ತುರುವೇಕೆರೆ:
ಪಟ್ಟಣದ ಶ್ರೀ ಚಿದಂಬರೇಶ್ವರ ಉಚಿತ
ಗ್ರಂಥಾಲಯದ ವತಿಯಿಂದ ಸೆ 4 ರ ಭಾನುವಾರ ರಂದು
ಐದನೇ ವರ್ಷದ ಗಣಿತ, ವಿಜ್ಞಾನ ಕಮ್ಮಟವನ್ನು
ಏರ್ಪಡಿಲಾಗಿದೆ ಎಂದು ಸಂಸ್ಥೆಯ ಚೈತನ್ಯ ತಿಳಿಸಿದ್ದಾರೆ.
ಪಟ್ಟಣದ ತಮ್ಮ ಕಚೇರಿಯಲ್ಲಿ ಶನಿವಾರ
ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಗರ
ಪ್ರದೇಶದ ಮಕ್ಕಳಿಗೆ ವಿವಿಧ ಸಂಘ ಸಂಸ್ಥೆಗಳು
ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಹತ್ತು
ಹಲವಾರು ತರಬೇತಿ ಶಿಬಿರಗಳನ್ನು ಆಯೋಜಿಸುತ್ತವೆ.
ಆದರೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗಣಿತ
ಮತ್ತು ವಿಜ್ಞಾನ ಕುರಿತು ಯಾವುದೇ ತರಬೇತಿಗಳು
ಲಭ್ಯವಿರುವುದಿಲ್ಲ. ಅದನ್ನು ಮನಗಂಡ ತಮ್ಮ
ಚಿದಂಬರೇಶ್ವರ ಉಚಿತ ಗ್ರಂಥಾಲಯದ ವತಿಯಿಂದ ಪ್ರತಿ
ವರ್ಷವೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು 5
ನೇ ವರ್ಷದ ಕಾರ್ಯಕ್ರಮವಾಗಿದ್ದು ಸೆ 4 ಭಾನುವಾರ
ಗಣಿತ ಮತ್ತು ವಿಜ್ಞಾನ ಕಮ್ಮಟವನ್ನು ಏರ್ಪಡಿಸಲಾಗಿದೆ
ಎಂದು ಅವರು ತಿಳಿಸಿದರು.
ಸೆ 04 ರ ಭಾನುವಾರ ಬೆಳಗ್ಗೆ 9.45 ರಿಂದ ಸಾಯಂಕಾಲ 4.30 ರ
ವರೆಗೆ ಪಟ್ಟಣದ ಶ್ರೀ ಗಾಯತ್ರಿ ಭವನದಲ್ಲಿ ಕಮ್ಮಟವನ್ನು
ಏರ್ಪಡಿಸಲಾಗಿದೆ. ಇಸ್ರೋದಲ್ಲಿ ವಿಜ್ಞಾನಿಗಳಾಗಿರುವ
ಎಂ.ವಿ.ರೂಪಾರವರು ಸಮಾಜದ ಏಳ್ಗೆಗಾಗಿ ಬಾಹ್ಯಾಕಾಶ
ತಂತ್ರಜ್ಞಾನ ಕುರಿತು ಮಾತನಾಡಲಿದ್ದಾರೆ. ಗ್ಲೋಬಲ್
ಅಕಾಡಮಿ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರಾಗಿರುವ
ಡಾ.ರೂಪಾ ರವಿಪ್ರಸಾದ್ ರವರು ಮಹಾವೀರಚಾರ್ಯರ
ಗಣಿತಸಾರ ಸಂಗ್ರಹ ಕುರಿತು ಮಾತನಾಡಲಿದ್ದಾರೆ.
ಪ್ರಾಧಾಪಕರಾದ ಡಾ.ಜಿ.ವೆಂಕಟೇಶ್ ರವರು ಬದುಕು
ಬದಲಿಸುತ್ತಿರುವ ಕೃತಕ ಬುದ್ದಿಮತ್ತೆ ಕುರಿತು
ಮಾತನಾಡಲಿದ್ದಾರೆ. ತಮ್ಮ ಸಂಸ್ಥೆಯು ಪಠ್ಯೇತರ
ವಿಷಯಗಳಿಗೆ ಬಗ್ಗೆ ಒತ್ತು ನೀಡಿ ಮಕ್ಕಳಲ್ಲಿ ಗಣಿತ
ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ
ಕುತೂಹಲ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು
ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ
ರೈಲ್ವೆ ರಾಮಚಂದ್ರು, ಲಲಿತಾ ರಾಮಚಂದ್ರು ಮತ್ತು
ಪ್ರಮೋದ್ ಉಪಸ್ಥಿತರಿದ್ದರು.
3ಪೋಟೋ ಶಿರ್ಷಿಕೆ01 ಪಟ್ಟಣದಲ್ಲಿ ನಡೆಯಲಿರುವ ಗಣಿತ
ವಿಜ್ಞಾನ ಕಮ್ಮಟ ಕುರಿತು ಚೈತನ್ಯ ಮಾಹಿತಿ ನೀಡಿದರು.