ಕೊರಟಗೆರೆ :
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿ ವೃದ್ದೆಯ ಕಾಲು ಮುರಿದಿದೆ.
ಜೆಟ್ಟಿಅಗ್ರಹಾರ ಗ್ರಾಮದ ದಾಸಪ್ಪನ ಪತ್ನಿ ಗಿರಿಯಮ್ಮ(65)ವರ್ಷದ ವೃದ್ಧೆಗೆ ದ್ವಿಚಕ್ರ ವಾಹನ ಹರಿದು ವೃದ್ದೆಯ ಎರಡು ಕಾಲುಗಳು ಮುರಿದು ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
ಕೇಶಿಪ್ ವಿರುದ್ದ ಸ್ಥಳೀಯರಿಂದ ಪ್ರತಿಭಟನೆ:
ಜೆಟ್ಟಿಅಗ್ರಹಾರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ತಿಂಗಳಿಗೆ ನೂರಾರು ಅಪಘಾತ ಆಗುತ್ತಿವೆ. ಅಪಘಾತವಾದಾಗ ಮಾತ್ರ ಪೆÇಲೀಸರು ಬರುತ್ತಾರೆ. ಅಪಘಾತದಲ್ಲಿ ಸತ್ತವರ ಕುಟುಂಬದ ನೋವು ಕೇಳೋರು ಯಾರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರು.
ಶಿಲ್ಪ ನಾಗರಾಜು ಸ್ಥಳೀಯರು
ಮಾತನಾಡಿ ಎಷ್ಟು ಬಾರಿ ಮನವಿ ಮಾಡಿದರೂ ನಮ್ಮ ಗ್ರಾಮದ ಮುಖ್ಯ ರಸ್ತೆಯಲ್ಲಿ ಆಗುತ್ತಿರುವ ಅಪಘಾತಗಳನ್ನು ತಡೆಯಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ನಡೆಯುತ್ತಲೇ ಇವೆ ಈ ಸಂಬಂಧ ಪಟ್ಟಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು ಆದರೆ ಇದುವರೆಗೂ ಯಾವುದೇ ಕ್ರಮ ಜರುಗಿಸಲಿಲ್ಲ ಆದ್ದರಿಂದ ಎಂದು ಸ್ಥಳೀಯ ನಾವೆಲ್ಲರೂ ಸೇರಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದೇವೆ ಪಕ್ಕದಲ್ಲಿ ಶಾಲೆ ಇರುವುದರಿಂದ ರಸ್ತೆಯಲ್ಲಿ ಎರಡು ಕಡೆ ಹುಬ್ಬುಗಳನ್ನು ಹಾಕಬೇಕಿದೆ ಅದನ್ನ ಹಾಕುವವರೆಗೂ ನಾವು ರಸ್ತೆ ತಡೆದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ತಿಳಿಸಿದರು ..
ಜಯಮ್ಮ ಸ್ಥಳೀಯರು ಮಾತನಾಡಿ
ಅನೇಕ ಬಾರಿ ನಮ್ಮ ಗ್ರಾಮದ ಜನರು ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನು ತಡೆದು ಪ್ರತಿಭಟಿಸಿದ್ದಾರೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದ ಜನರಿಗೆ ಮನ ಒಲಿಸಿ ವಾಹನಗಳು ಓಡಾಡುವಂತೆ ಮಾಡಿ ಹೋಗುತ್ತಾರೆ ಆದರೆ ಇಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಯಾವೊಬ್ಬ ಅಧಿಕಾರಿಯೂ ಈವರೆಗೂ ಸಮಸ್ಯೆ ಬಗೆಹರಿಸಿಲ್ಲ ಅದಕ್ಕಾಗಿ ಇಂದು ಆ ಸಮಸ್ಯೆ ಬಗೆಹರಿಯುವವರೆಗೂ ನಾವು ರಸ್ತೆ ತಡೆಯನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಸ್ಥಳದಲ್ಲಿ ಸಾವಿರಾರು ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟಿಸಿದರು ಗಂಟೆಗಟ್ಟಲೆಯಾದರೂ ವಾಹನಗಳು ಸಂಚರಿಸಲಿಲ್ಲ
ನಂತರ ಸ್ಥಳಕ್ಕೆ ಆರ್ ಟಿಒ ಅಧಿಕಾರಿಗಳು ಮತ್ತು ಕೊರಟಗೆರೆ ಪೆÇೀಲಿಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಜನರನ್ನು ಮನವೊಲಿಸಿ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಮಾಡಿ ಅವುಗಳನ್ನು ಪೆÇೀಷಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿ ವಾಹನ ಸವಾರರಿಗೆ ಸಂಚರಿಸಲು ರಸ್ತೆ ತೆರವು ಮಾಡಿಕೊಟ್ಟರು.