ತುಮಕೂರು :
ನಗರದ ಎಂಪ್ರೆಸ್ ಸರ್ಕಾರಿ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವತಿಯಿಂದ ಆಯ್ಕೆಯಾದ ಕಾಲೇಜಿನ ಮಕ್ಕಳಿಂದ ಕೌಶಲ್ಯಗಳ ಸಂಭ್ರಮ ಕಾರ್ಯಕ್ರಮ ನಡೆಯಿತು.
ಪಿಡಿಒಗಳ ಸಂಘದ ಅಧ್ಯಕ್ಷರೂ ಆಗಿರುವ ನಾಗರಾಜು ಮಾತನಾಡಿ, ಇಡೀ ವಿಶ್ವದಲ್ಲಿ ಅತೀ ಹೆಚ್ಚು ಯುವ ಸಂಪತ್ತನ್ನು ಹೊಂದಿರುವ ದೇಶ ನಮ್ಮದು ನೀವು ನಮ್ಮ ದೇಶದ ಸಂಪತ್ತು. ಭಾರತ ಮುಂದುವರಿದ ದೇಶವಾಗಲು ನಿಮ್ಮ ಶಕ್ತಿ ಅಗತ್ಯವಿದೆ ಎಂದು ಮಕ್ಕಳನ್ನು ಹುರಿದುಂಬಿಸಿದರು.
ಅವರ ಶೈಕ್ಷಣಿಕ ಜೀವನದ ಏಳುಬೀಳುಗಳನ್ನು ಹೇಳುತ್ತಾ ಜೊತೆಗೆ ಗ್ರಾಮಪಂಚಾಯ್ತಿಯ ಹುಟ್ಟು, ಬೆಳವಣಿಗೆ ಮತ್ತು ಅದರ ಸದ್ಬಳಕೆಯ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸುತ್ತಾ ಹೇಳಿದರು.
ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಡವಾಗಲು ಸಾತ್ವಿಕ ಆಹಾರಗಳಾದ ಸಿರಿಧಾನ್ಯಗಳನ್ನು ಮತ್ತು ಸೊಪ್ಪು ತರಕಾರಿಗಳನ್ನು ಸೇವಿಸಬೇಕು ಎಂದು ಮಾರ್ಗದರ್ಶನ ನೀಡಿದರು. ದೈಹಿಕವಾಗಿ ಸದೃಡರಾಗಲು ಪ್ರತೀದಿನ ಬೆಳಗಿನಜಾವ ಅರ್ಧ ಗಂಟೆಯಾದರೂ ನೆಡೆದಾಡುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಂದುವರೆದು ಈಗಿನ ಮಕ್ಕಳು ಮಾನಸಿಕವಾಗಿ ಮತ್ತು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿ ಮಕ್ಕಳ ಎಲ್ಲಾ ಪ್ರಶ್ನೆಗಳಿಗೂ ಪ್ರೀತಿಯಿಂದ ಉತ್ತರಿಸಿದರು. ಜೊತೆಗೇ ಮಕ್ಕಳಿಗೆ ಕಥೆಗಳ ಮೂಲಕ ನಿಜ ಜೀವನದ ಸವಾಲುಗಳನ್ನು ಹೇಗೆ ಎದುರಿಸಿ ಗೆಲ್ಲಬೇಕು ಎಂಬ ಸಲಹೆ ನೀಡಿದರು.
ನಿರುದ್ಯೋಗ ಸಮಸ್ಯೆ ಏಕೆ ಹೆಚ್ಚಾಗಿದೆ ಅದನ್ನು ಸರಿದೂಗಿಸುವ ಕ್ರಮ ಏನು ಎಂದು ವಿದ್ಯಾರ್ಥಿನಿಯ ಪ್ರಶ್ನೆಗೆ ಯುಕ್ತ ಕೌಶಲ್ಯ ಕೇಂದ್ರಕ್ಕೆ ಹೋಗಿ ಅಲ್ಲಿ ಸಿಗುವ ಕೌಶಲ್ಯಗಳು ನಿರುದ್ಯೋಗ ಸಮಸ್ಯೆಗೆ ಔಷಧಿಯಾಗಲಿದೆ ಎಂದು ಉತ್ತರಿಸಿ ಒSಙಇP ಯ ಅಗತ್ಯತೆಯನ್ನು ತಿಳಿಸಿದರು.
ಎಂಪ್ರೆಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ ಜಯಶೀಲ್ ಮಾತನಾಡಿ, ಈ ಉತ್ತಮ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು. ಯಾರೂ ಈ ತರಬೇತಿಯಿಂದ ವಂಚಿತರಾಗಬೇಡಿ ಎಂದೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲು ಸದಾ ಸಿದ್ಧ ಎಂದು ಭರವಸೆ ನೀಡಿದರು.
ಹೆಬ್ಬೂರು ಗ್ರಾಮ ಪಂಚಾಯಿತಿ ಪಿಡಿಓ ಚಂದ್ರಹಾಸ ಮಾತನಾಡಿ ನಿಮ್ಮ ಗುರಿಯನ್ನು ತಲುಪುವುದು ಅಷ್ಟೊಂದು ಕಷ್ಟವಲ್ಲ. ಮತ್ತು ಅಷ್ಟೊಂದು ಸುಲಭವೂ ಅಲ್ಲ. ನೀವು ನಿಮ್ಮ ಗುರಿಗಳನ್ನು ತಲುಪಲು ಸದಾ ಕ್ರಿಯಾಶೀಲರಾಗಿರಬೇಕು ಮತ್ತು ಸಕರಾತ್ಮಕವಾದ ಆಶಾದಾಯಕ ಚಿಂತನೆ ಮುದ್ರಿಸಿಕೊಳ್ಳಬೇಕು. ಆಗ ಮಾತ್ರ ನೀವು ಅಂದುಕೊಂಡ ದೊಡ್ಡ ಗುರಿ ನಿಮ್ಮದಾಗುತ್ತದೆ ಎಂದರು.