ಶಿರಾ:


ಗುರುವಾರ ಮುಂಜಾನೆ ಸಮಯದಲ್ಲಿ ಕ್ರೂಷರ್ ವಾಹನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂಬತ್ತು ಜನ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಬಾಳೇನಹಳ್ಳಿ ಗೇಟ್ ಬಳಿ ನಡೆದಿದೆ.
ರಾಯಚೂರು, ಸಿಂಧನೂರು ಮತ್ತು ಮಾನ್ವಿ ಮೂಲದ ಜನರು ಬೆಂಗಳೂರಿಗೆ ಕೂಲಿ ಅರಸಿ ಕ್ರೂಷರ್ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕಾರ್ಮಿಕರು ಪ್ರಯಾಣ ಮಾಡುತ್ತಿದ್ದ ವಾಹನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂಬತ್ತು ಜನ ಸಾವನ್ನಪ್ಪಿದ್ದು, 14 ಮಂದಿ ತೀವ್ರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯಲ್ಲಿ ಮೃತಪಟ್ಟವರಲ್ಲಿ ನಾಲ್ಕು ಗಂಡು, ಒಂದು ಮಗು ಹಾಗೂ ನಾಲ್ವರು ಹೆಂಗಸರು ಹಸುನೀಗಿದ್ದಾರೆ.
ಇನ್ನು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಹಾಗೂ ಅಡಿಷನಲ್ ಎಸ್.ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,
ಕಳ್ಳಂಬೆಳ್ಳ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹಾಗೂ ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ದುಡಿಯಲು ಹೋಗುತ್ತಿದ್ದವರ ಕ್ರೂಷರ್‍ಗೆ ಲಾರಿ ಮುಖಾಮುಖಿ ಡಿಕ್ಕಿಯಾಗಿ ಭೀಕರ ದುರಂತ ನಡೆದಿದೆ. ಅಪಘಾತ ನಡೆದಾಗ ತೀವ್ರ ಗಾಯಗೊಂಡು ನರಳಾಡುತ್ತಿದ್ದ ವೇಳೆ ಪಾರು ಮಾಡುವಂತೆ ಜೋರಾಗಿ ಕೂಗುತ್ತಿದ್ದೆವು. ಸ್ಥಳದಲ್ಲಿ ಯಾರು ಇರಲಿಲ್ಲ, ನಂತರ ಪೆÇಲೀಸರು ಬಂದು ನಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿದರು’ ಎಂದು ಗಾಯಾಳು ಒಬ್ಬರು ತಿಳಿಸಿದ್ದಾರೆ.
ಮೃತರನ್ನು ಕಷ್ಣಪ್ಪ, ಸುಜಾತ, ಲಕ್ಷ್ಮಿ, ವಿನೋದ, ಬಸಮ್ಮ ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಇನ್ನೂ ಗಾಯಗೊಂಡವರನ್ನು
ದುರ್ಗಮ್ಮ, ಬಾಲಾಜಿ, ಉಮೇಶ್, ಯಲ್ಲಮ್ಮ, ಅನಿಲ್, ದೇವರಾಜ್, ಮೌನಿಕ, ನಾಗಮ್ಮ, ನಾಗಪ್ಪ, ವಸಂತ, ವೈಶಾಲಿ, ಲಿಲಿತ ಎಂದು ಗುರುತಿಸಲಾಗಿದೆ.
ಇನ್ನುಳಿದವರ ಹೆಸರನ್ನು ಪತ್ತೆಹಚ್ಚಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ 14 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಿ ಕಾರ್ಮಿಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೃತಪಟ್ಟ 9 ಮಂದಿಯಲ್ಲಿ 6 ಜನರು ನೇತ್ರದಾನ ಮಾಡಲು ಮುಂದಾಗಿದ್ದಾರೆ. ನೋವಿನ ಮಧ್ಯೆಯೂ ಕುಟುಂಬಸ್ಥರು ಮನೆ ಮಕ್ಕಳ ನೇತ್ರದಾನ ಮಾಡಿದ್ದಾರೆ. ಮೃತಪಟ್ಟ ಚಾಲಕ ಕೃಷ್ಣ, ಸಿದ್ದಯ್ಯಸ್ವಾಮಿ, ನಿಂಗಣ್ಣ, ಮೀನಾಕ್ಷಿ, ಸುಜಾತಾ, ಪ್ರಭುಸ್ವಾಮಿ ಎಂಬವರ ನೇತ್ರದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಶಿರಾ ತಾಲೂಕಾಸ್ಪತ್ರೆ ಮುಂದೆ ಮೃತರ ಸಂಬಂಧಿಕರ ಗೋಳಾಟ ಹೇಳತೀರದಂತಾಗಿದೆ.
ಈ ಸಂಬಂಧ ಶಿರಾ ತಹಶಿಲ್ದಾರ್ ಮಮತಾ ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಕುಟುಂಬಸ್ಥರು ಸಾರ್ಥಕ ಕೆಲಸ ಮಾಡಿದ್ದಾರೆ. ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. 6 ಜನರ ಕುಟುಂಬಸ್ಥರು ಸ್ವ-ಇಚ್ಛೆಯಿಂದ ಕಣ್ಣು ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬರ ಬಾಳಲ್ಲಿ ಬೆಳಕಾಗಲು ಬಯಸಿದ್ದಾರೆ. ಆ ಕುಟುಂಬಕ್ಕೆ ಒಳ್ಳೆಯದಾಗಲಿ. ಅಲ್ಲದೆ ದುಃಖ ಸಹಿಸುವ ಶಕ್ತಿ ಬರಲಿ ಎಂದು ತಿಳಿಸಿದ್ದಾರೆ
ಇತ್ತ ನೇತ್ರದಾನದ ಬಳಿಕ ಮೃತ ಚಾಲಕ ಕೃಷ್ಣನ ತಂದೆ ತಿಪ್ಪಾರೆಡ್ಡಿ ಮಾತನಾಡಿ, ನನ್ನ ಮಗನನ್ನು ಬೇರೆಯವರ ಕಣ್ಣಿನ ಮೂಲಕ ನೋಡಬೇಕು. ಹಾಗಾಗಿ ಕಣ್ಣು ದಾನ ಮಾಡಿದ್ದೇವೆ. ಕಣ್ಣು ದಾನದ ಮೂಲಕ ಮಗ ಜೀವಂತ ಆಗಿರಬೇಕು ಎಂದು ಬಯಸಿದ್ದೇವೆ. ಹಾಗಾಗಿ ಸ್ವ-ಇಚ್ಛೆಯಿಂದ ನೇತ್ರದಾನ ಮಾಡಿಸಿದ್ದೇವೆ ಎಂದು ಹೇಳಿದರು. ಸದ್ಯ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಒಟ್ಟು 4 ಅಂಬುಲೆನ್ಸ್‍ನಲ್ಲಿ ಮೃತದೇಹವನ್ನು ರವಾನಿಸಲಾಗಿದೆ.

(Visited 1 times, 1 visits today)