ಕೊರಟಗೆರೆ :
ಬಡವರ ಮತ್ತು ಸಂತ್ರಸ್ಥರ ನೆರವಿಗೆ ಸ್ವಯಂ ಸೇವಕ ಸಂಘಗಳೊಂದಿಗೆ ಇಲಾಖಾ ಆಧಿಕಾರಿಗಳು ಸ್ಪಂದಿಸಿದರೆ ಸಾಮಾಜಿಕ ಸೇವೆಗಳು ಉತ್ತಮವಾಗಿ ನಡೆಯಲ್ಲಿದೆ ಇದಕ್ಕೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ರವರ ಕಾರ್ಯವೈಕರಿ ಸಾಕ್ಷಿಯಾಗಿದೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿಗಳು ತಿಳಿಸಿದರು.
ಅವರು ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿಯ ಗಾಂಧಿನಗರದಲ್ಲಿ ರಾಮಕೃಷ್ಣ ಸೇವಾಶ್ರಮ ಮತ್ತು ಬೆಂಗಳೂರು ಇನ್ಪೋಸಿಸ್ ಪೌಡೇಷನ್ ಸಹಕಾರ ದಿಂದ ಮಳೆಯಿಂದ ಹಾನಿಗೊಳಗಾಗಿದ್ದ ಗುಡಿಸುಲುಗಳಲ್ಲಿ ವಾಸಿಸುತ್ತಿದ್ದ ದಲಿತರಿಗೆ ಮತ್ತು ಇತರ ಪ್ರದೇಶಗಳ ಜನರಿಗೆ ಸೊಲಾರ್ ಲೈಟ್, ಟಾರ್ಪಲ್, ಬಟ್ಟೆಗಳು ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿ ರಾಮಕೃಷ್ಣ ಆಶ್ರಮ ಎಂದರೆ ನೊಂದವರ ಸೇವೆಗೆ ಎನ್ನುವ ಅರ್ಥದಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇವೆ ಇದಕ್ಕೆ ತಾಯಿ ಸುಧಾಮೂರ್ತಿ ರವರ ಸಹಾಯ ಹಸ್ತ ಸದಾ ಇರುತ್ತದೆ.
ಗಾಂಧಿನಗರದಲ್ಲಿ ಇಂತಹ ಪರಿಸ್ಥಿತಿ ನೋಡಿ ನಾವು ಯಾವಕಾಲದಲ್ಲಿ ಇದ್ದೇವೆ ಎನ್ನಿಸುತ್ತದೆ ಕ್ಷೇತ್ರದಲ್ಲಿ ಒಳ್ಳೆಯ ಶಾಸಕರಿದ್ದಾರೆ ಆದರೆ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಗಾಂಧಿನಗರದ ಪರಿಸ್ಥಿತಿ ನೋಡಿ ನೊಂದವರ ಸೇವೆಗಾಗಿ ಬಂದಿದ್ದೇವೆ, ಇಂದು ಭಾನುವಾರವಾಗಿದ್ದು ಅಧಿüಕಾರಿಗಳಿಗೆ ಸರ್ಕಾರಿ ರಜೆ ಇದ್ದರೂ ಸಹ ತಾಲೂಕಿನ ತಹಶೀಲ್ದಾರ್ ನಾಹೀದಾ ಜಮ್ ಜಮ್ ರವರು ಬೆಳಿಗ್ಗೆಯೇ ಗಾಂಧಿನಗರಕ್ಕೆ ಬೇಟಿ ನೀಡಿ ನೋಂದವರ ನೆರವಿಗೆ ನಮ್ಮೊಂದಿಗೆ ಸಹಕರಿಸಿರುವುದು ಇಂತಹ ಅಧಿಕಾರಿಗಳ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿಗಳು ಇಂದು ತಾಲೂಕಿನ ಗಾಂಧಿನಗರದ ದಲಿತ ಕಾಲೋನಿಯ ಗುಡಿಸಿಲುಗಳಿಗೆ ಸಹಾಯ ಹಸ್ತ ಮಾಡಿರುವುದಕ್ಕಾಗಿ ತಾಲೂಕು ಆಡಳಿತ ವತಿಯಿಂದ ಶ್ರೀಗಳಿಗೆ ಅಭಿನಂದಿಸುತ್ತದೆ. ಈಗಾಗಲೆ ಕ್ಷೇತ್ರದ ಶಾಸಕರು ಗುಡಿಸಿಲುಗಳ ಸ್ಥಳದಲ್ಲಿ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಶೀಘ್ರವಾಗಿ ಕ್ರಮ ಗೈಗೊಳ್ಳುವಂತೆ ಅಧಿಕಾರಿಗಳ ಸಭೆ ನಡೆಸಿ ಆದೇಶಿಸಿದ್ದಾರೆ ಅದರಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.