ತುಮಕೂರು:
ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಸೇತುವೆಯಾಗಿ ಉದ್ಯೋಗ ಮೇಳಗಳು ಕಾರ್ಯನಿರ್ವಹಿಸುತ್ತವೆ ಎಂದು ತುಮಕೂರು ನಗರ ಶಾಸಕ ಡಾ.ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಶಾಲೆಯ ಆವರಣದಲ್ಲಿ ರೆಡ್ಡಿ ಫೌಂಡೇಷನ್, ಟೀಮ್ ಲೀವ್ ಸಂಸ್ಥೆ ಹಾಗು ಜಿ.ಬಿ.ಜೋತಿಗಣೇಶ್ ಅಭಿಮಾನಿ ಬಳಗ ಆಯೋಜಿಸಿದ್ದ ಉಚಿತ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸರಕಾರಿ ಸಂಸ್ಥೆ ಗಳಾದ ಉದ್ಯೋಗ ವಿನಿಮಯ ಕಚೇರಿ ಹಾಗು ಕೌಶಲ್ಯಾಭಿವೃದ್ದಿ ಸಂಸ್ಥೆ ಯ ಜೊತೆಗೆ ಸೇರಿ ಪ್ರತಿ 40-50 ದಿನಗಳಿಗೊಮ್ಮೆ ಇಂತಹ ಉದ್ಯೋಗ ಮೇಳಗಳನ್ನು ತುಮಕೂರು ನಗರದಲ್ಲಿ. ಆಯೋಜಿಸಲಾಗುವುದೆಂದರು
ಹೊಸ ಶಿಕ್ಷಣ ನೀತಿ-2020ರ ಪ್ರಕಾರ ಅನುತ್ತೀರ್ಣ ಎಂಬುದು ಇರುವುದಿಲ್ಲ. ಕೋರ್ಸ್ ಕಂಪ್ಲೀಲೆಡ್ ,ನಾನ್ ಕಂಪ್ಲಿಟೆಂಡ್ ಎಂಬಷ್ಟೇ ಪರಿಗಣಿಸಲಾಗುತ್ತದೆ.ಇದು ಅಯಾಯ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.ನಿಮಗೆ ಉದ್ಯೋಗ ನೀಡುವ ಕಂಪನಿ ನಿಮ್ಮಂದ ನಿಷ್ಠೆಯನ್ನು ಬಯಸುತ್ತದೆ.
ಹಾಗಾಗಿ ಕೆಲಸ ನೀಡುವ ಸಂಸ್ಥೆಗಾಗಿ ದುಡಿಯುವ ಕೆಲಸ ಮಾಡಿ,ನೀವು ಕಂಪನಿಯನ್ನು ಪ್ರೀತಿಸಿದರೆ, ಅವರು ನಿಮ್ಮನ್ನು ಗೌರವದಿಂದ ಕಾಣುತ್ತಾರೆ ಎಂದು ಶಾಸಕ ಜೋತಿಗಣೇಶ್ ಸಲಹೆ ನೀಡಿದರು.
ತುಮಕೂರಿನ ಏಂಪ್ರೆಸ್ ಶಾಲೆಯಲ್ಲಿ ಸುಸಜ್ಜಿತ ಸಭಾಂಗಣದ ಜೊತೆಗೆ, ಇನ್ಕೂಬೇಷನ್ ಸೆಂಟರ್ ಸಹ ಶೀರ್ಘದಲ್ಲಿ ತೆರೆಯಲಾಗುವುದು ಎಂದು ಭರವಸೆ ನೀಡಿದರು
ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ನಾನು ಒಂದು ಕಂಪನಿ ನಡೆಸುತ್ತಿದ್ದೇನೆ.ನಾನು ಬಯಸುವುದು ಸಂಸ್ಥೆ ಗೆ ನಿಷ್ಠೆರಾಗಿ ಕೆಲಸ ಮಾಡುವವರನ್ನು ಮಾತ್ರ.ನಿರುದ್ಯೋಗ ಎಂಬುದು ಇಲ್ಲ. ಕೌಶಲ್ಯಭರಿತ ಕೆಲಸಗಾರರ ಕೊರತೆ ಉದ್ದಿಮೆದಾರರನ್ನ ಕಾಡುತ್ತಿದೆ.ಹಿಂದೆ ಕಡಿಮೆ ಉದ್ದಿಮೆಗಳು ಇದ್ದಾಗ ಕೆಲಸ ಹುಡುಕುವವರ ಸಂಖ್ಯೆ ಹೆಚ್ಚಿತ್ತು. ಈಗ ಕಂಪನಿಗಳ ಸಂಖ್ಯೆ ಹೆಚ್ಚಿದೆ.ಹಾಗಾಗಿ ಇರುವವರಲ್ಲಿಯೇ ಕೆಪಬಲ್ ಇರುವವರನ್ನು ಆರಿಸಿಕೊಳ್ಳುವ ಅನಿವಾರ್ಯತೆ ಇದೆ. ಸೋಮಾರಿಗಳಿಗೆ ಯಾರು ಮನ್ನಣೆ ನೀಡುವುದಿಲ್ಲ.ಇದನ್ನು ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯು ಅರಿತು ಕೊಳ್ಳಬೇಕೆಂದರು
ರೆಡ್ಡಿ ಫೌಂಡೇಷನ್ನ ಪ್ರದೀಪ್ ಮಾತನಾಡಿ, 1996 ರಲ್ಲಿ ಆರಂಭವಾದ ನಮ್ಮ ಸಂಸ್ಥೆಯ ಸಿಎಸ್ ಆರ್ ನಿಧಿ ಅಡಿಯಲ್ಲಿ ಫೌಂಡೇಷನ್ ಸ್ಥಾಪಿಸಿ ಅದರ ಅಡಿಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಇದುವರೆಗು 3.50 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ.
ಆಟೋಮೊಬೈಲ್, ಹಣಕಾಸು ಸಂಸ್ಥೆಗಳು ಸೇರಿದಂತೆ ಹಲವಾರು ಕಂಪನಿಗಳ ಜೊತೆ ಸಂಪರ್ಕ ಬೆಳೆಸಿ, ಉದ್ಯೋಗ ಅಗತ್ಯ ಇರುವವರನ್ನು ಗುರುತಿಸಿ,ತರಬೇತಿ ನೀಡಿ, ಕಂಪನಿಗಳಿಗೆ ಮಾನವ ಸಂಪನ್ಮೂಲ ಸರಬರಾಜು ಮಾಡುವ ಕೆಲಸ ಮಾಡುತ್ತಿವೆ ಎಂದರು
ಟೀಮ್ ಲೀವ್ ನ ಪವನ್ ಮಾತನಾಡಿ, ದೇಶದ 17 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸಂಸ್ಥೆ ಕರ್ನಾಟಕದಲ್ಲಿ ಪ್ರತಿವರ್ಷ 7-9 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುತ್ತಿದೆ. ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 600-800 ಕೆಲಸ ಖಾಲಿ ಇವೆ. ಇಂದು ಉದ್ಯೋಗ ಮೇಳಕ್ಕೆ ಬಂದಿರುವ ಯುವಜನರು ತಾವು ಆಯ್ಕೆ ಮಾಡಿಕೊಂಡ ಕಂಪನಿಗೆ ಹೋಗಿ ಸೇರಿಕೊಳ್ಳಿ ಎಂದು ಸಲಹೆ ನೀಡಿದರು
ವೇದಿಕೆಯಲ್ಲಿ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಇಂದ್ರಕುಮಾರ್, ವಿಶ್ವನಾಥ್, ಸಿ.ಎನ್.ರಮೇಶ್,ಚಂದ್ರಕಲಾ ಪುಟ್ಟರಾಜು, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಮಾಜಿ ಸದಸ್ಯ ಜೆ.ಜಗದೀಶ್, ವೇದಮೂರ್ತಿ, ವಿರೂಪಾಕ್ಷಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಹನುಮಂತರಾಜು, ಯುವ ಮೋಚ್ರ್ದ ಪ್ರದೀಪ್ ಜೈನ್, ಮನೋಹರಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುಮಾರು 37 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದ ಉಚಿತ ಉದ್ಯೋಗ ಮೇಳದಲ್ಲಿ 2800 ಕ್ಕು ಹೆಚ್ಚು ಉದ್ಯೋಗಾಕಾಂಕ್ಚಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು.
(Visited 6 times, 1 visits today)