ತುಮಕೂರು

ಕಾರ್ಯಾಗಾರದಲ್ಲಿ ವರ್ತಮಾನದ ಸವಾಲುಗಳು ಮತ್ತು ಮಹಿಳಾ ನಾಯಕತ್ವ ಕುರಿತು ವಿಷಯ ಮಂಡನೆ ಮಾಡಿದ ಸ್ಲಂ ಜನಾಂದೋಲನದ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಇಂದು ದೇಶದಲ್ಲಿ 4ಜನರು ಆಡಳಿತ ಮಾಡುತ್ತಿದ್ದು ಇಬ್ಬರು ಮಾರಾಟಗಾರರು ಇನ್ನಿಬ್ಬರು ಖರೀದಾರರಿದ್ದು ಇವರಿಗಾಗಿ ಇಡೀ ದೇದಲ್ಲಿರುವ ಜನರು ದುಡಿಯಬೇಕಿದೆ ಅದಾನಿ ಅಂಬಾನಿ ಆದಾಯವನ್ನು ದೇಶದ ಆದಾಯವೆಂಬಂತೆ ಪ್ರಚಾರ ಮಾಡಿ ಜಗತ್ತಿನಲ್ಲಿ ಭಾರತ ಆರ್ಥಿಕವಾಗಿ 5ನೇ ಸ್ಥಾನದಲ್ಲಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 126ನೇ ಹಾಗೂ ಹಸಿವಿನಲ್ಲಿ 131ನೇ ಸ್ಥಾನದಲ್ಲಿದೆ.
ಇತ್ತಿಚೆಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿದ್ದು ಕಾರ್ಮಿಕರು ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ತೆರಿಗೆ ಹೆಚ್ಚಳ ಮತ್ತು ಜಿಎಸ್‍ಟಿ ಯಿಂದ ಹಾಗೂ ಕಾಯ್ದೆಗಳ ನಿರಂತರ ತಿದ್ದುಪಡಿಯಿಂದ ಸಂವಿಧಾನದ ಮೇಲಿನ ಹಲ್ಲೆಯಿಂದ ದಿವಾಳಿಯಾಗಿದ್ದಾರೆ, 40 ವರ್ಷಗಳಲ್ಲಿ ಕಂಡರಿಯದಷ್ಟು ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿದೆ. 2014ರಲ್ಲಿ ದೇಶದ ಸಾಲ 53 ಲಕ್ಷ ಕೋಟಿ ಪ್ರಸ್ತುತ 130 ಲಕ್ಷ ಕೋಟಿ ಸಾಲ ಮಾಡಿದ್ದು ರಾಜ್ಯ ಸರ್ಕಾರ 2013ರಲ್ಲಿ 1.5ಲಕ್ಷ ಸಾಲದಿಂದ ಇಂದು 10 ಲಕ್ಷ ಕೋಟಿ ಸಾಲ ಮಾಡಿದೆ ಆದರೆ ಇದರಿಂದ ಜನಸಾಮಾನ್ಯರಿಗೆ ಏನು ಲಾಭ ! ಕೋವಿಡ್ ನಂತರ ಆಹಾರ ವಸ್ತುಗಳ ಮೇಲೆ 5ರಿಂದ 10% ಜಿಎಸ್‍ಟಿ ಹಾಕಿರುವುದರಿಂದ ಪೆಟ್ರೋಲ್,ಡಿಸೇಲ್,ಗ್ಯಾಸ್ ಅಗತ್ಯವಸ್ತುಗಳ ಬೆಲೆ ನಿರಂತರ ಏರಿಕೆಯಿಂದ ಒಂದೊತ್ತಿನ ಊಟಕ್ಕೆ ಕಷ್ಟವಾಗುತ್ತಿದೆ.
ಕಾರ್ಪೋರೇಟ್ ಕಂಪನಿಗಳ 30% ತೆರಿಗೆಯನ್ನು 22%ಕ್ಕೆ ಇಳಿಸಿರುವುದರಿಂದ ವಾರ್ಷಿಕ 2 ಲಕ್ಷ ಕೋಟಿ ನಷ್ಟವನ್ನು ಜನಸಾಮಾನ್ಯರ ಮೇಲೆ ಹಾಕುವ ಮೂಲಕ ಜನಸಾಮಾನ್ಯರ ಕಲ್ಯಾಣದ ಸಬ್ಸಿಡಿಗಳನ್ನು ನಿಲ್ಲಿಸಲಾಗುತ್ತಿದೆ ಎಂದರು.
ಸಂಘಟನೆಯ ಸ್ವರೂಪದಲ್ಲಿ ಅಧಿಕಾರ ವಿಕೇಂದ್ರಿಕರಣಕ್ಕೆ ಮಹಿಳಾ ನಾಯಕತ್ವ ಪ್ರಮುಖವಾಗಿದ್ದು ಈ ನಾಯಕತ್ವಕ್ಕೆ ಬೇಕಾಗಿರುವುದು ಬದ್ಧತೆ,ಪ್ರಮಾಣಿಕತೆ, ಪ್ರೀತಿ,ತಾಳ್ಮೆ ಹಾಗೂ ಎಲ್ಲರನ್ನು ಒಗ್ಗೂಡಿಸುವ ಸಂಘಟನಾ ದೂರದೃಷ್ಠಿ ಇರುವುದು ಪ್ರಮುಖವಾಗಿದೆ ಈ ಜವಾಬ್ದಾರಿಯೇ ನಾಯಕತ್ವ ಹಾಗಾಗಿ ಸಂಘಟನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನಕ್ಕೆ ಮಹಿಳೆಯರು ಜವಾಬ್ದಾರಿ ತೆಗೆದುಕೊಳ್ಳಬೇಕು ಇದರಿಂದ ನಮ್ಮ ಸಮಸ್ಯೆಗಳು ಸಮಾಜ,ದೇಶ, ಬದಲಾಗಲು ಸಾಧ್ಯವಾಗುತ್ತದೆ ಹಾಗೂ ದೇಶದಲ್ಲಿ ಸಮಾಜ ಪರಿವರ್ತನೆಯಾಗಲು ಮಹಿಳಾ ನಾಯಕತ್ವ ಮುಖ್ಯವಾಗಿದೆ ಇದಕ್ಕೆ ದುಡಿಯುವ ಮತ್ತು ಸ್ಲಂನಲ್ಲಿರುವ ಮಹಿಳೆಯರು ನಾಯಕತ್ವವಹಿಸಿಕೊಳ್ಳಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ಅನುಪಮಾ, ಕಣ್ಣನ್, ಅರುಣ್, ತಿರುಮಲಯ್ಯ, ಪುಟ್ಟರಾಜು, ಗಣೇಶ್, ವೆಂಕಟೇಶ್,ಮಾರಿಮುತ್ತು ಹಾಗೂ ತುಮಕೂರು ನಗರದ ವಿವಿಧ ಸ್ಲಂಗಳ ಶಾಖಾ ಸಮಿತಿ ಪದಾಧಿಕಾರಿಗಳಾದ ಶಾರದಮ್ಮ, ಗಂಗಮ್ಮ, ಮಹಾದೇವಮ್ಮ ,
ಗೌರಮ್ಮ ಮಾಣಿಕ್ಯಮ್ಮ, ರಂಗನಾಥ್, ಗುಲ್ನಾಜ್, ಶಿವಕುಮಾರ್, ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ಸುಧಾ, ತಿರುಮಲ, ಹನುಮಕ್ಕ,ಕೃಷ್ಣ, ಬದ್ರಿ,ಲಕ್ಷ್ಮೀ, ಗಂಗಮ್ಮ, ನಾಗಮ್ಮ, ಜಯಮ್ಮ, ಶ್ವೇತಾ, ಉಷಾರಾಣಿ ಮುಂತಾದವರು ಪಾಲ್ಗೊಂಡಿದ್ದರು.

(Visited 1 times, 1 visits today)