ತುರುವೇಕೆರೆ:
ತಾಲೂಕಿನ ಮಾಯಸಂದ್ರ- ಟಿ.ಬಿ. ಕ್ರಾಸ್ ನಲ್ಲಿರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಎಸ್.ಬಿ.ಜಿ ವಿದ್ಯಾ ಶಾಲೆಯ 7ನೇ ತರಗತಿ ವಿದ್ಯಾರ್ಥಿ ನಿಹಾಲ್ ಎಂ, ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದು ಶಾಲೆಗೆ ಮತ್ತು ಪೆÇೀಷಕರಿಗೆ ಕೀರ್ತಿ ತಂದಿದ್ದಾನೆ.
ತಾಲೂಕಿನ ಟಿ.ಬಿ.ಕ್ರಾಸ್ ನವಾಸಿ ಡಾ.ಮಂಜುನಾಥ್ ಆರಾಧ್ಯ, ಮಹಾಲಕ್ಷ್ಮಿ ದಂಪತಿಗಳ ಪುತ್ರ ನಿಹಾಲ್ ಎಂ,ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ಓಪನ್ ಮೂರನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ 2022 ರಲ್ಲಿ ಅಶೋಕ್ ಮಾರ್ಟಿಯಲ್ ಆಟ್ರ್ಸ್ ಅಕಾಡೆಮಿ (ರಿ) ತುರುವೇಕೆರೆ ಬ್ರಾಂಚ್, ಕರಾಟೆ ಮಾಸ್ಟರ್ ಆನಂದ್ ಕುಮಾರ್ ನೇತೃತ್ವದಲ್ಲಿ ಭಾಗವಹಿಸಿದ್ದ ನಿಹಾಲ್ ಎಂ, ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾನೆ. ಪಂದ್ಯಾವಳಿಯಲ್ಲಿ ಹೊರದೇಶದಿಂದ ಸಾಕಷ್ಟು ಸ್ಪರ್ದಿಗಳು ಭಾಗವಹಿಸಿ ಸ್ಪರ್ಧಿಸಿದ್ದರು, ಪೈಪೆÇೀಟಿ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿರುವ ನಿಹಾಲ್ ಉತ್ತಮ ಸಾಧನೆ ಮಾಡಿದಿರುವುದಾಗಿ ಅಭಿನಂದಿಸಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಪ್ರಸನ್ನನಾಥ ಸ್ವಾಮೀಜಿ ಅವರು ಮತ್ತು ಶಾಲಾ ಆಡಳಿತ ಮಂಡಳಿ ಶಾಲಾ ಆವರಣದ ಕಾರ್ಯಕ್ರಮವೊಂದರಲ್ಲಿ ಗೌರವಿಸಿ ಅಭಿನಂದಿಸಿದೆ.
ಈ ಸಂದರ್ಭದಲ್ಲಿ ಕ.ಸಾ.ಪ. ತಾಲೂಕು ಅಧ್ಯಕ್ಷ ಡಿ.ಪಿ. ರಾಜು. ಪೆÇ್ರ.ಪುಟ್ಟರಂಗಪ್ಪ.ಗ್ರಾ.ಪಂ. ಅಧ್ಯಕ್ಷರಾದ ಜಾಬಿರ್ ಹುಸೇನ್. ಮತ್ತು ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಮುಂತಾದ ಗಣ್ಯರು ಉಪಸ್ಥಿತರಿದ್ದರು.