ತುಮಕೂರು


ರೈತ ದೇಶಕ್ಕೆ ಬೆನ್ನೆಲುಬಾದರೆ, ವಿಶ್ವಕರ್ಮ ಜನಾಂಗದವರು ಕೃಷಿ ಉಪಕರಣಗಳನ್ನು ತಯಾರಿಸಿ ನೀಡುವ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಮಧುಗಿರಿ ತಾಲ್ಲೂಕು ನಿಟ್ಟರಹಳ್ಳಿಯ ಶ್ರೀಶ್ರೀಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ‘ಶ್ರೀ ವಿಶ್ವಕರ್ಮ ಜಯಂತಿ ಆಚರಣೆ’ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವನ್ನು ಸೃಷ್ಟಿ ಮಾಡಿದಂತಹ ವಿಶ್ವಕರ್ಮ ಸಮಾಜವು ಸದಾ ಒಗ್ಗಟ್ಟಿನಲ್ಲಿ ಬದುಕುವಂತಹ ಸಮಾಜವಾಗಿದೆ ಎಂದರಲ್ಲದೆ, ಭೂಮಿ, ಸೂರ್ಯನನ್ನು ನೆನೆಸುವಂತೆ ಪ್ರತಿನಿತ್ಯ ವಿಶ್ವಕರ್ಮನನ್ನು ನೆನೆಪು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ವಿಶ್ವಕರ್ಮ ಜಂಯತಿಯು ಬಹಳ ಹಿಂದಿನಿಂದ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಮಾಜ ಮತ್ತಷ್ಟು ಗುರುತಿಸಿಕೊಳ್ಳುವಂತಾಗಲಿ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗ್ಯಯ ಮಾತನಾಡಿ, ವಿಶ್ವಕರ್ಮ ಜನಾಂಗದವರು ತಮ್ಮ ಸಂಸ್ಕøತಿ,
ನಾಗರೀಕತೆಯನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಬಿ.ಸಿ.ಎಂ. ಜಿಲ್ಲಾ ಅಧಿಕಾರಿ ಭಕ್ತ ಕುಚೇಲ, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ನಾಗರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೇಲ್ವಿಚಾರಕ ಸುರೇಶ್ ಸೇರಿದಂತೆ ವಿಶ್ವಕರ್ಮ ಜನಾಂಗದವರು ಹಾಗೂ ಮತ್ತಿತರರು ಹಾಜರಿದ್ದರು.

(Visited 1 times, 1 visits today)