ತುಮಕೂರು
ಗ್ರಾಮಾಂತರ ಹೆಬ್ಬೂರು ಗ್ರಾಮದಲ್ಲಿ ಮೊದಲನೇ ವರ್ಷದ ಹಿಂದೂ ಘನಪುರಿ ಗಣೇಶೋತ್ಸವದ ವಿಸರ್ಜನಾ ಕಾರ್ಯಕ್ರಮವನ್ನು ಹೆಬ್ಬೂರಿನ ಪ್ರಮುಖ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಮಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಸುಮಾರು 16 ಜಾನಪದ ಕಲಾತಂಡಗಳ ವಾದ್ಯಗೋಷ್ಠಿಯೊಂದಿಗೆ ಹಾಗೂ ಸಿಡಿಮದ್ದುಗಳ ಪಟಾಕಿಗಳ ಶಬ್ದ ಜೈಂಕಾರಗಳಿಂದ ಕೂಡಿದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹೆಬ್ಬೂರಿನ ದೊಡ್ಡಕೆರೆಗೆ ಗಣಪನನ್ನು ವಿಸರ್ಜಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡ ಮಾತನಾಡಿ ಹಿಂದೂ ಸಮಾಜದಲ್ಲಿ ಕೋಟ್ಯಂತರ ದೇವರುಗಳಿದ್ದು, ಅದರಲ್ಲಿ ಮೊದಲ ಸ್ಥಾನ ಗಣಪನಿಗೆ ನೀಡುವ ನಾವು ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ಇನ್ನು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದು ತಿಳಿಸಿದರು.ಈ ಗಣೇಶೋತ್ಸವ ಕಾರ್ಯಕ್ರಮದ ಪ್ರಾರಂಬ ದಿಂದ ಹಲವಾರು ರೀತಿಯ ಗ್ರಾಮೀಣ ಕ್ರೀಡಾಕೂಟದಲ್ಲಿ ಹಿರಿಯ ಮತ್ತು ಕಿರಿಯರೆಲ್ಲರೂ ಭಾಗವಹಿಸಿ ಕಾರ್ಯಕ್ರಮ ದ ಮೆರುಗನ್ನು ಹೆಚ್ಚಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ವಿಜೇತ ರಾದ ಎಲ್ಲರಿಗೂ ಬಹುಮಾನ ನೀಡಿದರು. ವಿಸರ್ಜನ ಮಹೋತ್ಸವದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾದ ಸದಣ್ಣ,ಗ್ರಾಮ ಪಂ ಅಧ್ಯಕ್ಷರಾದ ಶ್ರೀ ಮತಿ ಮಧು,ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರಭಾಕರ್, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ,ಬಾಬು,ಡಿ.ಕೆ.ಸಿ,ಪ್ರಕಾಶ್,ದೀಪು, ಮಾಸ್ತಿಗೌಡ್ರು ವೈ ಟಿ ನಾಗರಾಜ್ ,ಹೆಬ್ಬೂರು ಗ್ರಾಮದ ಹಿರಿಯ ಮುಖಂಡರು,ಯುವ ಮಿತ್ರರು ಹಾಗೂ ಹಿಂದೂ ಪರಿಷತ್ ಕಾರ್ಯಕರ್ತರು ಗಳು ಹಾಜರಿದ್ದರು.