ತುಮಕೂರು :


ಮಹಿಳೆ ಕೌಶಲ್ಯಗಳನ್ನು ಕಲಿಯುವ ಮೂಲಕ ಸ್ವಾವಲಂಬಿ ಉದ್ಯೋಗಗಗಳನ್ನು ನಿರ್ವಹಿಸಿ, ಆರ್ಥಿಕ ಸಬಲತೆ ಸಾಧಿಸುವುದರ ಜೊತೆಗೆ ಕುಟುಂಬದ ನಿರ್ವಹಣೆಯಲ್ಲೂ ತನ್ನ ಸಮರ್ಥತೆಯನ್ನು ತೋರಿಸುವುದು ಇಂದಿನ ಅಗತ್ಯವಾಗಿದೆ ಎಂದು ಶ್ರೀ ಸಿದ್ಧಾರ್ಥ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಮತ್ತು ಪ್ರಾಧ್ಯಾಪಕರು ಡಾ.ಎಲ್. ಸಂಜೀವ್‍ಕುಮಾರ್ ಅಭಿಪ್ರಾಯಪಟ್ಟರು.
ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಕಂಪ್ಯೂಟರ್, ಹೊಲಿಗೆ ಮತ್ತು ವಸ್ತ್ರವಿನ್ಯಾಸ ತರಬೇತಿ ಶಿಬಿರಾರ್ಥಿಗಳ ಸಮಾರೋಪ ಸಮಾರಂ¨ಭದಲ್ಲಿ ಮಾತನಾಡಿದ ಅವರು, ಮಹಿಳೆ ಇಂದು ಸ್ವತಂತ್ರವಾಗಿ ತನ್ನ ಕಾಲ ಮೇಲೆ ತಾನೆ ನಿಂತು ಮನೆಯನ್ನು ನಿರ್ವಹಿಸುವುದನ್ನು ಕಲಿತಿದ್ದಾಳೆ. ಜೀವನ ನಿರ್ವಹಣೆಗಾಗಿ ವಿವಿಧ ರೀತಿಯ ಕೌಶಲ್ಯ ಕಲಿಕೆಯನ್ನು ಕಲಿತು ಅದನ್ನು ಮುಂದುವರಿಸಿಕೊಂಡು ಸ್ವಯಂ ಉದ್ಯೋಗ ಮಾಡಿಕೊಂಡರೆ ಭವಿಷ್ಯದ ಜೀವನ ಸುಗಮವಾಗಿರುತ್ತದೆ ಎಂದರೆ.
ತರಬೇತಿಯಲ್ಲಿ ಪಡೆದಿರುವ ಕೌಶಲ್ಯಗಳನ್ನು ಸರಿಯಾಗಿ ಉಪಯೋಗಿಸಿದರೆ ಆದಾಯವನ್ನು ಗಳಿಸಬಹುದು ಮತ್ತು ಉದ್ಯೋಗಗಳನ್ನು ಸೃಷ್ಟಿಸಬಹುದು. ಆ ಮೂಲಕ ತಾವು ಬೆಳೆದು ಬೆಳೆಯಿರಿ ತಮ್ಮ ಜೊತೆಗಿರುವವರನ್ನು ಬೆಳೆಸಬಹುದು ಎಂದು ಮಹಿಳಾ ಶಿಬಿರಾರ್ಥಿಗಳಿಗೆ ಸಂಜೀವ್‍ಕುಮಾರ್ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಡಾ.ಕುಮಾರ್ ಅವರು, ಇತ್ತೀಚಿನ ಕಾಲಘಟ್ಟ ಒಬ್ಬರು ದುಡಿದು ಎಲ್ಲರೂ ತಿನ್ನುವಂತಹ ಕಾಲವಲ್ಲ. ಜೇಬಿನಲ್ಲಿ ದುಡ್ಡು ತೆಗೆದುಕೊಂಡು ಹೋಗಿ ಮೂಟೆಯಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡು ಬರುವ ಕಾಲವಂತೂ ಅಲ್ಲವೇ ಅಲ್ಲ. ಮೂಟೆಯಲ್ಲಿ ಹಣವನ್ನು ತೆಗೆದುಕೊಂಡು ಹೋಗಿ ಜೆಬಿನಲ್ಲಿ ಸಾಮಗ್ರಿ ತರುವ ಕಾಲವಾಗಿರುವುದರಂದ ಮುಹಿಳೆಯರೂ ದುಡಿಮೆಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಕೆಲಸವನ್ನು ಇಂದು ಕಲಿತು ನಾಳೆ ಮರೆಯಬೇಡಿ. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕೌಶಲ್ಯಗಳನ್ನು ಕಲಿತ ಶಿಬಿರಾರ್ಥಿಗಳಾದ ಎಸ್.ಎಂ.ಭಾಗ್ಯ, ದಿವ್ಯ, ಚಂದ್ರಕಲಾ, ರಶ್ಮಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ. ಮುದ್ದೇಶ್, ಶ್ರೀ ಸಿದ್ಧಾರ್ಥ ಕೌಶಲ್ಯಾಭಿವೃದ್ಧಿ ಕೇಂದ್ರದ ಸಂಯೋಜಕರಾದ ನಂಜುಂಡಪ್ಪ, ತರಬೇತಿ ಕೇಂದ್ರದ
ಶಿಕ್ಷಕರಾದ ಕವಿತಾ ಮತ್ತು ವಿದ್ಯಾ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಲಕ್ಷ್ಮಿ ಮತ್ತು ತಂಡದವರು ಪ್ರಾರ್ಥಿಸಿದರೆ, ಗಗನ ಅವರು ಸ್ವಾಗತಿಸಿದರು. ಸಿಪಿ ಮಂಜುಳಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರಾರ್ಥಿಗಳಿಗೆ ತರಬೇತಿ ಕಲಿಕೆಯ ಪ್ರಮಾಣ ಪತ್ರವನ್ನು ನೀಡಲಾಯಿತು.

(Visited 1 times, 1 visits today)