ತುಮಕೂರು:
ಜೋತಿಗಣೇಶ್ ಅಭಿಮಾನಿ ಬಳಗ, ತುಮಕೂರು, ಡಾ. ರೆಡ್ಡಿಸ್ ಫೌಂಡೇಶನ್ ಹೈದ್ರಾಬಾದ್ ಹಾಗೂ ಟೀಮ್ ಲೀಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಆ. 28 ರಂದು ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಸದಸ್ಯ ಹಾಗೂ ಜಿ.ಬಿ. ಜೋತಿಗಣೇಶ್ ಅಭಿಮಾನಿ ಬಳಗದ ಹೆಚ್. ಮಲ್ಲಿಕಾರ್ಜುನಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ಹಾಗೂ ಜಿಲ್ಲೆಯ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಆ. 28 ರ ಭಾನುವಾರ ನಡೆಯುವ ಉಚಿತ ಉದ್ಯೋಗ ಮೇಳದಲ್ಲಿ ಟೊಯೋಟಾ, ಮಹೀಂದ್ರ, ಕಾರ್ಗಿಲ್ ಸೇರಿದಂತೆ 25 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, 2000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ, ಐಟಿಐ, ಡಿಪೆÇ್ಲೀಮಾ, ಇಂಜಿನಿಯರಿಂಗ್, ಬಿ ಫಾರ್ಮ, ಡಿ ಫಾರ್ಮ ಕಲಿತಿರುವ ನಿರುದ್ಯೋಗಿ ಯುವಕ, ಯುವತಿಯರು, ಅಂಗವಿಕಲರು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದೆ ಎಂದರು.
ಟೀಮ್ ಲೀಸ್ ಬೆಂಗಳೂರು ಸಂಸ್ಥೆಯ ಅರುಣ್ ಕುಮಾರ್ ಮಾತನಾಡಿ, ಕಳೆದ 15 ವರ್ಷಗಳಿಂದ ಯುವಜನರಿಗೆ ಉದ್ಯೋಗ ವಿನಿಮಯದಲ್ಲಿ ತೊಡಗಿರುವ ಸಂಸ್ಥೆ ನಮ್ಮದು. ಇದುವರೆಗೆ 7 ಲಕ್ಷ ಜನರಿಗೆ ವಿವಿಧ ರೀತಿಯ ಉದ್ಯೋಗ ದೊರಕಿಸುತ್ತಾ ಬಂದಿದೆ. ಪ್ರಸ್ತುತ ಆಗಸ್ಟ್ 28 ರಂದು ನಡೆಯುವ ಉದ್ಯೋಗ ಮೇಳದಲ್ಲಿ 25 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುತ್ತಿವೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕೆಂಬ ಉದ್ದೇಶ ಹೊಂದಿದೆ. ಎರಡನೇ ಹಂತದ ನಗರವಾಗಿರುವ ತುಮಕೂರಿನ ನಿರುದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೇಳ ಆಯೋಜಿಸಲಾಗಿದೆ. ಯುವಜನರು ಈ ಉದ್ಯೋಗ ಮೇಳವನ್ನು ಹೆಚ್ಚಿನದಾಗಿ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಹೈದರಾಬಾದ್ ಡಾ.ರೆಡ್ಡಿಸ್ ಫೌಂಡೇಷನ್‍ನ ಪ್ರದೀಪ್ ಕೆ.ಎನ್. ಮಾತನಾಡಿ, 2001 ರಲ್ಲಿ ಆರಂಭವಾದ ನಮ್ಮ ಫೌಂಡೇಷನ್ 80 ರಾಷ್ಟ್ರಗಳಲ್ಲಿ ತನ್ನ ಶಾಖೆ ಹೊಂದಿದ್ದು, ಭಾರತದಲ್ಲಿ 102 ಶಾಖೆಗಳನ್ನು ಹೊಂದಿದೆ. ತನ್ನ ಸಿ.ಎಸ್.ಆರ್ ನಿಧಿಯನ್ನು ಬಳಸಿಕೊಂಡು ಯುವಜನರಿಗೆ ಅವರ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ ತರಬೇತಿ ನೀಡಿ ಉದ್ಯೋಗ ದೊರಕಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ತುಮಕೂರು ಶಾಖೆಯಲ್ಲಿ ತಿಂಗಳಿಗೆ ಮೂವತ್ತು ಜನರಂತೆ ತರಬೇತಿ ನೀಡಿ ಉದ್ಯೋಗ ದೊರಕಿಸಲಾಗಿದೆ. ಆಗಸ್ಟ್ 28 ರ ಉದ್ಯೋಗ ಮೇಳದಲ್ಲಿ ಸಂಸ್ಥೆ ಸಕ್ರಿಯವಾಗಿ ಪಾಲ್ಗೊಂಡು ಯುವಜನರ ಪರವಾಗಿ ಕೆಲಸ ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಬಿ.ಜೋತಿಗಣೇಶ್ ಅಭಿಮಾನಿ ಬಳಗದ ಶಂಕರ್, ಸತ್ಯಮಂಗಲ ಜಗದೀಶ್, ಸ್ಮಾರ್ಟ್ ತುಮಕೂರು ಜಗದೀಶ್, ವೇದಮೂರ್ತಿ, ಇಂದ್ರಕುಮಾರ್, ಪ್ರೀತಂ ಜೈನ್ ಮತ್ತಿತರರು ಉಪಸ್ಥಿತರಿದ್ದರು.