ಗುಬ್ಬಿ:
ಕಾಂಗ್ರೆಸ್ ಪಕ್ಷವು ಭ್ರಮೆಯಿಂದ ಹೊರಬರಬೇಕು ಒಂದು ಮನೆ ಮೂರು ಬಾಗಿಲಂತಾಗಿರುವ ಕಾಂಗ್ರೆಸ್ ಪಕ್ಷವು ಇನ್ನು ಮುಂದಾದರು ಪಾಠ ಕಲಿಯಬೇಕು ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದರು.
ಚೇಳೂರು ಹೇಮಾವತಿ ಆವರಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕಾಂಗ್ರೆಸ್ ಪಕ್ಷವು ಹೊಡೆದಾಡುತ್ತಿದ್ದು ಒಂದೆಡೆ ಡಿಕೆಶಿ ಆದರೆ ಇನ್ನೊಂದೆಡೆ ಸಿದ್ದರಾಮಯ್ಯನವರ ಜಟಾಪಟಿ ಹೆಚ್ಚಾಗುತ್ತಿದ್ದು ಇದರಿಂದ ಕರ್ನಾಟಕದ ಜನತೆ ಇವರ ಆಟಗಳನ್ನು ನೋಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷವು ಅಧಿಕ ಶಾಸಕರಿಂದ ಪೂರ್ಣ ಪ್ರಮಾಣದ ಭಾರತೀಯ ಜನತಾ ಪಕ್ಷವು ಅಧಿಕಾರ ಹಿಡಿಯುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಹತಾಶ ಮನೋಭಾವದಿಂದ ಬೇರೆ ಬೇರೆ ರೀತಿಯ ಸಂದರ್ಭಗಳನ್ನು ಸೃಷ್ಟಿಸುತ್ತಿದ್ದು ಮುಖ್ಯಮಂತ್ರಿ ಗಾದಿಗೆಗೆ ಹೊಡೆದಾಟ ನಡೆಸುತ್ತಿದ್ದು ಇಡೀ ದೇಶದಲ್ಲಿ ಮೋದಿಜಿಗೆ ದೇಶದ ಅಧಿಕಾರ ನೀಡಲು 301 ಸಂಸದರನ್ನು ಆಯ್ಕೆ ಮಾಡಿ ಕಳಿಸಿರುವುದು ಮೋದಿಯವರ ಕಾರ್ಯಕ್ಕೆ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿರುವುದು ಕಾಂಗ್ರೆಸ್ ಗೆ ಕಣ್ಣು ಉರಿಯಾಗಿದ್ದು ಹಾಗಾಗಿ ರಾಜ್ಯ ಕಾಂಗ್ರೆಸ್ ನವರು ಕೆಲವು ಗೊಂದಲ ಸೃಷ್ಟಿಸಿ ಗೊಂದ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಮನಸ್ಸಿನ ಸ್ಥಿತಿಯನ್ನು ತಿಳಿಸುತ್ತದೆ.
ಸಾವರ್ಕರ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿನವರಿಗೆ ಇಲ್ಲ ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತ ಮಹನೀಯರಲ್ಲಿ ಪ್ರಥಮ ಸ್ಥಾನವನ್ನು ಸಾವರ್ಕರ್ ಅವರು ಕಾಂಗ್ರೆಸ್ ನವರ ಕಣ್ಣಿಗೆ ಕೇವಲ ಗಾಂಧಿ ಕುಟುಂಬ ಕಾಣುತ್ತಿದೆ. ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯು ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಿರುವ ಕೇವಲ ದಲಿತ ಮುಖ್ಯಮಂತ್ರಿ ಅಲ್ಲ ಕರ್ನಾಟಕದ ಆರುವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಆಗಿರುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದ್ದಕ್ಕಿದ್ದಾಗೆ ಜ್ಞಾನೋದಯವಾಗಿ ಮಠಗಳನ್ನು ಸುತ್ತುತ್ತಿರುವುದು ಅವರ ಹತಾಶೆಗೆ ಕಾರಣವಾಗಿದೆ. ಮಠಾಧೀಶರುಗಳನ್ನು ಓಲೈಸುವ ನಿಟ್ಟಿನಲ್ಲಿ ಈ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿರುವುದು ರಾಜ್ಯದ ಜನತೆಗೆ ತಿಳಿದ ವಿಷಯವಾಗಿದೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಜಿ.ಎಸ್.ಬಸವರಾಜು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಬಿ. ಚಂದ್ರಶೇಖರ್ ಬಾಬು, ಬಿಜೆಪಿ ಮುಖಂಡರಾದ ಎಸ್. ಡಿ.ದಿಲೀಪ್ ಕುಮಾರ್, ಎನ್.ಸಿ.ಪ್ರಕಾಶ್, ಹೀತೇಶ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಇನ್ನಿತರರು ಭಾಗವಹಿಸಿದ್ದರು.