ತುರುವೇಕೆರೆ:
ಪಟ್ಟಣದತಾಲ್ಲೂಕು ಆರೋಗ್ಯ
ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರದಿನ
ಮತ್ತು ಸಪ್ತಾಹಕ್ಕೆ ಗೌರವಾನ್ವಿತ ಹಿರಿಯ
ನ್ಯಾಯಾಧೀಶರಾದ ಶ್ರೀ ಪಿ.ಎಂ.ಬಾಲಸುಬ್ರಮಣಿರವರು
ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ, ಭಾರತದೇಶದಲ್ಲಿ
ಗರ್ಭಿಣಿಯರು, ತಾಯಂದಿರು ಮತ್ತು ಮಕ್ಕಳು
ಕುಪೋಷಣೆಯಿಂದ ಬಳಲುತ್ತಿದ್ದಾರೆ. ಅಂಗನವಾಡಿ
ಶಿಕ್ಷಕಿಯರು ಪೌಷ್ಟಿಕ ಆಹಾರವನ್ನು
ಫಲಾನುಭವಿಗಳಿಗೆ ತಲುಪಿಸಿ ಪೌಷ್ಟಿಕಾಂಶ
ಕೊರತೆಯಿಂದಾಗುವ ರಕ್ತಹೀನತೆ ಮತ್ತು ಪ್ರೋಟಿನ್
ಎನರ್ಜಿ ಮಾಲ್ ನ್ಯೂಟ್ರಿಷನ್ ಅನ್ನು ತಡೆಗಟ್ಟಲು ಕರೆ
ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಸುಪ್ರಿಯಾರವರು
ಆರ್.ಬಿ.ಎಸ್.ಕೆ. ವೈದ್ಯರ ಪಾತ್ರ, ಅಂಗನವಾಡಿ ಶಿಕ್ಷಕಿಯರು,
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ
ಸಿಬ್ಬಂದಿಗಳ ಪಾತ್ರವನ್ನು ಶ್ಲಾಘಿಸಿದರು. ಮತ್ತು
ಕಾರ್ಯಕ್ರಮಕ್ಕೆ ಶುಭಕೋರಿದರು.
ಸಿಡಿಪಿಒ ಅರುಣ್‍ಕುಮಾರ್ ಮಾತನಾಡಿ ತಮ್ಮ ಇಲಾಖೆಯಲ್ಲಿ
ದೊರೆಯುವ ಪುಷ್ಟಿ ಸ್ಪೈರುಲಿನಾದ ಜೊತೆ ಆಹಾರ
ಪದಾರ್ಥಗಳನ್ನು ಸೇವಿಸಲು ಫಲಾನುಭವಿಗಳಿಗೆ
ತಿಳಿಸಿದರು.
ಆರ್.ಬಿ.ಎಸ್.ಕೆ.ವೈದ್ಯರಾದ ಡಾ.ವಿಂದ್ಯ ಮತ್ತು ಡಾ.ಶ್ರೀಧರ್
ರವರು ಮುಕ್ತ ಎದೆಹಾಲು ಸೇವನೆ, ಪೂರಕ ಆಹಾರ,
ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿದರು. ತಾಲ್ಲೂಕು ಆರೋಗ್ಯ
ಶಿಕ್ಷಣಾಧಿಕಾರಿ ಚಂದ್ರಶೇಖರ್‍ರವರು ಸ್ಥಳೀಯವಾಗಿ
ದೊರೆಯುವ ಹಣ್ಣು, ತರಕಾರಿ, ಸೂಕ್ಷ್ಮ ಮತ್ತು
ಸಮಗ್ರಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಿರಿಯ ನ್ಯಾಯಾಧೀಶರಾದ ಶ್ರೀ
ಪುರುಷೋತ್ತಮ, ವಕೀಲರಾದ ನಂದಿಶ್, ರಾಘವೇಂದ್ರ,
ಟಿ.ಎಲ್.ಹೆಚ್.ವಿ. ಶಿವಕ್ಕ, ಮೇಲ್ವಿಚಾರಕರಾದ ಯಶೋಧ,
ಮಮತ, ಮಹಾದೇವಿ, ಜ್ಯೋತಿ, ಲಲಿತ, ಶ್ವೇತ, ಆಶಾ
ಮತ್ತು ಅಂಗನವಾಡಿ ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು
ಉಪಸ್ಥಿತರಿದ್ದರು.