ತುಮಕೂರು :
ಶ್ರೀದೇವಿ ಫಿಸಿಯೋಥೆರಪಿ ಕಾಲೇಜಿನ ವತಿಯಿಂದ ವಿಶ್ವ ಭೌತಚಿಕಿತ್ಸಾ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ಅದರ ಅಂಗವಾಗಿ ಜನಸಾಮಾನ್ಯ ಭೌತಚಿಕಿತ್ಸಾ ಪದ್ದತಿಯಲ್ಲಿರುವ ವಿವಿಧ ಚಿಕಿತ್ಸಾ ವಿಧಾನಗಳ ಬಗ್ಗೆ ಅರಿವುವನ್ನು ಮೂಡಿಸಲು ನಮ್ಮ ಶಿಕ್ಷಣ ಸಂಸ್ಥೆಯಿಂದ ಜಾಥಾವನ್ನು ಏರ್ಪಡಿಸಲಾಗಿದೆ. ಭೌತಚಿಕಿತ್ಸಾ ಪದ್ದತಿಯಲ್ಲಿ ವಿವಿಧ ವಿಭಾಗಗಳಿದ್ದು ಮುಖ್ಯವಾಗಿ ನರರೋಗಗಳಿಗೆ ಸಂಬಂಧಪಟ್ಟ ಭೌತಚಿಕಿತ್ಸಾ ವಿಧಾನ, ಕೀಲು ಮತ್ತು ಮೂಳೆ ರೋಗಗಳಿಗೆ ಸಂಬಂಧಪಟ್ಟ ವಿಧಾನ ಮತ್ತು ಶ್ವಾಸಕೋಶ ಹಾಗೂ ಹೃದಯರೋಗ ಸಂಬಂಧಪಟ್ಟ ಚಿಕಿತ್ಸೆಗಳು ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಹಾಗೂ ವೃದ್ದರ ಆರೋಗ್ಯ, ಔದ್ಯೋಗಿಕ ಆರೋಗ್ಯ, ಮಹಿಳೆಯರ ಆರೋಗ್ಯ, ಗರ್ಭೀಣಿ ಮತ್ತು ಬಾಣಂತಿಯರ ಆರೈಕೆ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಸಂಬಂಧಪಟ್ಟ ಕಾಯಿಲೆಗಳಿಗೆ ವಿವಿಧ ಭೌತಚಿಕಿತ್ಸಾ ಪದ್ದತಿಗಳನ್ನು ವಿಶೇಷ ಸಮಲೋಚನೆಯ ಮೂಲಕ ನೀಡಲಾಗುತ್ತಿದೆ. ನಮ್ಮ ಕಾಲೇಜಿನಲ್ಲಿ
ಫಿಸಿಯೋಥೆರಪಿ ಪದವಿ ಶಿಕ್ಷಣ (ಬಿ.ಪಿ.ಟಿ.)ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ (ಎಂ.ಪಿ.ಟಿ.) ನಮ್ಮ ಕಾಲೇಜಿನಲ್ಲಿ ವ್ಯಾಸಂಗಕ್ಕಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಅಂಗೀಕೃತ ಅನುಮತಿ ದೊರಕಿರುತ್ತದೆ ಎಂದು ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‍ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ವಿಶ್ವ ಫಿಸಿಯೋಥೆರಪಿ ದಿನದ ಅಂಗವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ
ಜಾಥಾವನ್ನು ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವೃತ್ತದವರೆಗೆ ಜಾಥಾವನ್ನು ಸೆ.8 ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಪ್ರೊ.ಟಿ.ವಿ.ಬ್ರಹ್ಮದೇವಯ್ಯರವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಕೋವಿಡ್ ನಂತರದ ಶ್ವಾಸಕೋಶ ಸಂಬಂಧಪಟ್ಟ ಪುನರ್‍ವಸತಿಯಾಗಿರುವುದು ಅಥವಾ ಮುಖ್ಯವಾದ ನರರೋಗಕ್ಕೆ ಸಂಬಂಧಪಟ್ಟ ಬಾಹ್ಯ ನರಶೂಲೆ, ಪೋಲಿಯೋ,
ಮಧುಮೇಹ ನರರೋಗ ಸೆರೆಬ್ರಲ್ ಪಾಲ್ಸಿ, ಮಸ್ಕ್ಯಲರ್ ಡಿಸ್ಟ್ರೋಫಿ, ಆಟಿಸಂ, ಜನ್ಮಜಾತ ಅಸ್ವಸ್ಥತೆಗಳಿಗೆ ನಮ್ಮ ಶ್ರೀದೇವಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳಿರುತ್ತವೆ ಎಂದು ತಿಳಿಸಿದರು.
ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇಂದ್ರಕುಮಾರ್, ಶ್ರೀ ರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಯಾನಂದ್, ಶ್ರೀದೇವಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆರ್.ಕೆ.ಮುನಿಸ್ವಾಮಿ, ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸಿ.ಕೃಷ್ಣ, ಉಪಪ್ರಾಂಶುಪಾಲರಾದ ಡಾ.ಸಿ.ಪಿ.ಚಂದ್ರಪ್ಪ, ಡಾ.ಪಾಳ್ಯ ಮೊಹಮ್ಮದ್ ಮೊಹಿದ್ದೀನ್, ಶ್ರೀದೇವಿ ಫಿಸಿಯೋಥೆರಪಿ ಕಾಲೇಜಿನ ಅಯಿಷಾ, ರೂಪಾ, ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.