ತುಮಕೂರು:

      ನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಯುವಜನೋತ್ಸವದ 2ನೇ ದಿನವಾದ ಶನಿವಾರ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಮೂಲ ಜನಪದ ಕುಣಿತ, ಸ್ಥಳೀಯ ಕಲೆ ಹಾಗೂ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು. ರಾಜ್ಯದ 30 ಜಿಲ್ಲೆಗಳ ತಂಡಗಳು ಕಲಾ ಪ್ರದರ್ಶನ ನೀಡಿದವು.

      ಸೋಮನಕುಣಿತ, ಡೊಳ್ಳುಕುಣಿತ, ಪಟ ಕುಣಿತ, ವೀರಗಾಸೆ, ಕುದುರೆ ಕೋಲು, ನಂದಿ ಕುಣಿತದ ಪ್ರಕಾರಗಳನ್ನು ಯುವಜನೋತ್ಸವದಲ್ಲಿ ತಂಡಗಳು ಪ್ರದರ್ಶಿಸಿದವು. ಚಾಮರಾಜನಗರ ಜಿಲ್ಲೆಯ ತಂಡ ಪ್ರದರ್ಶಿಸಿದ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಡೊಳ್ಳುಕುಣಿತದಲ್ಲಿ ಒಬ್ಬರ ಮೇಲೆ ಒಬ್ಬರು ನಿಂತು ನೃತ್ಯ ಪ್ರದರ್ಶಿಸಿದ್ದು, ನೋಡುಗರ ಕಣ್ಮನ ಸೆಳೆಯಿತು.

      ಗಾಜಿನ ಮನೆಯಲ್ಲಿ ನಡೆಯುತ್ತಿರುವ ಜನಪದ ಕುಣಿತ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ತಂಡಗಳು ಭಾನುವಾರ ತಮ್ಮ ಪ್ರದರ್ಶನವನ್ನು ನೀಡಲಿದ್ದು, ಭಾನುವಾರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ತಂಡವನ್ನು ಘೋಷಣೆ ಮಾಡಲಾಗುವುದು.

ಯುವಜನರಲ್ಲಿ ಉತ್ಸಾಹ:

      ನಶಿಸಿ ಹೋಗುತ್ತಿರುವ ಜನಪದ ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಸೋಮನ ಕುಣಿತ, ಪಟ ಕುಣಿತದಂತಹ ಪ್ರಕಾರಗಳು ಶನಿವಾರ ವೇದಿಕೆಯ ಮೇಲೆ ಪ್ರದರ್ಶನಗೊಂಡವು, ಚಾಮರಾಜನಗರ ಜಿಲ್ಲೆಯ ತಂಡದ ಪ್ರದರ್ಶನಕ್ಕೆ ಪ್ರಶಂಸಿದ ಇತರ ಜಿಲ್ಲೆಯ ಸ್ಪರ್ಧಿಗಳು, ಆ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡಬೇಕೆಂಬ ಉತ್ಸಾಹ ತೋರುತ್ತಿದ್ದರು. ತಂಡಗಳಲ್ಲಿ ಚರ್ಚೆಯನ್ನು ನಡೆಸುವ ಮೂಲಕ ಪ್ರದರ್ಶನ ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಗುಂಪು ಚರ್ಚೆಗಳನ್ನು ಮಾರ್ಗದರ್ಶಕರ ನೇತೃತ್ವದಲ್ಲಿ ಮಾಡುತ್ತಿದ್ದು ಸಾಧಾರಣವಾಗಿತ್ತು.

(Visited 210 times, 1 visits today)