ತುಮಕೂರು :


ಗುರುಮೂರ್ತಿರವರು ಮಾತನಾಡಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಈ ನಾಡು ಕಂಡ ಅತ್ಯಂತ ಪ್ರಸಿದ್ಧ ಬರಹಗಾರರು, ಅನೇಕ ವಿಶ್ವವಿದ್ಯಾಲಯಗಳಲ್ಲಿ ಇವರ ಶಿಷ್ಯರನ್ನು ಕಾಣಬಹುದು. ಅನೇಕ ಪುಸ್ತಕಗಳನ್ನು ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಇವರು ಕರ್ನಾಟಕ ಚಿತ್ರರಂಗಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದರು. ಬಿ.ಎಸ್.ಪಿ. ಜಿಲ್ಲಾ ಅಧ್ಯಕ್ಷರು, ರಾಜಸಿಂಹರವರು ಮಾತನಾಡಿ ತುಮಕೂರು ಜಿಲ್ಲೆಯ ಸಾಂಸ್ಕøತಿಕ ರಾಯಬಾರಿ ತಳ ಸಮುದಾಯಗಳ, ಬಡವರ, ದಲಿತರ, ಧ್ವನಿಯಾಗಿ ಇಡೀ ರಾಜ್ಯದಾದ್ಯಂತ ಬಂಡಾಯ ಸಾಹಿತ್ಯ ಸಮ್ಮೇಳನಗಳನ್ನು ಮಾಡುವ ಮೂಲಕ ಅನೇಕ ಪ್ರಸ್ತುತ ಸಮಕಾಲೀನ ಸಮಸ್ಯೆಗಳ ಬಗ್ಗೆ ಸಾಮಾನ್ಯ ಜನರಿಗೆ ಜಾಗೃತಿ ಸಮ್ಮೇಳನಗಳ ಮೂಲಕ ತಿಳಿಸುತ್ತಿದ್ದಾರೆ ಎಂದರು.
ಬಿ.ಎಸ್.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಂಗಧಾಮಯ್ಯ ಜೆ.ಸಿ. ರವರು ಮಾತನಾಡಿ ಬರಗೂರು ರಾಮಚಂದ್ರಪ್ಪರವರು ಮೇಷ್ಟ್ರು ಎಂದೆ ಪ್ರಸಿದ್ಧರಾಗಿದ್ದು ತನ್ನದೇ ಆದ ಸಾಂಸ್ಕøತಿಕ, ಸಾಹಿತ್ಯ, ಚಳುವಳಿಗಳಿಗೆ ಹಾಗೂ ಬರಹಗಳಿಗೆ ಸೇವೆ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಶ್ವ ವಿದ್ಯಾಲಯವನ್ನು ಸ್ಥಾಪಿಸುವುದಕ್ಕಿಂತ ಮುಂಚೆ ಕನ್ನಡ ಮತ್ತು ಇತಿಹಾಸ ವಿಭಾಗಗಳನ್ನು ತೆಗೆದು ಬಹಳಷ್ಟು ಗ್ರಾಮೀಣ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಸ್ನಾತಕ ಪದವಿ ಪಡೆಯಲು ಕಾರಣೀಭೂತರಾಗಿದ್ದಾರೆ. ಕರ್ನಾಟಕ ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಮಕ್ಕಳಿಗೆ ಉತ್ತಮವಾದ ಮಾಹಿತಿ ನೀಡುವ ಪುಸ್ತಕಗಳನ್ನು ನೀಡಿದ್ದಾರೆ, ಅನೇಕ ವಿಚಾರ-ಗೋಷ್ಟಿಗಳನ್ನು ನಡೆಸುವ ಮೂಲಕ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ.
ಆದ್ದರಿಂದ ಇವರ ವಿರುದ್ಧ ನೀಡಿರುವ ಬಿ.ಜೆ.ಪಿ.ಯ ಕೋಮುವಾದಿ ಮನಸ್ಥಿತಿ ಇರುವ ವ್ಯಕ್ತಿಗಳು ಕೇಸು ದಾಖಲಿಸಿರುವುದನ್ನು ರದ್ದುಗೊಳಿಸಬೇಕು ಎಂದರು. ರಾಜ್ಯ ಕಾರ್ಯದರ್ಶಿ ಶೂಲಯ್ಯ ರವರು ಮಾತನಾಡಿ ಪ್ರೊ. ಬರಗೂರು ರಾಮಚಂದ್ರಪ್ಪನವರು ನಮ್ಮ ನಾಡು ಕಂಡ ಸಾಂಸ್ಕøತಿಕ ಅನನ್ಯತೆಯನ್ನು ಪಡೆದ ಪ್ರಸಿದ್ಧ ಲೇಖಕರು. ರಾಜ್ಯ, ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾದವರು. ಜೊತೆಗೆ ತುಮಕೂರು ಜಿಲ್ಲೆಯನ್ನು ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮೇರು ವ್ಯಕ್ತಿತ್ವವುಳ್ಳ ಪ್ರಜಾ ಪ್ರತಿಭೆಯ ಮೇಲೆ ಕೊಟ್ಟಿರುವ ದೂರಿನಲ್ಲಿ ಸತ್ಯಾಂಶವಿಲ್ಲ ಎಂದರು. 2021ರಲ್ಲಿ ಅವರು ಸಮಗ್ರ ಸಾಹಿತ್ಯ ಸಂಪುಟಗಳಲ್ಲಿ ಹೊಸದರಲ್ಲಿ, ರಾಷ್ಟ್ರಗೀತೆ ದಾಟಿಯೇ ಬದಲು ಬೇರೆ ಗೀತೆಯನ್ನು ಬರೆದಿದ್ದಾರೆ. ಹೊಸದು ಬಂದ ಮೇಲೆ ಹಳೆಯ ಕೃತಿ ಅಸ್ಥಿತ್ವ ಕಳೆದುಕೊಳ್ಳುತ್ತದೆ.
ಈಗ ದೂರು ಕೊಡುವುದು ಕಾನೂನಾತ್ಮಕವಾಗಿಯೂ, ನೈತಿಕವಾಗಿಯೂ ಸರಿಯಿಲ್ಲವೆಂಬುದು ನಮ್ಮ ಬಾವನೆಯಾಗಿದೆ ಎಂದು ವಕೀಲರಾದ ದಾಸಪ್ಪರವರು ಹೇಳಿದರು. ಈ ಎಲ್ಲಾ ವಿಷಯಗಳ ಆಧಾರದ ಮೇಲೆ ಬರಗೂರುರವರ ವಿರುದ್ಧ ಬಂದಿರುವ ದೂರನ್ನು ರದ್ದು ಗೊಳಿಸಬೇಕು ಎಂದು ಬಿ.ಎಸ್.ಪಿ. ಜಿಲ್ಲಾ ಸಮಿತಿ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

(Visited 2 times, 1 visits today)