ಕೊರಟಗೆರೆ:
ಶಿಕ್ಷಣವು ಬೃಹತ್ ಕ್ರಾಂತಿಕಾರಕ ಶಕ್ತಿಯಾಗಿದ್ದು ಸಮಾಜವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಕೊರಟಗೆರೆ ತಾಲೂಕಿನಲ್ಲಿ ಇಂದಿನ ಶಿಕ್ಷಕ ದಿನಾಚರಣೆ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಕೃಷ್ಣನ್ ರವರ 135 ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತದಲ್ಲಿ ಶಿಕ್ಷಣವು ಸನಾತನ ಐತಿಹಾಸಿಕ ಸಂಸ್ಕøತಿಯ ಗುರು ಪರಂಪರೆಯಲ್ಲಿ ಗುರುಕುಲದಲ್ಲಿ ನೀಡಲಾಗುತ್ತಿತ್ತು, ಆ ಕಾಲದಲ್ಲಿ ಗುರುವಿಗೆ ದೇವರಿಗಿಂತಲೂ ಹೆಚ್ಚಿನ ಸ್ಥಾನವಿತ್ತು, ಬ್ರಿಟೀಷರ ಆಳ್ವಿಕೆಯಲ್ಲಿ ಶೇ.1.5 ರಷ್ಟು ಇದ್ದ ಶಿಕ್ಷಣವು ಸ್ವತಂತ್ರ್ಯ ಭಾರತದ ಆರಂಭದಲ್ಲಿ ಶೇ.12 ರಷ್ಟು ಇದ್ದು ದೇಶದಲ್ಲಿ ಇಂದು ಸಾಕ್ಷರತೆಯ ಶೇ.80 ರಷ್ಟು ಅಕ್ಷರಸ್ಥರಿದ್ದಾರೆ, ಇದು ದೇಶದ ಬಹುದೊಡ್ಡ ಶಿಕ್ಷಣ ಕ್ರಾಂತಿಯಾಗಿದ್ದು ಇದಕ್ಕೆ ಕಾರಣ ಶಿಕ್ಷಕರಾಗಿದ್ದಾರೆ, ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಕೃಷ್ಣನ್ ಶಿಕ್ಷಕರ ಪ್ರತಿ ಬಿಂಬವಾಗಿದ್ದು, ಶಿಕ್ಷಣ ಕ್ರಾಂತಿಯ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲ್ಲೆ ಕೊಟ್ಯಾಂತರ ಹೆಣ್ಣು ಮಕ್ಕಳ ಶಿಕ್ಷಣದ ಸಾಧನೆಗೆ ಸ್ಪೋರ್ತಿಯಾಗಿದ್ದು ಸಾವಿತ್ರಿಬಾಯಿ ರವರ ಅಂದಿನ ತ್ಯಾಗ ಮತ್ತು ಹೋರಾಟ ಇಂದು ದೇಶದಲ್ಲಿ ಮಹಿಳೆಯರ ಬಹುದೊಡ್ಡ ಸಾದನೆಗೆ ಮುಖ್ಯಕಾರಣವಾಗಿದೆ ಎಂದರು.
ದೇಶದ ಪ್ರಗತಿ ಶಿಕ್ಷಣದ ಮೇಲೆ ನಿಂತ್ತಿದ್ದು ಭಾರತದ ಜಾತಿ ವ್ಯವಸ್ಥೆಯಲ್ಲಿ ಕೆಲವೇ ಸಮುದಾಯಗಳಿಗೆ ಮೀಸಲಿದ್ದ ಶಿಕ್ಷಣವನ್ನು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣವನ್ನು ರಚಿಸಿದರು, ಆಗ ದೇಶದಲ್ಲಿ ಬಹುದೊಡ್ಡ ಬದಲಾವಣೆಯಾಗಿ ತುಳಿತಕ್ಕೆ ಒಳಗಾದ ಸಮುದಾ ಯಗಳು ಸಹ ಶಿಕ್ಷಣ ಕ್ರಾಂತಿಯಿಂದ ಮುಂದೆ ಬಂದರು, ಅಂಬೇಡ್ಕರ್ ರವರು ಪ್ರಪಂಚಕಂಡ ಉತ್ತಮ ಕಲಿಕೆಗಾರರು ಹಾಗೂ ಶಿಕ್ಷಕ ತಜ್ಞರಲ್ಲಿ ಒಬ್ಬರು, 1986 ರಿಂದ 2020 ವರಗೂ ಕ್ರಮ ಶಿಕ್ಷಣ ವಿದ್ದು ದೇಶದಲ್ಲಿ ದೊಡ್ಡ ಬದಲಾವಣೆಯಾಗಿದೆ ಅದರೆ ಸರ್ಕಾರವು ಶಿಕ್ಷಣ ನೀತಿಯನ್ನು ಬದಲಾಯಿಸುತ್ತಿರುವುದು ಗೊಂದಲವಾಗಿದೆ ಎಂದರು,
ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾದಿಕಾರಿ ಡಾ.ದೊಡ್ಡಸಿದ್ದಪ್ಪ, ಬಿಇಓ ಸುಧಾಕರ್, ಪ.ಪಂ.ಅಧ್ಯಕ್ಷೆ ಕಾವ್ಯಶ್ರೀ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜು, ಸದಸ್ಯ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ಒಕ್ಕಲಿಗರ ಸಂಘದ ಆಧ್ಯಕ್ಷ ಹನುಮಂತರಾಯಪ್ಪ, ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಕಸಾಪ ಅಧ್ಯಕ್ಷ ಕೃಷ್ಣಮೂರ್ತಿ,
ಪ್ರಾರ್ಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಜಿ.ಹನುಮಂತರಾಯಪ್ಪ, ಪ್ರೌಢಶಾಲಾ ಮುಖ್ಯಶಿಕ್ಷರ ಸಂಘದ ಅಧ್ಯಕ್ಷ ನರಸಿಂಹರಾಜು, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೋಟೆಕಲ್ಲಯ್ಯ, ಜಿಲ್ಲಾ ಸಾವಿತ್ರಿ ಶಿಕ್ಷಕಿಯ ಸಂಘದ ಅಧ್ಯಕ್ಷ ರಾಧಮ್ಮ, ಅಕ್ಷರ ದಾಸೋಹ ಅಧಿಕಾರ ರಘು, ಕೃಷಿ ಅಧಿಕಾರಿ ನಾಗರಾಜು, ಅರಣ್ಯ ಇಲಾಖಾ ಅಧಿಕಾರಿ ಸುರೇಶ್, ಹಿಂದುಳಿದ ವರ್ಗಗಳ ಅಧಿಕಾರಿ ಅನಂತರಾಜು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್ ಸೇರಿದಂತ ತಾಲೂಕಿನ ಎಲ್ಲಾ ಶಿಕ್ಷಕರು ನಿವೃತ್ತ ಶಿಕ್ಷಕರು ಹಾಜರಿದ್ದರು.
(Visited 1 times, 1 visits today)