ತುಮಕೂರು


ಒಕ್ಕಲಿಗ ಸಮುದಾಯದ ಅಸ್ಥಿತ್ವಕ್ಕೆ ಧಕ್ಕೆಯಾಗುವಂತಹ ಪ್ರಕ್ರಿಯೆಗಳು ನಡೆದಾಗ ದ್ವನಿ ಎತ್ತುವ ಕೆಲಸವನ್ನು ಇಂದು ಮಾಡುತ್ತಿದ್ದು, ಮುಂದೆಯೂ ಮಾಡಲಿದ್ದೇವೆ ಎಂದು ಪಟ್ಟನಾಯಕನಹಳ್ಳಿಯ ಶ್ರೀನಂಜಾವಧೂತ ಸ್ವಾಮೀಜಿಗಳು ತಿಳಿಸಿದ್ದಾರೆ.
ನಗರದ ಕುಂಚಟಿಗ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಸಮಿತಿ, ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ(ರಿ), ತುಮಕೂರು ಜಿಲ್ಲೆಯ ಸಮಸ್ತ ಒಕ್ಕಲಿಗರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಕೆಂಪೇಗೌಡರ 512ನೇ ಜನ್ಮ ಜಯಂತಿ ಹಾಗೂ ಪ್ರತಿಭಾಪುರಸ್ಕಾರ,
ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ದ್ವನಿ ಇಲ್ಲದೆ ಈ ಸಮಾಜ ಸಾಯುವಂತಾಗಬಾರದು. ಹಾಗಾಗಿ ನಾವೆಲ್ಲರೂ ಎಚ್ಚೆತ್ತು ಕೊಳ್ಳಬೇಕಿದೆ ಎಂದರು.
ಸಮಾಜ ಒಡೆಯುವಂತಹ ಕೆಲಸಗಳು ಬಹಳಷ್ಟು ನಡೆಯುತ್ತಿವೆ.ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯವನ್ನು,ಉಪಪಂಗಡಗಳ ಹೆಸರಿನಲ್ಲಿ ಒಡೆಯವ ವ್ಯವಸ್ಥಿತ ಕೆಲಸ ನಡೆಯುತ್ತಿದೆ.ಒಕ್ಕಲಿಗ ಎಂಬುದು ಒಂದು ಆಲದ ಮರವಿದ್ದಂತೆ,ಈ ಮರದ ಅಡಿಯಲ್ಲಿ ಎಲ್ಲಾ ಉಪಪಂಗಡಗಳು ಒಗ್ಗೂಡಿದರೆ ಹೆಚ್ಚು ಬಲಶಾಲಿ ಯಾಗಲು ಸಾಧ್ಯ.ಸಾಧ್ಯವಾದರೆ ಸಮುದಾಯಕ್ಕೆ ಸಹಾಯ ಮಾಡಿ,ಆದರೆ ಎಂದಿಗೂ ಸಮುದಾಯ ಒಡೆಯುವವರಿಗೆ ಸಹಾಯ ಮಾಡಬೇಡಿ ಎಂದು ಶ್ರೀನಂಜಾವಧೂತ ಸ್ವಾಮೀಜಿ ಕಿವಿ ಮಾತು ಹೇಳಿದರು.
ರಾಜ್ಯ ಒಕ್ಕಲಿಗ ಸಂಘದ ಕಾರ್ಯದರ್ಶಿ ಕೋನಪ್ಪರೆಡ್ಡಿ ಮಾತನಾಡಿ, ಸಮಾಜದ ಒಗ್ಗಟ್ಟಿನಿಂದಾಗಿ ರಾಜ್ಯಕ್ಕೆ 6 ಜನ ಮುಖ್ಯಮಂತ್ರಿಗಳು,ಓರ್ವ ಪ್ರಧಾನಿಯನ್ನು ನೀಡಿದ ಕೀರ್ತಿ ಒಕ್ಕಲಿಗ ಸಮುದಾಯಕ್ಕೆ ಸಲ್ಲುತ್ತದೆ.ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಗಾಗಿ 10 ಸಾವಿರದಿಂದ 20 ಲಕ್ಷದವರಗೆ ರಿಯಾಯಿತು ನೀಡಲಾಗುತ್ತಿದೆ.ಹೊಸದಾಗಿ ತುಮಕೂರು, ಹಾಸನ, ಚಿಕ್ಕಬಳ್ಳಾ ಪುರ ಹಾಗೂ ಮಂಡ್ಯದಲ್ಲಿ ಹಾಸ್ಟಲ್ ತೆರೆಯುತಿದ್ದು, ಹೊಸ ಕಾಲೇಜುಗಳನ್ನು ನೀಡಲಾಗಿದೆ.ರಾಜ್ಯದ ವಿವಿಧೆಡೆಗಳಲ್ಲಿ ಹಾಸ್ಟಲ್ ಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ
ಅಶ್ವಥ ಕುಮಾರ್ ವಹಿಸಿದ್ದರು. ಲೋಕೇಶ್ ಡಿ.ನಾಗರಾಜಯ್ಯ,ನೌಕರರ ಸಂಘದ ಉಪಾಧ್ಯಕ್ಷ ಬೆಳ್ಳಿ ಲೋಕೇಶ್, ಆರ್.ಕಾಮರಾಜು, ಮುರುಳೀಧರ ಹಾಲಪ್ಪ,ಜಿಲ್ಲಾ
ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಗಿರೀಶ್,ಕೆ.ಬಿ.ಬೋರೇಗೌಡ, ಹೆಚ್.ನಿಂಗಪ್ಪ, ಪಾಲಿಕೆ ಸದಸ್ಯರಾದ ಜೆ.ಕುಮಾರ್, ಶ್ರೀನಿವಾಸ್, ಧರಣೇಂದ್ರಕುಮಾರ್, ವೀಣಾ ಮನೋಹರ, ಒಕ್ಕಲಿಗ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ
ಹಾಗೂ ಇತರರು ಉಪಸ್ಥಿತರಿದ್ದರು.

(Visited 3 times, 1 visits today)