ತುಮಕೂರು:
ಸೇತುವೆಯಾಗಿ ಜಯಕರ್ನಾಟಕ ಜನಪರ ವೇದಿಕೆ ಕೆಲಸ
ಮಾಡುತ್ತಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ
ಬೆಂಗಳೂರು ನಗರ ಅಧ್ಯಕ್ಷ ಹಾಗೂ ತುಮಕೂರು ಜಿಲ್ಲಾ
ವೀಕ್ಷಕ ಜೆ.ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಜಯಕರ್ನಾಟಕ ಜನಪರ
ವೇದಿಕೆ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಸಂಘಟನೆಯ
ಯುವಸಂಸ್ಥಾಪಕ ಅಧ್ಯಕ್ಷರು ಪರಿಸರವಾದಿಗಳಾದ
ಬಿ.ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನ ಮತ್ತು
ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ ಅವರ ನೇತೃತ್ವದಲ್ಲಿ
ಹಲವಾರು ಸಮಾಜಮುಖಿ ಕೆಲಸಗಳು, ಪರಿಸರ ಕಾಳಜಿ
ಇಟ್ಟುಕೊಂಡು ರಾಜ್ಯಾದ್ಯಂತ ಸಂಘಟನೆ ಕೆಲಸ ಮಾಡುತ್ತಿದೆ
ಎಂದರು.
ನಮ್ಮ ಸಂಘಟನೆ ವತಿಯಿಂದ ಹಲವಾರು ಕೆರೆಗಳ ಅಭಿವೃದ್ಧಿ
ಮಾಡಲಾಗಿದೆ. ಕೆರೆಗಳನ್ನು ದತ್ತು ಪಡೆದು ಸಸಿ,
ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗಿದೆ. 75ನೇ ಸ್ವಾತಂತ್ರ್ಯದ
ಅಮೃತಮಹೋತ್ಸವದ ಅಂಗವಾಗಿ ಅರಣ್ಯ ಇಲಾಖೆಯವರು
ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರ
ಮತ್ತು ಅರಣ್ಯ ಇಲಾಖೆಯ ಜೊತೆಗೂಡಿ ಜಯಕರ್ನಾಟಕ ಜನಪರ
ವೇದಿಕೆ ಕೆ.ಆರ್.ಪುರ ಮತ್ತು ಮಹದೇವಪುರ ವಿಧಾನಸಭಾ
ಕ್ಷೇತ್ರದ ಸಂಡೂರು ಮತ್ತು ಜ್ಯೋತಿಪುರ ಅರಣ್ಯ ಇಲಾಖೆ
ಪ್ರದೇಶದಲ್ಲಿ 500 ಸಸಿಗಳನ್ನು ನೆಡಲಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ
ಎಸ್.ಎಸ್.ಘಾಟ್‍ನಲ್ಲೂ ಸಹ ಅರಣ್ಯ ಇಲಾಖೆ ಜೊತೆಯಲ್ಲಿ 1500
ಗಿಡಗಳನ್ನು ನೆಟ್ಟು ಪರಿಸರ ಉಳಿಸುವಂತಹ
ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸರ್ಕಾರಿ ಜಾಗಗಳು,
ಗುಂಡುತೋಪು, ಸರ್ಕಾರಿ ಗೋಮಾಳ, ಕೆರೆ ಅಂಗಳ, ಬಫರ್
ಜೋನ್ಸ್ , ಕೆರೆ, ಕುಂಟೆಗಳು, ಗೋ ಕಟ್ಟೆಗಳು,
ಈತರಹದ ಸರ್ಕಾರಿ ಜಾಗಗಳನ್ನು ಎಲ್ಲಾ ಭೂ ಮಾಫಿಯಾದವರು
ಕಬಳಿಸಿ ಅವರು ಲೇಔಟ್ ಮಾಡಿ ಮಾರಾಟ ಮಾಡುವಂತಹ ಕೆಲಸ
ಮಾಡುತ್ತಿದ್ದಾರೆ ಅದು ಆಗಬಾರದು. ಸರ್ಕಾರಿ ಜಾಗ ಎಲ್ಲೇ
ಇದ್ದರೂ ನಮ್ಮ ಸಂಘಟನೆಗೆ ಕೊಡಿ ಗಿಡ ಹಾಕಿ ಅಭಿವೃದ್ಧಿ ಪಡಿಸಿ
ಮತ್ತೆ ನಾವು ಸರ್ಕಾರಕ್ಕೆ ವಾಪಸ್ ಕೊಡುತ್ತೇವೆ ಎಂದು ರಾಜ್ಯದ
ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದೇವೆ ಎಂದು
ಹೇಳಿದರು.
ಈಗಾಗಲೇ ಸುಮಾರು 4 ಕೆರೆಗಳನ್ನು ದತ್ತು
ತೆಗೆದುಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ತುಮಕೂರು
ಜಿಲ್ಲೆಯಲ್ಲೂ ಸಹ ಎಲ್ಲೇ ಸಕಾರಿ ಜಾಗಗಗಳಿದ್ದರೂ ಆ
ಜಾಗಗಳನ್ನು ನಮಗೆ ಕೊಡಿ ನಮ್ಮ ಸಂಘಟನೆಯಿಂದ
ಅಭಿವೃದ್ಧಿ ಪಡಿಸಿ ಮತ್ತೆ ನಿಮಗೆ ವಾಪಸ್ ಕೊಡುತ್ತೇವೆ ಎಂದು
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಮೇಲೆ
ಲೈಂಗಿಕ ದೌರ್ಜನ್ಯ ತಡೆಗೆ ನಮ್ಮ ಸಂಘಟನೆ ಮೂಲಕ ಎಲ್ಲಾ
ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ
ಕೊಡುವುದರ ಮೂಲಕ ಸರ್ಕಾರದ ಬಾಗಿಲನ್ನು ತಟ್ಟಿದ್ದೇವೆ.
ಬೆಳಗಾವಿಯಲ್ಲಿ ರಾಷ್ಟ್ರಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು
ಸಂಘಟನೆಗಳು ನಡೆಸಿದ ಬೆಂಗಳೂರು ಬಂದ್‍ಗೆ ಕಿವಿಗೊಡದೆ
ಬೆಂಗಳೂರಿನಿಂದ ದೆಹಲಿ ಚಲೋ ಕಾರ್ಯಕ್ರಮ ಆಯೋಜನೆ
ಮಾಡಿ ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ನಡೆಸಿ ಅಲ್ಲಿನ
ಗೃಹಮಂತ್ರಿಗಳು, ಪ್ರಧಾನಮಂತ್ರಿಗಳ ಕಚೇರಿಗೆ ಮನವಿ
ಕೊಡಲಾಗಿತ್ತು ಎಂದರು.
ಮಹಿಳೆಯರಿಗೆ ಮತ್ತು ದೀನದಲಿತರಿಗೆ ಶೋಷಣೆಯಾದಾಗ
ಧ್ವನಿ ಎತ್ತುವಂತಹ ಕೆಲಸವನ್ನು ನಮ್ಮ ಸಂಘಟನೆ
ಮಾಡಿಕೊಂಡು ಬರುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಇಂದು
ವಿಶೇಷ ಸಭೆಯನ್ನು ನಡೆಸಲಾಗುತ್ತಿದೆ. ನೂತನ ಜಿಲ್ಲಾ ಘಟಕ
ಮತ್ತು ಎಲ್ಲಾ ತಾಲ್ಲೂಕು ಘಟಕಗಳ ಪುನರ್ ರಚನೆ
ಮಾಡುವ ಸಂಬಂಧ ಇಂದು ವಿಶೇಷ ಸಭೆಯಲ್ಲಿ
ತೀರ್ಮಾನಿಸಲಾಗುತ್ತಿದೆ ಎಂದರು.
ಶಾಲೆಗಳಿಗೆ ಸರಿಯಾಗಿ ಹೋಗದ ಶಿಕ್ಷಕರು ಮತ್ತು
ಇಲಾಖೆಗಳಿಗೆ ಗೈರಾಗುವ ಅಧಿಕಾರಿಗಳನ್ನು ಸಸ್ಪೆಂಡ್
ಮಾಡಿಸುವಂತಹ ಕೆಲಸ ನಮ್ಮ ಸಂಘಟನೆ ಮಾಡಿದೆ ಎಂದರು.
ಸಮಾಜದಲ್ಲಿ ಒಳ್ಳೆಯವರು ಸುಮ್ಮನೆ ಕುಳಿತಿರುವುದರಿಂದ
ಕೆಟ್ಟವರು ಹೆಚ್ಚಾಗುತ್ತಿದ್ದಾರೆ. ಒಳ್ಳೆಯವರು ಧ್ವನಿ ಎತ್ತಿದಾಗ
ಮಾತ್ರ ಕೆಟ್ಟವರು ಸುಮ್ಮನಾಗುತ್ತಾರೆ. ಒಳ್ಳೆಯವರು ಧ್ವನಿ
ಎತ್ತದೆ ಸುಮ್ಮನೆ ಕುಳಿತಿರುವುದರಿಂದ ಕೆಟ್ಟವರು ಹೆಚ್ಚಾಗಲು
ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಪ್ರಧಾನ
ಕಾರ್ಯದರ್ಶಿ ಸೇವ ರಾಧಾಕೃಷ್ಣ, ರಾಜ್ಯ ಸಂಚಾಲಕ ಪ್ರಕಾಶ್‍ಗೌಡ,
ರಾಜ್ಯ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷ
ಕೆ.ಎನ್.ಜಗದೀಶ್, ಬೆಂಗಳೂರು ನಗರ ಸಂಚಾಲಕ ರಾಹುಲ್
ಆಚಾರ್ಯ, ನೀಲಕಂಠೇಗೌಡ, ಅನಿಲ್ ಶೆಟ್ಟಿ, ಉಮೇಶ್‍ಪೂಂಜಾ, ಜಿಲ್ಲಾ
ಪದಾಧಿಕಾರಿಗಳಾದ ಮಂಜುನಾಥ್, ಶ್ರೀಧರ್, ಜಯಪ್ರಕಾಶ್,
ಬಿ.ಟಿ.ಕುಮಾರ್, ಬಸವರಾಜ್, ರಾಘವೇಂದ್ರ, ದಯಾನಂದ್,
ಯೂನಸ್, ಸಚಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.