ತುಮಕೂರು :

ನಾಡೋಜ ಪ್ರ್ರೊ.ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ
ಕೊಟ್ಟಿರುವ ದೂರನ್ನು ರದ್ದು ಪಡಿಸುವಂತೆ ಒತ್ತಾಯಿಸಿ
ತುಮಕೂರು ಅಪರಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಪ್ರಗತಿಪರ
ಸಂಘಟನೆಗಳ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು.
ಪ್ರೊ.ಬರಗೂರುರಾಮಚಂದ್ರಪ್ಪನವರು ತಮ್ಮ ‘ಭರತನಗರಿ’ ಎಂಬ
ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಮತ್ತು ಗಂಗಾ ಮತಸ್ಥರ ದೇವತೆ ಗಂಗಾ
ಮಾತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ಕ್ರಮ
ಕೈಗೊಳ್ಳಬೇಕೆಂದು ವಿಧಾನ ಪರಿಷತ್ತಿನ ಸದಸ್ಯರಾದ(ಬಿ.ಜೆ.ಪಿ) ಶ್ರೀ
ರವಿಕುಮಾರ್ ಮತ್ತು ಶ್ರೀ ಚಲವಾದಿ ನಾರಾಯಣಸ್ವಾಮಿಯವರು ಪೊಲೀಸ್
ಆಯುಕ್ತರಿಗೆ ದೂರು ನೀಡಿರುವುದನ್ನು ಪತ್ರಿಕೆಗಳಲ್ಲಿ ಓದಿದ್ದೇವೆ. ಈ
ಸಂಬಂಧದಲ್ಲಿ ಪ್ರೊ.ಬರಗೂರುರಾಮಚಂದ್ರಪ್ಪನವರು ಕೂಡ
ಪತ್ರಿಕೆಗಳಲ್ಲಿ ಸ್ವಷ್ಟನೆ ನೀಡಿದ್ದಾರೆ.
ಪ್ರೊ.ಬರಗೂರುರಾಮಚಂದ್ರಪ್ಪನವರು ನಮ್ಮ ನಾಡು ಕಂಡ
ಸಾಂಸ್ಕøತಿಕ ಅನನ್ಯತೆಯನ್ನು ಪಡೆದ ಪ್ರಸಿದ್ಧ ಲೇಖಕರು. ರಾಜ್ಯ, ರಾಷ್ಟ್ರ
ಮತ್ತು ಅಂತರ್‍ರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾದವರು. ಜೊತೆಗೆ
ತುಮಕೂರು ಜಿಲ್ಲೆಯನ್ನು ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ
ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮೇರು
ವ್ಯಕ್ತಿತ್ವವುಳ್ಳ ಪ್ರಜಾಪ್ರತಿಭೆಯ ಮೇಲೆ ಕೊಟ್ಟಿರುವ ದೂರಿನಲ್ಲಿ
ಸತ್ಯಾಂಶವಿಲ್ಲ.ನಾಲ್ಕು ದಶಕಗಳ ಹಿಂದೆ ಬರೆದಿದ್ದ ಅದೊಂದು ರಾಜಕೀಯ
ವಿಡಂಬನೆಯ ರೂಪಕಾತ್ಮಕ ಕಾದಂಬರಿ. ಸೃಜನಶೀಲ ಕೃತಿಗಳನ್ನು ಕೇವಲ
ವಾಚ್ಯಾರ್ಥದಲ್ಲಿ ನೋಡಲಾಗದು. ಈ ಕಾದಂಬರಿಯಲ್ಲಿ ಅನೇಕ
ಮನೋಧರ್ಮದ, ಅನೇಕ ನಡವಳಿಕೆಯ ಪಾತ್ರಗಳು ಬರುತ್ತವೆ.
ಲೇಖಕರು ಆಯಾ ಪಾತ್ರದ ಮನೋಧರ್ಮಕ್ಕೆ ಅನುಗುಣವಾದ
ಮಾತುಗಳನ್ನು ಬರೆಯಬೇಕಾಗುತ್ತದೆ. ಅಂತೆಯೇ ಈ ಕಾದಂಬರಿಯ
ಒಂದು ಪಾತ್ರವು ರಾಷ್ಟ್ರಗೀತೆಯ ದಾಟಿಯಲ್ಲಿ ದೇಶದ ಸ್ಥಿತಿಯನ್ನು
ವಿಡಂಬಿಸುತ್ತದೆ. ಆದರೆ ರಾಷ್ಟ್ರಗೀತೆಯ ಆಶಯವನ್ನು ಎಲ್ಲಿಯೂ
ವಿರೋಧಿಸಿರುವುದಿಲ, ವಿಡಂಬಿಸುವುದಿಲ್ಲ. ಈ ಬಗ್ಗೆ ಪ್ರೊ.ಬರಗೂರರು
ಈಗಾಗಲೇ ಬಹಿರಂಗ ಸ್ಪಷ್ಟನೆ ನೀಡಿದ್ದು ಅಂಥ ಯಾವ ಉದ್ದೇಶವೂ
ತನಗಿಲ್ಲವೆಂದೂ ಜನರಿಗೆ ತಪ್ಪು ಭಾವನೆ ಉಂಟು ಮಾಡಿದ್ದರೆ
ವಿಷಾದಿಸುವುದಾಗಿಯೂ ಹೇಳಿದ್ದಾರೆ.
ಮುಖ್ಯ ವಿಷಯವೇನೆಂದರೆ- ಸುಮಾರು ಅರ್ಧಶತಮಾನ ಹಿಂದಿನ ಈ
ಕೃತಿಯು ಅಂದಿನ ಸಂದರ್ಭಕ್ಕೆ ಅನುಗುಣವಾಗಿತ್ತು. ಇಂದಿನ
ಸಂದರ್ಭವನ್ನೂ ಒಳಗೊಂಡಂತೆ ಸರ್ವಕಾಲಿಕ ಮೌಲ್ಯ ಪ್ರತಿಪಾದನೆ
ಮಾಡಬೇಕೆಂದು ಪ್ರೊ.ಬರಗೂರರು ಮೂಲ ಕೃತಿಗೆ ಹೊಸ ರೂಪ
ಕೊಟ್ಟಿದ್ದಾರೆ. ಹೊಸ ರೂಪದ ಕೃತಿ 2021ರಲ್ಲಿ ಅವರ ಸಮಗ್ರ ಸಾಹಿತ್ಯ
ಸಂಪುಟಗಳಲ್ಲಿದೆ. ಹೊಸದರಲ್ಲಿ ರಾಷ್ಟ್ರಗೀತೆಯ ದಾಟಿಯ ಬದಲು ಬೇರೆ
ಗೀತೆಯನ್ನು ಬರೆದಿದ್ದಾರೆ. ಹೊಸದು ಬಂದ ಮೇಲೆ ಹಳೆಯ ಕೃತಿ ಅಸ್ತಿತ್ವ
ಕಳೆದುಕೊಳ್ಳುತ್ತದೆ. ಆದ್ದರಿಂದ ಹಳೆಯ ಕೃತಿಯ ಮೇಲಿನ ದೂರು

ಅಪ್ರಸ್ತುತವಾಗುತ್ತದೆ.ಈಗ ದೂರು ಕೊಡುವುದು
ಕಾನೂನಾತ್ಮಕವಾಗಿಯೂ, ನೈತಿಕವಾಗಿಯೂ ಸರಿಯಿಲ್ಲವೆಂಬುದು ನಮ್ಮ
ಭಾವನೆಯಾಗಿದೆ. ಕರ್ನಾಟಕದ ಹೆಸರಾಂತ ಲೇಖಕರೂ, ಸಂಸ್ಕøತಿ
ಚಿಂತಕರೂ, ಚಲನಚಿತ್ರ ನಿರ್ದೇಶಕರೂ ಆದ ಪ್ರೊ.ಬರಗೂರರಿಗೆ
ವಿನಾಕಾರಣ ಮಾನಸಿಕ ಹಿಂಸೆ ಕೊಡುವ ದುರುದ್ದೇಶವನ್ನು ಈ ದೂರಿನ ಹಿಂದೆ
ಕಾಣಬಹುದಾಗಿದೆ. ಈ ಎಲ್ಲಾ ವಿಷಯಗಳ ಆಧಾರದ ಮೇಲೆ ಪ್ರೊ.ಬರಗೂರರ
ವಿರುದ್ಧ ಬಂದಿರುವ ದೂರನ್ನು ರದ್ದುಗೊಳಿಸಬೇಕೆಂದು ಪ್ರಗತಿಪರ
ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸುತ್ತೇವೆ.
ಈ ಸಂದರ್ಬದಲ್ಲಿ ಹಿರಿಯ ದಲಿತ ಮುಖಂಡರಾದ ನರಸೀಯಪ್ಪ. ಸಿಐಟಿಯು
ಜಿಲ್ಲಾಧ್ಯಕ್ಷರಾದ ಸೈಯದ್‍ಮುಜೀಬ್, ಎನ್.ಕೆ ಸುಬ್ರಮಣ್ಯ, ಕಟ್ಟಡ ಕಾರ್ಮಿಕ
ಸಂಘಟನೆಯ ಬಿ.ಉಮೇಶ್, ತುಮಕೂರು ಕೊಳಗೇರಿ ಹಿತರಕ್ಷಣಾ
ಸಮಿತಿಯ ಅರುಣ್, ದಲಿತ ಮುಖಂಡ ಜಿ.ಸಾಗರ್,ಗೋವಿಂದಪ್ಪ ಬಿ.ಎಸ್.ಪಿ ಜಿಲ್ಲಾ
ಕಾರ್ಯದರ್ಶಿ ರಂಗಧಾಮಯ್ಯ, ವಕೀಲರಾದ ಪಾವಗಡ ಶ್ರೀರಾಮುಲು,
ಎಸ್.ಎಫ್.ಐನ ಶಿವಣ್ಣ, ಮೊದಲಾದವರು ಉಪಸ್ಥಿತರಿದ್ದರು.

(Visited 1 times, 1 visits today)