ಗುಬ್ಬಿ;
ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತೇನೆ ಎಂದು ಮತ ಪಡೆದ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು ವಿಷಾದನೀಯ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಎಂ.ಎಚ್. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೂಹ ಸಂಪನ್ಮೂಲ ಕೇಂದ್ರ ನವೀಕೃತ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಭೂ ಹಗರಣವು ಬಗೆದಷ್ಟು ಆಳವಾಗುತ್ತಾ ಇದ್ದು,ರಾಜಕೀಯ ವ್ಯಕ್ತಿಗಳೇ ಈ ದಂಧೆಯ ವ್ಯವಹಾರದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಇದನ್ನು ಸರಿಪಡಿಸಲು ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮೀಸಲಾಗಿದೆ ಎಂದು ತಿಳಿಸಿದ ಅವರು ಈ ವಿಷಯದಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ನಡೆಸುವುದಿಲ್ಲ, ಇದರಿಂದ ತಾಲೂಕಿನ ಬಡ ರೈತಾಪಿ ವರ್ಗದವರ ಶಾಪ ತಟ್ಟುತ್ತದೆ ಎಂದು ತಿಳಿಸಿದರು.
ಬಾಗರು ಹೂಕ್ಕುಮ್ ಸಮಿತಿಯಲ್ಲಿ ಅನ್ಯಾಯ ನಡೆದಿದೆ ಎಂದು ಬೊಬ್ಬೆ ನೀಡುತ್ತಿರುವ ವಿರೋಧಿಗಳು ಸಾಕಷ್ಟು ಇದ್ದರೂ ಸರಿಯಾದ ಮಾಹಿತಿಯನ್ನು ಪಡೆಯದೇ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕೆಲ ವ್ಯಕ್ತಿಗಳಿಗೆ ಸಮಯವೇ ಪಾಠ ಕಲಿಸುತ್ತದೆ ಎಂದ ಅವರು ನಾನಾಗಲಿ ಸಂಬಂಧಿಕರಿಗಾಗಲಿ ಯಾವುದೇ ಜಮೀನನ್ನು ನನ್ನ ಅಧಿಕಾರವನ್ನು ಬಳಸಿಕೊಂಡು ಜಮೀನು ಮಾಡಿಲ್ಲ. ಹಾಗೇ ಏನಾದರೂ ಮಾಡಿರುವ ಬಗ್ಗೆ ಬಹಿರಂಗ ಗೊಳಿಸಿದ್ದಲ್ಲಿ ನನ್ನ ರಾಜಕೀಯಕ್ಕೆ ಇತಿಶ್ರೀ ಆಡುವುದಾಗಿ ಸವಾಲು ಹಾಕಿದರು.
1999 ರಿಂದ ಕೈ ಬರಹದ ಪಾಣಿಗಳನ್ನು ಕೆಲ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡು ಈ ಮಾಫಿಯ ದಂಧೆಗೆ ಓಂಕಾರ ಬರೆದಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ತಿಳಿಸಿದ ಅವರು ಮುಂದಿನ ದಿನಮಾನಗಳಲ್ಲಿ ಅನುಭವದಲ್ಲಿರುವ ರೈತರು ಆತಂಕಕ್ಕೆ ಒಳಗಾಗದೆ ತಮ್ಮ ಜಮೀನನ್ನು ಯಾರು ಕಸಿದು ಕೊಳ್ಳಲು ಆಗದ ರೀತಿ ಭರವಸೆ ನೀಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ನಾನು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ನನಗೆ ಇಲ್ಲಿಯವರೆಗೂ ಮತ ನೀಡಿದಂತಹ ಪ್ರಭುಗಳು ತೀರ್ಮಾನಿಸುತ್ತಾರೆ ಎಂದು ತಿಳಿಸಿದ ಅವರು ಭೂ ಮಾಫಿಯ ಹಗರಣದಲ್ಲಿ ಪ್ರತಿ ಏರಿಯಾಕ್ಕೂ ಎಕರೆಗೆ ಇಷ್ಟು ಹಣ ಎಂದು ನಿಗದಿ ಮಾಡಿದ ವ್ಯಕ್ತಿಗಳು ಜೈಲು ಪಾಲಾಗಿದ್ದು ರಾಜಕೀಯ ದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಈ ಭೂ ಮಾಫಿಯದಿಂದ ಪಾಠ ಕಲಿಯ ಬೇಕಾಗಿದೆ ಎಂದು ತಿಳಿಸಿದರು.