ತುಮಕೂರು :

ಸಿದ್ದಗಂಗಾ ಸಂಸ್ಥೆಯ ವೈದ್ಯಕೀಯ ಮತ್ತು ಸಂಶೋಧನಾ ಮಹಾವಿದ್ಯಾಲಯ ಸ್ಥಾಪನೆಗೆ ಕೇಂದ್ರ
ಸರ್ಕಾರ ಅನುಮತಿ ನೀಡಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ ಅಭಿನಂದಿಸಿದ್ದಾರೆ.
ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಮೂರನೇ ಕಾಲೇಜು ಸ್ಥಾಪನೆಗೆ ಈ ಹಿಂದೆ ರಾಜ್ಯ
ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಶಿಫಾರಸ್ಸು ಮಾಡಿದ್ದರ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳ ಪರಿಶೀಲನೆ
ಮಾಡಿದ ನಂತರ, ಆಯೋಗವು ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿದ್ದು
ವೈದ್ಯಕೀಯ ವಿದ್ಯಾರ್ಜನೆ ಮಾಡುವ ವಿಧ್ಯಾರ್ಥಿಗಳು ಹಾಗೂ ಶ್ರೀ ಸಿದ್ದಗಂಗಾ ಕ್ಷೇತ್ರದ ಭಕ್ತ ಸಮೂಹಕ್ಕೆ ಸಂತಸ
ಮೂಡಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿನ ಆದಿಚುಂಚನಗಿರಿ ಮಹಾಸಂಸ್ಥಾನ, ಚಿತ್ರದುರ್ಗದ ಬೃಹನ್ಮಠ, ಮೈಸೂರಿನ ಜೆಎಸ್ಎಸ್,
ಸಿರಿಗೆರೆಯ ತರಳಬಾಳು ಮುಂತಾದ ಪ್ರತಿಷ್ಠಿತ ಮಠಗಳು ವೈದ್ಯಕೀಯ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು ,
ಈ ಸಾಲಿಗೆ ಸಿದ್ದಗಂಗಾ ವೈದ್ಯಕೀಯ ಕಾಲೇಜಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅನುಮತಿ ನೀಡಿದ್ದರ
ಹಿನ್ನೆಲೆಯಲ್ಲಿ ಸೇರ್ಪಡೆಗೊಂಡಿದೆ ಎಂದು ಕೆ.ಪಿ.ಮಹೇಶ ಹೇಳಿದ್ದಾರೆ.

(Visited 1 times, 1 visits today)