ತುಮಕೂರು :
ಸುಮಾರು ನೂರು ವರ್ಷಗಳ ಇತಿಹಾಸ ವಿರುವ ದೇಶದ ಗರಡಿ ಮನೆ ವತಿಯಿಂದ ಇನ್ನು ಮುಂದೆ ಪ್ರತಿವರ್ಷ ದೇಹದಾಢ್ಯ ಮತ್ತು ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗುವುದು ಎಂದು ತುಮಕೂರು ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ರಾಕ್ ರವಿಕುಮಾರ್ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ದೇಶದ ಗರಡಿ ಮನೆ ಯೂತ್ಸ್ ಅಸೋಸಿಯೇಷನ್(ರಿ) ಹೊರಪೇಟೆ ವತಿಯಿಂದ 75ನೇ ವರ್ಷದ ಸ್ವಾತಂತ್ರ ದಿನದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆಹ್ವಾನಿತ ದೇಹದಾಢ್ಯ ಸ್ಪರ್ಧೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು, ಸಾವಿರಾರು ದೇಹದಾಢ್ಯಪಟುಗಳು ಮತ್ತು ಕುಸ್ತಿ ಪಟುಗಳನ್ನು ತಯಾರಿಸಿರುವ ದೇಶದ ಗರಡಿ ಮನೆಯ ಸಂಸ್ಥಾಪಕರಾದ ಪೈಲಾನ್ ಪುಟ್ಟಣ್ಣ ಅವರ ಮೊಮ್ಮಗನಾದ ಸುಮನ್ ಮತ್ತು ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಇಲಾಖೆಯ ನೌಕರರಾದ ಸೈಮನ್ ವಿಕ್ಟರ್ ಅವರುಗಳ ಪರಿಶ್ರಮದಿಂದ ಗರಡಿ ಮನೆಯಿಂದ ಹೊಸ ಚೇತನ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ನಿರಂತರವಾಗಿ ಕ್ರೀಡಾ ಚಟುಟವಟಿಕೆಗಳು ನಡೆಯಲಿವೆ ಎಂದರು.
ತುಮಕೂರು ಸ್ಮಾರ್ಟ್‍ಸಿಟಿಯಿಂದ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ಕುಸ್ತಿ ಅಂಕಣವನ್ನು ನಿರ್ಮಾಣ ಮಾಡಲಾಗಿದೆ.ಹಿರಿಯ ಕುಸ್ತಿ ತರಬೇತುದಾರರಾದ ಹುಲ್ಲೂರಯ್ಯ ಸೇರಿದಂತೆ ಹಲವರು ಸಹಕಾರದಿಂದ ನಮ್ಮ ಜಿಲ್ಲೆಯ ಮಕ್ಕಳು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡುವುದು ನಮ್ಮ ಮುಂದಿರುವ ಸವಾಲಾಗಿದೆ.ಮುಂದಿನ ದಿನಗಳಲ್ಲಿ ತುಮಕೂರು ನಗರದಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರಲಿವೆ ಎಂದು ರಾಕ್ ರವಿಕುಮಾರ್ ತಿಳಿಸಿದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಮಾತನಾಡಿ,ಕೋವಿಡ್ ನಂತರದಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಹಾಗಾಗಿ ಕ್ರೀಡೆಗಳ ಕಡೆಗೆ ಹೆಚ್ಚಿನ ಗಮನಹರಿಸುತ್ತಿದ್ದಾರೆ.ತುಮಕೂರು ನಗರದಲ್ಲಿ ಸರಕಾರದವತಿಯಿಂದಲೇ ಮೂರು ಜಿಮ್‍ಗಳಿವೆ.ಇದರ ಜೊತೆಗೆ ಖಾಸಗಿಯಾಗಿ ವಾರ್ಡಿಗೊಂದು ಜಿಮ್ ತೆರೆದಿದ್ದಾರೆ. ಆದರೆ ಖಾಸಗಿ ಜಿಮ್‍ಗಳಿಗೆ ಹಣ ತರುವಷ್ಟು ಶಕ್ತಿ ನಮ್ಮ ಯುವಕರಲ್ಲಿ ಇಲ್ಲ. ಹಾಗಾಗಿ ಸರಕಾರದ ವತಿಯಿಂದ ಹೈಸ್ಕೂಲ್ ಮೈದಾನದಲ್ಲಿ ಸುಮಾರು 2.10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಜಿಮ್ಸ್‍ನ ಪರಿಕರಗಳು ತುಕ್ಕು ಹಿಡಿಯುತ್ತಿವೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಸದರಿ ಜಿಮ್ ತೆರೆದು ಸಾರ್ವಜನಿಕರ ಅಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕು.ಇಲ್ಲದಿದ್ದರೆ ನಾವೇ ಅದರ ಬೀಗ ಹೊಡೆದು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ತುಮಕೂರು ಸೇರಿದಂತೆ ಪ್ರತಿಭಾವಂತ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಹಣಕಾಸಿನ ತೊಂದರೆ ಇದ್ದರೆ,ಕ್ರೀಡಾ ಸಂಘಗಳನ್ನು ಸಂಪರ್ಕಿಸಿದರೆ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ.ಅಲ್ಲದೆ ಸರಕಾರಿ ನೌಕರರ ಸಂಘದಿಂದಲೂ ಸಹಾಯ ಮಾಡಲು ಸಿದ್ದ.ಇದರ ಸದುಪಯೋಗವನ್ನು ಅಗತ್ಯವಿರುವ ಕ್ರೀಡಾಪಟುಗಳು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಶದ ಗರಡಿ ಮನೆ ಅಧ್ಯಕ್ಷ ಜಗದೀಶ್ ವಹಿಸಿದ್ದರು. ವೇದಿಕೆಯಲ್ಲಿ ನಗರಪಾಲಿಕೆ ವಿರೋಧಪಕ್ಷದ ನಾಯಕ ಜೆ.ಕುಮಾರ್, ಮಾಜಿ ನಗರಸಭಾ ಸದಸ್ಯ ಹೆಚ್.ಟಿ.ಬಾಲಕೃಷ್ಣ (ಕಿಟ್ಟಿ), ರಾಷ್ಟ್ರೀಯ ಕುಸ್ತಿಪಟು ಸೈಮನ್ ವಿಕ್ಟರ್, ಅಂತರ ರಾಷ್ಟ್ರೀಯ ವೇಯ್ಟ್ ಲಿಪ್ಟರ್ ಕಿರಣ್‍ರೆಡ್ಡಿ, ಮಹಾನಗರಪಾಲಿಕೆ ಸದಸ್ಯ ಮಹಮದ್ ಬಾಬು ಉಬೇದ್ ಉಲ್ಲಾ, ದೇಶದ ಗರಡಿ ಉಪಾಧ್ಯಕ್ಷ ಸಿ.ಪಿ.ಸುಧೀರ್, ಜಯಕರ್ನಾಟಕ ಜಿಲ್ಲಾಧ್ಯಕ್ಷ ರಂಗಸ್ವಾಮಿ, ನಾಗಣ್ಣ, ಸುಧಾಕರ್, ಕುಸ್ತಿ ತರಬೇತುದಾರರಾದ ತಿಮ್ಮೇಗೌಡ, ಹುಲ್ಲೂರಯ್ಯ, ದೇಶದ ಗರಡಿ ಮನೆಯ ಸಮುನ್ ಮತ್ತಿತರರು ಉಪಸ್ಥಿತರಿದ್ದರು. ದೇಹದಾಢ್ಯದ ಪುಶ್ಯಪ್ಸ್‍ನಲ್ಲಿ ಚಂದನ್ ಶರ್ಮ ಪ್ರದರ್ಶನ ನೀಡಿದರು. ದೇಹದಾಢ್ಯ ಪಟುಗಳು ಪ್ರದರ್ಶನ ನೀಡಿದರು.