ತುಮಕೂರು :
ಸೆಪ್ಟಂಬರ್ 2 2018 ರಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕರ್ಯರ್ತನಾಗಿ ಕೆಲಸ ಮಾಡಿಕೊಂಡಿದ್ದು ಕ್ಷೇತ್ರದ ಜನರ ವಿಶ್ವಾಸ ಗಳಿಸಿದ ಕಾರಣಕ್ಕಾಗಿ ಈ ಬಾರಿ ಪಕ್ಷ ನನಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವ ಹಂಬಲದಿಂದ ಪ್ರಬಲ ಆಕಾಂಕ್ಷಿ ಯಾಗಿದ್ದೇನೆ ಎಂದು ತುಮಕೂರು ನಗರದ ಸರ್ಯ ಆಸ್ಪತ್ರೆಯ ಮುಖ್ಯಸ್ಥ ಡಾ ಲಕ್ಷ್ಮಿಕಾಂತ್ ಅವರು ತಿಳಿಸಿದರು.
ನಗರದ ವಿನೋಬನಗರ ದಲ್ಲಿರುವ ಸರ್ಯ ಆಸ್ಪತ್ರೆಯಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕರ್ಯರ್ತರು ಹಾಗೂ ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸಿ ಕರ್ಯರ್ತರ ಕುಶಲೋಪರಿ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕರ್ಯರ್ತನಾಗಿ ಹಲವು ರ್ಷಗಳಿಂದ ಬಿಜೆಪಿ ಪಕ್ಷಕ್ಕೆ ದುಡಿದಿದ್ದು ಈ ಬಾರಿ ಪಕ್ಷ ನನಗೆ ಮನ್ನಣೆ ನೀಡಿ ಆಕಾಂಕ್ಷಿ ಸ್ಥಾನಕ್ಕೆ ಟಿಕೆಟ್ ನೀಡಿದರೆ ಈ ಬಾರಿ ಕ್ಷೇತ್ರದಲ್ಲಿ ಸ್ರ್ಧಿಸಿ ಗೆದ್ದು ಸಮಾಜಸೇವೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು.
ನಾನು ವೃತ್ತಿಯಲ್ಲಿ ವೈದ್ಯನಾಗಿದ್ದು ವೈದ್ಯ ಸೇವೆಯ ಜೊತೆಗೆ ಸಮಾಜ ಸೇವೆ ಮಾಡುವುದು ನನ್ನ ದೆಯೋದ್ದೇಶವಾಗಿದ್ದು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬ ಕುಟುಂಬದ ಪ್ರಜೆಯು ನನ್ನ ಮನೆ ಮಕ್ಕಳ ಂತೆ ಸೇವೆ ಮಾಡುವ ಆಸೆ ಇದೆ ಎಂದು ಅವರು ಇದೇ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಕರ್ಯರ್ತ ದೊಡ್ಡಯ್ಯ ಅವರು ಮಾತನಾಡಿ ಡಾ ಲಕ್ಷ್ಮಿಕಾಂತ್ ಅವರು ಪರಿಶಿಷ್ಟ ಜಾತಿ ಹಾಗೂ ತಳಸಮುದಾಯಗಳ ಬಗ್ಗೆ ಆಸಕ್ತಿ ಹೊಂದಿದ್ದು 2018 ರಿಂದಲೂ ಬಿಜೆಪಿ ಪಕ್ಷದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದಾರೆ ಕೂಡಲೇ ಪಕ್ಷದ ವರಿಷ್ಠರು ಇವರನ್ನ ಗುರುತಿಸಿ ಟಿಕೆಟ್ ನೀಡಿದರೆ ಕ್ಷೇತ್ರದ ಜನತೆಯನ್ನು ತಮ್ಮ ಮನೆಯ ಮಕ್ಕಳಂತೆ ಪಾಲನೆ ಮಾಡುತ್ತಾರೆ ಹೀಗಾಗಿ ಅವರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಸದ ಬಸವರಾಜ್ ಅವರು ಟಿಕೆಟ್ ಕೊಡಿಸುವಲ್ಲಿ ಕೊಡಿಸುವಲ್ಲಿ ಸಫಲರಾಗಬೇಕು ಎಂದು ಈ ವೇಳೆ ಜಿಲ್ಲಾ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುರವಾರ ಹೋ. ಕೊಡಗದಾಲ ಗ್ರಾಮದ ನರಸಿಂಹಮರ್ತಿ ಅವರು ಮಾತನಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಾ ಲಕ್ಷ್ಮಿಕಾಂತ್ ಅವರು ಸಮಾಜ ಸೇವೆಯಲ್ಲಿ ತನ್ನ ಆರ್ಶ ಗುರಿ ಎಂದು ಗುರುತಿಸಿಕೊಂಡಿರುವ ಅವರು ನಮ್ಮ ಕ್ಷೇತ್ರದಲ್ಲಿ ಆಕಾಂಕ್ಷಿಯಾಗಿ ಇರುವುದು ನಮ್ಮ ಪುಣ್ಯ ವಾಗಿದ್ದು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮಹಿಳೆಯರು ಮತ್ತು ಯುವಕರು ಹಾಗೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಇಂತಹ ರಾಜಕಾರಣಿ ಕ್ಷೇತ್ರಕ್ಕೆ ಅವಶ್ಯಕತೆ ಇದ್ದು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕಳೆದ ಹತ್ತು ರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂತಹವರಿಗೆ ಪಕ್ಷ ಟಿಕೆಟ್ ನೀಡಿ ಮನ್ನಣೆ ನೀಡಬೇಕು ಇಂಥವರು ನಮ್ಮ ಕ್ಷೇತ್ರದ ನಾಯಕನಾಗಲು ರ್ಹ ಎಂದು ಅವರು ಇದೇವೇಳೆ ತಿಳಿಸಿದರು.
ಅರುಣೋದಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಲ್ .ಮುಕುಂದ ಅವರು ಪ್ರತಿಕ್ರಿಯಿಸಿ ಮಾತನಾಡಿ ತುಮಕೂರು ಜಿಲ್ಲೆಯ ಮಾದಿಗ ಸಮುದಾಯದ ನಾಯಕರಾಗಿರುವ ಡಾ. ಲಕ್ಷ್ಮಿಕಾಂತ್ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿನಿಧಿಯಾಗಿ ಪ್ರತಿನಿಧಿಸುತ್ತಿರುವುದು ಶ್ಲಾಘನೀಯವಾಗಿದೆ ಕಳೆದ ಹಲವಾರು ರ್ಷಗಳಿಂದ ಕ್ಷೇತ್ರದಲ್ಲಿ ದುಡಿದು ಸಮುದಾಯವನ್ನು ಒಗ್ಗೂಡಿಸಿ ಅಭಿವೃದ್ಧಿಗೊಳಿಸುವ ಯಾವೊಬ್ಬ ನಾಯಕನೂ ಇಲ್ಲದಿರುವ ಕಾರಣದಿಂದಾಗಿ ಲಕ್ಷ್ಮಿಕಾಂತ್ ಅವರು ಇದೀಗ ಮಿಂಚಿನಂತೆ ಕ್ಷೇತ್ರದಲ್ಲಿ ಸಂಚರಿಸಿ ತಳಸಮುದಾಯದ ಬಡಜನರ ಕಷ್ಟಕರ್ಪಣ್ಯಗಳನ್ನು ಪಾಲಿಸುತ್ತಿರುವುದು ಎಲ್ಲರೂ ಕಂಡಿರುವ ವಿಚಾರವಾಗಿದ್ದು ಈ ಭಾಗದ ಜನರು ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಲಕ್ಷ್ಮಿಕಾಂತ್ ಅವರಿಗೆ ಮನ್ನಣೆ ನೀಡಿ ಕ್ಷೇತ್ರದ ಅಭಿವೃದ್ಧಿ ಮತ್ತು ಸಮುದಾಯದ ಬೆಳವಣಿಗೆಗಾಗಿ ಎಲ್ಲರೂ ಕೂಡ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಈ ವೇಳೆ ಜನರಲ್ಲಿ ಮನವಿ ಮಾಡಿದರು.
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಾ. ಲಕ್ಷ್ಮಿಕಾಂತ್ ಅವರಿಗೆ ಕ್ಷೇತ್ರದ ಜನರು ಸ್ನೇಹಿತರು ಅಪಾರ ಅಭಿಮಾನಿಗಳು ಹಾಗೂ ಬಿಜೆಪಿ ಕರ್ಯರ್ತರು ಶುಭಕೋರಿ ಅಭಿನಂದಿಸಿದರು.
ಈ ವೇಳೆ ಲೇಖಕ ಹಾಗೂ ವಕೀಲ ದಿನೇಶ್, ಪಾಲಸಂದ್ರ ಹನುಮಂತರಾಯಪ್ಪ, ಗುತ್ತಿಗೆ ದಾರ ರವಿಕುಮಾರ್, ರಾಯವಾರ ಮಾರುತಿ ಅವರ ತಂಡ ಸೇರಿದಂತೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹಾಗೂ ಹೊಳವನಹಳ್ಳಿ ಹೋಬಳಿಯ ಬಿಜೆಪಿ ಕರ್ಯರ್ತರು ಹಾಗೂ ಲಕ್ಷ್ಮಿಕಾಂತ್ ಅಭಿಮಾನಿಗಳು ಸೇರಿದಂತೆ ಇತರರು ಇದ್ದರು.