ತುಮಕೂರು:


ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರುವ ಫ್ಲೆಕ್ಸ್‍ನಲ್ಲಿದ್ದ ವೀರ ಸಾವರ್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ನಗರದ ಅಶೋಕ ರಸ್ತೆಯ ಎಂಪ್ರೆಸ್ ಕಾಲೇಜು ಮುಂಭಾಗ ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಅವರು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುವ ಫ್ಲೆಕ್ಸ್ ಅಳವಡಿಸಿದ್ದರು.
ಕಿಡಿಗೇಡಿಗಳು ಸಾವರ್ಕರ್ ಭಾವಚಿತ್ರವಿರುವ ಫ್ಲೆಕ್ಸನ್ನು ಹರಿದು ಹಾಕಿ ವಿಕೃತಿಯನ್ನು ಮೆರೆದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಘಟನೆಯಿಂದ ಪ್ರೇರೇಪಿತಗೊಂಡು ತುಮಕೂರು ನಗರದಲ್ಲಿಯೂ ಕೂಡ ಕಿಡಿಗೇಡಿಗಳು ವೀರ ಸಾವರ್ಕರ್ ಫೆÇೀಟೋ ಹರಿದು ಹಾಕಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾಲ್ಕು ದಿನಗಳ ಹಿಂದೆ ಫ್ಲೆಕ್ಸ್ ಹಾಕಲಾಗಿದ್ದು, ಅಂದಿನಿಂದ ಎಲ್ಲ ಫ್ಲೆಕ್ಸ್‍ಗಳು ಸುಸ್ಥಿತಿಯಲ್ಲಿದ್ದವು. ಆದರೆ ಸ್ವಾತಂತ್ರ್ಯ ದಿನಾಚರಣೆ ದಿನದ ರಾತ್ರಿ ಕಿಡಿಗೇಡಿಗಳು ವೀರ ಸಾರ್ವಕರ್ ಭಾವಚಿತ್ರ ಇರುವ ಫ್ಲೆಕ್ಸ್ ಅನ್ನು ಹರಿದು ಹಾಕಿದ್ದಾರೆ. ಈ ಕುರಿತು ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ವಿ.ಡಿ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳ ಕೃತ್ಯದಿಂದ ಜನತೆ ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಎಂಪ್ರೆಸ್ ಕಾಲೇಜು ಎದುರು ಫ್ಲೆಕ್ಸ್‍ಗಳನ್ನು ಹಾಕಲಾಗಿತ್ತು. ಈ ಪೈಕಿ ಸಾವರ್ಕರ್ ಅವರ ಭಾವಚಿತ್ರವಿರುವ ಫ್ಲೆಕ್ಸ್ ಒಂದರಲ್ಲಿ ಸಾವರ್ಕರ್ ಫೆÇೀಟೋವನ್ನು ಯಾರೋ ಕಿಡಿಗೇಡಿಗಳು ಕತ್ತರಿಸಿದ್ದಾರೆ.
ಮಂಗಳವಾರ ಬೆಳಗ್ಗೆ ನಮಗೆ ಈ ಬಗ್ಗೆ ಮಾಹಿತಿ ಬಂದಿದೆ. ಈ ಫ್ಲೆಕ್ಸ್‍ಗಳನ್ನು ಪಾಲಿಕೆಯವರು ತೆರವು ಮಾಡಿದ್ದು, ನಮ್ಮ ಗಮನಕ್ಕೆ ತಂದಿದ್ದಾರೆ ಎಂದರು.
ಕಿಡಿಗೇಡಿಗಳು ಜನರನ್ನು ಪ್ರಚೋದಿಸಲು ಈ ಕೃತ್ಯವನ್ನು ಎಸಗಿದ್ದಾರೆ. ಇದಕ್ಕೆ ಜನರು ಪ್ರಚೋದನೆಗೊಂಡು ಪ್ರತಿಕ್ರಿಯೆ ನೀಡಿದರೆ ಅವರ ಉದ್ದೇಶ ಈಡೇರುತ್ತದೆ. ಹಾಗಾಗಬಾರದು. ಈಗಾಗಲೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ.
ಯಾರು ಮಾಡಿದ್ದಾರೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಜನರು ಶಾಂತಿಯುತವಾಗಿರಬೇಕು, ಯಾವುದೇ ತರಹರ ಪ್ರಚೋದನೆಗೆ ಒಳಗಾಗಬಾರದು, ಜನರ ನಿರೀಕ್ಷೆಯಂತೆ ಪೆÇಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ನೀಡಿದರು.

(Visited 1 times, 1 visits today)