ತುಮಕೂರು:


ಜಿಲ್ಲಾ ಪಂಚಾಯಿತಿ ಸಿಇಓ ಡಾ.ವಿದ್ಯಾಕುಮಾರಿ ಶಿರಾ ತಾಲೂಕು ಬರಗೂರು ಗ್ರಾಮ ಪಂಚಾಯಿತಿ ದಿಢೀರ್ ಭೇಟಿ ನೀಡಿ ಅಮೃತ ಯೋಜನೆ ಹಾಗೂ ಇನ್ನಿತರ ಯೋಜನೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಮಂಗಳವಾರ ಬರಗೂರು ಗ್ರಾಮಪಂಚಾಯಿತಿಗೆ ಭೇಟಿ ನೀಡಿ, ಕುಡಿಯುವ ನೀರು, ಚರಂಡಿ, ಕಸವಿಲೇವಾರಿ ಘಟಕ, ಡಿಜಿಟಲ್ ಲೈಬ್ರರಿ, ಅಮೃತ ಪಾರ್ಕು, ಶಾಲಾ ಕಾಂಪೌಂಡ್, ಆಟದ ಮೈದಾನ, ಅಡುಗೆ ಕೊಠಡಿಗಳು, ಶೌಚಾಲಯಗಳನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಅಮೃತ ಯೋಜನೆ ಅಡಿ ನೀಡಲಾಗಿರುವ ಕಾಮಗಾರಿಗಳನ್ನು ಚನ್ನಾಗಿಯೇ ನಿರ್ವಹಿಸಿದ್ದಾರೆ.
ಆದರೂ ಕೆಲವು ಸಲಹೆಗಳನ್ನು ನೀಡಿದ್ದೇನೆ.ಇದರ ಜೊತೆಗೆ ಜಿಲ್ಲಾ ಪಂಚಾಯಿತಿಯ ಇತರೆ ಕಾರ್ಯಗಳನ್ನು ಸದರಿ ಗ್ರಾಮಪಂಚಾಯಿತಿ ಯಲ್ಲಿ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಪ್ರಶಂಶೆ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ಶಿರಾ ತಾಲೂಕು ಬರಗೂರು ಗ್ರಾಮಪಂಚಾಯಿತಿಯನ್ನು ಅಮೃತ ಯೋಜನೆಯಡಿ ಆಯ್ಕೆ ಮಾಡಲಾಗಿದ್ದು,ಗ್ರಾಪಂ. ವ್ಯಾಪ್ತಿಯ ಜನರಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಿದ್ದಾರೆ ಎಂದರು.
ಅಮೃತ ಯೋಜನೆಯಡಿ ಒಂದು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೂ ಅಗತ್ಯವಿರುದ್ದ ರಸ್ತೆ, ಚರಂಡಿ, ಕುಡಿಯುವ ನೀರು,ಶೌಚಾಲಯ, ಮಕ್ಕಳಿಗೆ ಅಗತ್ಯವಿರುದ್ದ ಶಾಲಾ ಕಾಂಪೌಂಡ್,ಅಡುಗೆ ಕೋಣೆ,ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಲೋನಿಯ ಸಮಗ್ರ ಅಭಿವೃದ್ದಿಗೆ ಕಾಮಗಾರಿಗಳನ್ನು ನೀಡಲಾಗಿದೆ.ಬರಗೂರು ಗ್ರಾಮಪಂಚಾಯಿತಿಯಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಅಧಿಕಾರಿಗಳು ಮತ್ತು ಚುನಾಯಿತ ಮಂಡಳಿ ಸೇರಿ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ ಎಂದರು.
ಈ ವೇಳೆ ಬರಗೂರು ಗ್ರಾಮಪಂಚಾಯಿತಿ ಅಧ್ಯಕ್ಷ ಟಿ.ರವಿಕುಮಾರ್, ಉಪಾಧ್ಯಕ್ಷರಾದ ಯಶೋಧ ದೇವರಾಜು, ಸದಸ್ಯರಾದ ಲೋಕೇಶ್ ಹಾರೋಗೆರೆ, ಕಂಬಿ ಮಂಜು, ಪಂಕಜಾಕ್ಷಿ ಜಯರಾಮಯ್ಯ, ಬಾಲು, ಸಿದ್ದಪ್ಪ, ತಾಲೂಕು ಪಂಚಾಯಿತಿ ಇ.ಓ ಆನಂತರಾಜು, ಎಡಿ ವೆಂಕಟೇಶ್, ಪಿಡಿಓ ನಾಗರಾಜಯ್ಯ, ಇಂಜಿನಿಯರ್ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)