರಸ್ತಿಗಾಗಿ ತಕ್ಷಣವೇ 25-30 ಕೋಟಿ ರೂಗಳನ್ನು ಬಿಡುಗಡೆ ಮಾಡಲಿದ್ದೇನೆ. ಶಾಶ್ವತ ದುರಸ್ತಿಗೆ ಸರಕಾರಕ್ಕೆ ವಿಸ್ಕøತ ವರದಿ ಸಲ್ಲಿಸಲಿದ್ದೇನೆ. ನಿಯಮಾನುಸಾರ ಮಂಜೂರಾತಿ ಪಡೆದು, ಟೆಂಡರ್ ಕರೆದ ದುರಸ್ತಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾಳೆಯೇ ಈ ಸಂಬಂಧ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬಿಜೆಪಿ ಮುಖಂಡ ಕೃಷ್ಣಕುಮಾರ್, ನಾಗಮಂಗಲ ಶಾಸಕ ಸುರೇಶಗೌಡ, ಹೇಮಾವತಿ ನಾಲಾವಲಯ ಮುಖ್ಯ ಇಂಜಿನಿಯರ್ ವರದಯ್ಯ, ಕಾರ್ಯಾಪಾಲಕ ಇಂಜಿನಿಯರ್‍ಗಳಾದ ಕೃಷ್ಣಪ್ಪ, ಮೋಹನ್‍ಕುಮಾರ್, ಎಇಇ ಮುರುಳಿ ಉಪಸ್ಥಿತರಿದ್ದರು.

(Visited 5 times, 1 visits today)