ತುಮಕೂರು:
ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ತಂತ್ರಜ್ಞಾನದ ಕ್ಷೇತ್ರಗಳಲ್ಲಿ
ಪದವೀಧರರಿಗೆ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ವಿಶಾಲವಾದ
ಮಾಗೋಪಾರ್ಯಗಳಿವೆ. ಅಧ್ಯಯನಶೀಲತೆಯಲ್ಲಿ ತೊಡಗಿಸುತ್ತಾ ವ್ಯಕ್ತಿತ್ವ
ರೂಪಿಸಿಕೊಂಡರೆ ವಿದ್ಯಾರ್ಥಿಗಳಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಹಾಗೂ ಈ ಸ್ಪರ್ಧಾತ್ಮಕ
ಯುಗದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿವೆ. ವಿದ್ಯಾರ್ಥಿಗಳು
ಶಿಸ್ತು, ತಾಳ್ಮೆ ಮತ್ತು ಏಕಾಗ್ರತೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ
ನೀಡಬೇಕು ಎಂದು ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥರಾದ ಡಾ.
ಎಂ.ಆರ್.ಹುಲಿನಾಯ್ಕರ್‍ರವರು ಕರೆ ನೀಡಿದರು.
ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ದೀಕ್ಷಾಂತ್ ಪದವಿ
ಪ್ರದಾನ ಸಮಾರಂಭವನ್ನು 2022 ಕಾರ್ಯಕ್ರಮವನ್ನು ಸೆ.03 ರಂದು ಬೆಳಿಗ್ಗೆ 11
ಗಂಟೆಗೆ ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ
ಡಾ.ಎಂ.ಆರ್.ಹುಲಿನಾಯ್ಕರ್‍ರವರು ಮಾತನಾಡುತ್ತಾ ಅವರು ಪದವೀಧರರು
ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಯಾರಿಗೂ ಸುಗಮವಾದ ಹಾದಿ ಸುಲಭವಾಗಿ
ಸಿಗದೆ ತನ್ನ ಶ್ರದ್ಧೆ, ಇರುವಿಕೆಯನ್ನು ಸತತವಾಗಿ ಸ್ಥಾಪಿಸಿಕೊಂಡರೆ ನಂತರ
ಯಶಸ್ಸು ಸಿಗುವುದೆಂದು ನುಡಿದ ಅವರು ಅತ್ಯಂತ ಕಠಿಣ ಪರಿಸ್ಥಿತಿಯಿಂದ ಬಂದ
ಮಕ್ಕಳು ತಮ್ಮ ಸಂಸ್ಥೆಗಳಲ್ಲಿ ಉತ್ತಮ ವ್ಯಾಸಂಗದಿಂದ ಸಾಧನೆ ಮಾಡಿ ಉದ್ಯೋಗ
ಪಡೆದುಕೊಂಡಿರುವುದು ಅತ್ಯಂತ ಆಶಾದಾಯಕ ವಿಚಾರವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಬೆಂಗಳೂರಿನ ಹೂಡಿಕೆ ಬ್ಯಾಂಕರ್ ಮತ್ತು
ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಸಿ.ವಿಷ್ಣುವರ್ಧನ್‍ರವರು ಮಾತನಾಡುತ್ತಾ
ಇಂದಿನ ಕಾಲದಲ್ಲಿ ವ್ಯಾಸಂಗ ಮುಗಿಸಿ ಕಾಲೇಜುಗಳಿಂದ ಹೊರಬರುತ್ತಿರುವ
ಪದವೀಧರರಿಗೆ ಅವಕಾಶಗಳ ಸಾಗರವೇ ಲಭ್ಯವಿದ್ದು ಸರಿಯಾದ
ಮಾರ್ಗದರ್ಶನದಲ್ಲಿ ಸಾಗಿದರೆ ಅವರ ಸಾಧನೆಗಳಿಗೆ ಮಿತಿಯೆಂಬುದೇ ಇಲ್ಲವೆಂದು
ಎಂದರು. ಪದವೀಧರರು ಚತುರ ಕಾರ್ಯಪ್ರವೃತ್ತಿಯನ್ನು ತಮ್ಮ
ವೃತ್ತಿಯಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತವಾಗಿಯೂ ದೊರಕುತ್ತದೆಂದು
ತಿಳಿಸಿದರು. ಇದೇ ಸಂದರ್ಭದಲ್ಲಿ 6 ವಿಭಾಗಗಳಿಂದ ಸುಮಾರು 300 ಅಂತಿಮ ವರ್ಷದ
ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸುವಿಕೆಯ
ಪ್ರಮಾಣಪತ್ರವನ್ನು ಪ್ರದಾನ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಆರ್
ಹುಲಿನಾಯ್ಕರ್‍ರವರು ಮಾತನಾಡುತ್ತಾ ಈ ಸ್ಪರ್ಧಾತ್ಮಕ ಯುಗದಲ್ಲಿ ಇಂಜಿನಿಯರಿಂಗ್
ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿವೆ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿ
ಸಾಧಿಸಬೇಕು. ವಿದ್ಯಾರ್ಥಿಗಳಿಗೆ ಯಶಸ್ಸೆಂಬುದು ನಿರಂತರ ಕಲಿಕೆ, ಸತತ ಪರಿಶ್ರಮ
ಮತ್ತು ಸೇವೆಯಿಂದಲೇ ಸಾಧ್ಯ ಎಂದು ತಿಳಿಸಿದರು. ಎಲ್ಲಾ ಪದವಿಧರರಿಗೆ
ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.
ಇದೇ ಸಮಾರಂಭದಲ್ಲಿ ಟ್ರಸ್ಟಿಯಾದ ಅಂಬಿಕಾ ಎಂ ಹುಲಿನಾಯ್ಕರ್ ಹಾಗೂ ಶ್ರೀದೇವಿ ಛಾರಿಟಬಲ್
ಟ್ರಸ್ಟ್‍ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶನರಾದ
ಎಂ.ಎಸ್.ಪಾಟೀಲ್‍ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದರು. ಇದೇ ಸಮಾರಂಭದಲ್ಲಿ
ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್‍ರವರು
ಮಾತನಾಡುತ್ತಾ ಶಿಕ್ಷಣವೆಂಬುದು ಮೌಲ್ಯಯುತ ಶಿಕ್ಷಣವಾಗಿದೆ, ಗುಣಾತ್ಮಕ ಶಿಕ್ಷಣ
ನೀಡುವುದರಲ್ಲಿ ಶ್ರೀದೇವಿ ವಿದ್ಯಾಸಂಸ್ಥೆಯೂ ಬಹುಮುಖ್ಯ ಪಾತ್ರ ವಹಿಸುತ್ತಿದೆ ಎಂದು
ತಿಳಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಯಶಸ್ಸೆಂಬುದು ನಿರಂತರ ಕಲಿಕೆ, ಸತತ
ಪರಿಶ್ರಮ ಮತ್ತು ಸೇವೆಯಿಂದಲೇ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ಸ್ವಾಗತಿಸಿ,
ಡಾ.ಕೆ.ಎಸ್.ರಾಮಕೃಷ್ಣ ವಂದಿಸಿ, ಪ್ರೊ.ಡಾ.ಸಿ. ನಾಗರಾಜ್ ನಿರ್ವಹಿಸಿದರು. ಡೀನ್
ಡಾ.ಚಂದ್ರಶೇಖರ್ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶ್ರೀದೇವಿ ಸಿವಿಲ್
ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ಸಂಯೋಜಕರಾದ
ಡಾ.ಜಿ.ಮಹೇಶ್‍ಕುಮಾರ್, ಪ್ರೊ.ಬಿ.ಹೆಚ್.ವಾಸುದೇವಮೂರ್ತಿ, ಪ್ರೊ.ಐಜಾಜ್ ಅಹಮ್ಮದ್
ಷರೀಫ್, ಪ್ರೊ.ಸಿ.ವಿ.ಷಣ್ಮುಖಸ್ವಾಮಿ, ಪ್ರೊ.ಜಿ.ಹೆಚ್. ರವಿಕುಮಾರ್, ಪ್ರೊ.ಡಾ.ಚೇತನಾ,
ಪ್ರೊ.ಡಾ.ಸದಾಶಿವಯ್ಯ ಹಾಗೂ ಬೋಧಕ-ಬೋಧಕೇತರ ವರ್ಗದವರು
ಹಾಜರಿದ್ದರು.