ಮಧುಗಿರಿ :-

ಪಟ್ಟಣಕ್ಕೆ ಹೊಂದಿಕೊಂಡಿರುವ ಸಿದ್ದಾಪುರ ಗೇಟ್ ನಲ್ಲಿ ನೆಲೆಸಿರುವ ಶ್ರೀ ನಂಜುಂಡೇಶ್ವರ ಸ್ವಾಮಿಯ ಅನುಗ್ರಹದಿಂದ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಹಾಗೂ ಪಂಚಮುಖಿ ಆಂಜನೇಯ ಮತ್ತು ಶ್ರೀ ಕಾರ್ತ ವೀರಾರ್ಜುನ ದೇವರುಗಳ ಸ್ಥಿರಬಿಂಬ ಪ್ರತಿಷ್ಠಾಪನೆಯನ್ನು ನಂಜನಗೂಡಿನ ಪ್ರಧಾನ ಆಗಮಿಕ ವೇದಬ್ರಹ್ಮ ಶ್ರೀ ನಾಗಚಂದ್ರ ದೀಕ್ಷಿತರು ಮತ್ತು ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ಕೃಷ್ಣ ದೀಕ್ಷಿತರ ಸಮ್ಮುಖದಲ್ಲಿ ಗುರುವಾರದಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ಎಂ. ಎಸ್. ವಿನಯ್ ಶರ್ಮಾ ಈ ವೇಳೆ ಮಾತನಾಡಿ, ಜಗತ್ತಿಗೆ ಗುರುಗಳಾದ ಗುರು ದತ್ತಾತ್ರೇಯರನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೇವರಿಗೆ ಯಾವುದೇ ಜಾತಿ ಮತ ಭೇದ ಇಲ್ಲದೆ ಸದ್ಗುರುವಿನ ಸ್ಥಾನ ಪಡೆದಿದ್ದು ಸರ್ವರಿಗೂ ದರ್ಶನ ಪ್ರಾಪ್ತಿ ವಾಗಲಿದೆ. ಅದು ನಂಜುಂಡೇಶ್ವರನ ಪ್ರಾಕಾರದಲ್ಲೇ ಸ್ಥಿರ ಬಿಂಬ ಪ್ರತಿಷ್ಠಾಪನೆ ಆಗಿರುವುದು ಸಂತಸ ತಂದಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿಯೇ ಶ್ರೀ ಕಾರ್ತ ವೀರ್ಯಾರ್ಜುನ ದೇವರು ಎಲ್ಲೂ ಪ್ರತಿಷ್ಠಾಪನೆ ಆಗಿಲ್ಲ. ಈ ದೇವರಲ್ಲಿ ಮನುಷ್ಯ ನ ಅಧಿಕಾರ, ಯಾವುದಾದರೂ ನ್ಯಾಯಾಲಯದಲ್ಲಿ ಪ್ರಕರಣಗಳು, ವಸ್ತುಗಳು ನಾಶ ವಾಗಿದ್ದರೆ ಈ ದೇವರ ಅನುಗ್ರಹ ಪಡೆದರೆ ಶೀಘ್ರವೇ ಪ್ರಾಪ್ತಿ ದೊರೆಯಲಿದೆ ಎಂದರು.
ಪ್ರತಿ ಹುಣ್ಣಿಮೆ ,ಅಮವಾಸ್ಯೆ ದಿನಗಳಂದು 5 ತರದ ಎಣ್ಣೆಗಳಿಂದ ದೀಪ ಹಚ್ಚಿದರೆ ಸಮಸ್ಯೆಗಳು ಎಂತಹುದೇ ಜಟೀಲವಾಗಿದ್ದರೂ 5 ವಾರಗಳಲ್ಲಿ ಪರಿಹಾರ ದೊರೆಯಲಿದೆ ಎಂದರು.
ಅಗಸ್ಟ್ -23 ರಿಂದ ಆರಂಭಗೊಂಡ ಈ ಧಾರ್ಮಿಕ ಕಾರ್ಯಕ್ರಮಗಳು ಅಗಸ್ಟ್-26 ನಾನಾ ರೀತಿಯ ಹೋಮಗಳು ನಡೆದಿದ್ದು ಪ್ರಾಣಪ್ರತಿಷ್ಠೆ, ಪ್ರತಿಷ್ಠಾಂಗ ಹೋಮ ಮತ್ತಿತರ ಹೋಮಗಳು ನಡೆದು ದೇವರಿಗೆ ಅಭಿಷೇಕ ಮತ್ತು ಅಲಂಕಾರ ನೆಡೆದು ಅಪಾರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪವನ್ ಶರ್ಮಾ, ಅರ್ಚಕರುಗಳಾದ ರಾಘವೇಂದ್ರ, ಗುರುಪ್ರಸಾದ್, ಬಿ ರ.ಮೇಶ್ ಭಟ್, ಶ್ರೀನಿವಾಸ್ ಶರ್ಮಾ, ಬಿ .ಆರ್. ಸತ್ಯನಾರಾಯಣ, ನಂಜುಂಡ ರಾವ್ ನಡೆಸಿಕೊಟ್ಟರು.
ಮಾಜಿ ಉಪ ಮಾಜಿ ಉಪಮುಖ್ಯಮಂತ್ರಿ ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್, ಕ ಬಿಜೆಪಿ ಪಕ್ಷದ ಯುವ ಮುಖಂಡ ಭೀಮನಕುಂಟೆ ಹನುಮಂತೇಗೌಡ ,ತಾ ಪಂ ಮಾಜಿ ಸದಸ್ಯೆ ಸುವರ್ಣಮ್ಮ, ನಿವೃತ್ತ ಶಿಕ್ಷಕ ರಾಜಪ್ಪ, ಪುರಸಭಾ ಸದಸ್ಯ ಎಂ .ಆರ್. ಜಗನ್ನಾಥ್, ಮಾಜಿ ಅಧ್ಯಕ್ಷ ಕೆ .ಪ್ರಕಾಶ್,ಪುರಸಭಾ ಸದಸ್ಯ ಎಂ. ಎಸ್ .ಚಂದ್ರಶೇಖರ್, ಮಾಜಿ ಸದಸ್ಯೆ ಯಶೋದಾ ಸಿ.ರಾಜು , ಮುಖಂಡರುಗಳಾದ ಕಮ್ಮನಕೋಟೆ ಶಿವಣ್ಣ, ಆರ್. ಅಶ್ವತ್ಥ್ ನಾರಾಯಣ್, ಎಂ.ವಿ.ಮೂಡ್ಲಗಿರೀಶ್ ,ಎಸ್. ಆರ್. ಮಂಜುನಾಥ್, ಮಿಲ್ಟ್ರಿ ಪ್ರಕಾಶ್, ಗುತ್ತಿಗೆದಾರರ ರಾಧೆಶ್ಯಾಮ್, ಮಹೇಶ್
ಇತರರು ಇದ್ದರು.

(Visited 1 times, 1 visits today)