ತುಮಕೂರು :
1993ರ ಮಾರ್ಚ್ 13 ರಂದು ನೆಡೆದ ಮುಂಬೈ ಬಾಂಬ್ ಸ್ಪೋಟದ ರುವಾರಿ ಉಗ್ರ ಯಾಕೂಬ್ ಮೆಮೊನ್‍ನ ಸಮಾದಿಯನ್ನು ಜಿಹಾದಿ ಮನಸ್ಸಿನ ಸ್ಥಳೀಯ ವ್ಯಕ್ತಿಗಳು ಅತ್ಯಂತ ವೈಭೋಯುತವಾಗಿ ಅಮೃತಶಿಲೆ ನೆಲೆಹಾಸು, ಎಲ್.ಇ.ಡಿ. ಲೈಟಿಂಗ್‍ನ ಅಲಂಕಾರದೊಂದಿಗೆ ಸೌಂದರ್ಯೀಕರಣ ಮಾಡಿರುವುದು ರಾಷ್ಟ್ರೀಯವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಿಜೆಪಿ ತುಮಕೂರು ಜಿಲ್ಲಾ ಘಟಕ ವಕ್ತಾರ ಕೆ.ಪಿ.ಮಹೇಶ ಹೇಳಿದ್ದಾರೆ.
ಕಳೆದ 29 ವರ್ಷಗಳ ಹಿಂದೆ ಮಹಾರಾಷ್ಟ್ರದ ಮುಂಬೈನ 13ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಸುಮಾರು 257 ಹತ್ಯೆಗೀಡಾದರೆ, 1400ಕ್ಕೂ ಹೆಚ್ಚು ಮಂದಿ ಗಾಯಗೀಡಾಗಿದ್ದರು. ಈ ಭೀಕರ ಬಾಂಬ್ ಸ್ಪೋಟಕ್ಕೆ ಮುಂಬೈ ಹಾಗೂ ದೇಶ್ಯಾದ್ಯಂತ ಆತಂಕ ಸೃಷ್ಟಿಯಾಗಿ, ಸ್ಪೋಟದಲ್ಲಿ ಭಾಗಿಯಾಗಿದ್ದ ಉಗ್ರ ಯಾಕೂಬ್ ಮೆಮೊನ್ ಸೇರಿ 10ಕ್ಕೂ ಹೆಚ್ಚು ಜನರಿಗೆ ಮರಣದಂಡನೆ ತೀರ್ಪುನ್ನು ನ್ಯಾಯಾಲಯ ನೀಡಿತ್ತು. ನಂತರ 2015ರಲ್ಲಿ ಯಾಕೂಬ್ ಮೆಮೊನ್‍ನ್ನು ನಾಗಪುರ ಜೈಲಿನಲ್ಲಿ ಗಲ್ಲಿಗೇರಿಸಿ, ದಕ್ಷಿಣ ಮುಂಬೈನ ಬಾಬಾ ಕಬಸ್ರ್ತಾನ್‍ನಲ್ಲಿ ಸಮಾಧಿ ಮಾಡಲಾಗಿತ್ತು.
ಉಗ್ರ ಯಾಕೂಬ್ ಮೆಮೊನ್‍ಗೆ ಮರಣದಂಡನೆ ನೀಡಿ ನಂತರ ಸಮಾಧಿ ಮಾಡಲಾದ ಸ್ಥಳವು ಹಲವಾರು ವರ್ಷಗಳಿಂದ ಪಾಳು ಬಿದ್ದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಜಿಹಾದಿ ಮನಸ್ಸಿನ ಸ್ಥಳೀಯ ಕೆಲವರು ಹಾಗೂ ಮುಂಬೈನ ಬುಡಾ ಕಬಸ್ರ್ತಾನ್ ಸ್ಥಳವು ವಕ್ಫ್ ಮಂಡಳಿಯ ವ್ಯಾಪ್ತಿಯ ಜಮಾ ಮಸೀದಿಯ ಅಧ್ಯಕ್ಷರು ಸಮಾಧಿಯನ್ನು ವೈಭೋಯುತವಾಗಿ ಅಲಂಕರಿಸಿದ್ದರು. ಈ ಬಗ್ಗೆ ರಾಷ್ಟ್ರೀಯವಾದಿಗಳು ಅಲಂಕಾರ ಮಾಡಿ, ಒಂದು ರೀತಿಯ ಆರಾಧನೆಯ ಜಾಗವನ್ನಾಗಿ ಮಾಡುವ ಯತ್ನದ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸ್ಥಳೀಯ ಆಡಳಿತ ಎಚ್ಚೆತ್ತು ತನಿಖೆಗೆ ಮುಂದಾಗಿದೆ. ವಿವಾದಕ್ಕೆ ಪ್ರತಿಕ್ರಿಯಿಸಿರುವ ಬುಡಾ ಕಬಸ್ರ್ತಾನ್‍ನ ಜಮಾ ಮಸೀದಿಯ ಅಧ್ಯಕ್ಷರು ಸಮಾಧಿ ಅಲಂಕಾರಕ್ಕೆ ಅನುಮತಿ ಪಡೆಯದಿರುವ ಬಗ್ಗೆ ತಿಳಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಬಗ್ಗೆ ಬಿಜೆಪಿ ಆಶ್ಚರ್ಯ ವ್ಯಕ್ತಪಡಿಸಿ, ಇದು ಹಿಂದಿನ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ. ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಉದ್ದವ್ ಠಾಕ್ರೆರವರ ಆಡಳಿತದ ಅವಧಿಯಲ್ಲಿ ಅಲಂಕರಿಸಲಾಗಿದೆ ಎಂದು ಆರೋಪಿಸಿ, ಸಮಗ್ರ ತನಿಖೆಗೆ ಕೆ.ಪಿ.ಮಹೇಶ ಒತ್ತಾಯಿಸಿದ್ದಾರೆ.