ಗುಬ್ಬಿ

ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರುಗಳು ನಮ್ಮ ಪಕ್ಷದಲ್ಲಿ ಒಡಕಿದೆ ಎಂಬುದನ್ನು ಎಲ್ಲಿಯೂ ಹೇಳಬಾರದು. ಸರಿಪಡಿಸಲು ನಾವಿದ್ದೇವೆ ಎಂದು ಡಾ.ಜಿ.ಪರಮೇಶ್ವರ್‍ರವರು ಕಾರ್ಯಕರ್ತರಿಗೆ ಎಚ್ಚರಿಸಿದರು.
ಭಾರತ್ ಜೋಡೋ ಕಾರ್ಯಕ್ರಮಕ್ಕೆ ಬರುತ್ತಿರುವ ರಾಹುಲ್‍ಗಾಂಧಿಯವರು ಯಾವ ಯಾವ ಸ್ಥಳದಲ್ಲಿ ತಂಗಬೇಕು ಹಾಗೂ ಯಾವ ಸ್ಥಳದಲ್ಲಿ ಕಾರ್ಯಕ್ರಮ ಮಾಡಬೇಕೆಂಬುದನ್ನು ಪರಿಶೀಲನೆ ಮಾಡಿ ನಿಟ್ಟೂರು ಹೋಬಳಿಯ ಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು 75 ವರ್ಷಗಳಿಂದ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಭುತ್ವಕ್ಕೆ ಧಕ್ಕೆಯಾದಾಗ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರುಗಳಾಗಲೀ ಸಹಿಸುವುದಿಲ್ಲ ಆದ್ದರಿಂದ ರಾಹುಲ್‍ಗಾಂಧಿಯವರು ಸುಮಾರು 3500 ಕಿ.ಮೀ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡು ಆಯಾ ತಾಲ್ಲೂಕಿನ ಕಾರ್ಯಕರ್ತರಲ್ಲಿ ಹುರಿದುಂಬಿಸಲು ಹಾಗೂ ಭಾರತ ಐಕ್ಯತೆಯನ್ನು ಸಾರಲು ಈ ಭಾರತ್ ಜೋಡೋ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದ ಅವರು ಅಗತ್ಯ ವಸ್ತುಗಳ ಬೆಲೆಯೆರಿಕೆಯಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದ್ದು ಜಿಎಸ್‍ಟಿ ತೆರಿಗೆ ನೆಪದಲ್ಲಿ ಕೇಂದ್ರ ಸರ್ಕಾರವು ಹಾಲಿಗೂ ಸಹ ಜಿಎಸ್‍ಟಿಯನ್ನು ವಿಧಿಸಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ ಅವರು ಮನಮೋಹನ್ ಸಿಂಗ್‍ರವರು ಅಧಿಕಾರದಲ್ಲಿದ್ದು, 0% ಜಿಎಸ್‍ಟಿ ಇದ್ದು ಬಿ.ಜೆ.ಪಿ ಸರ್ಕಾರ ಬಂದಾಗ 5% ಜಿಎಸ್‍ಟಿ ಹೆಚ್ಚಿಗೆ ಮಾಡಿರುವುದು ನಾಗರೀಕರಿಗೆ ಹೊರೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಎಲ್ಲಾ ತಾಲ್ಲೂಕುಗಳಲ್ಲೂ ಸದೃಢವಾಗಿದ್ದು, ಕೆಲವು ನ್ಯೂನ್ಯತೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುತ್ತದೆ. ಪಕ್ಷದ ಬಲವರ್ಧನೆಗೆ ಎಲ್ಲಾ ನಾಯಕರುಗಳು ಶ್ರಮಿಸುತ್ತಿದ್ದು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತದೆ ನಮ್ಮ ಮುಂದಿರುವುದು ತಾಲ್ಲೂಕು ಮಟ್ಟದ ಜನಪ್ರತಿನಿಧಿಗಳನ್ನು ಗುರುತಿಸುವಂತಹ ಕೆಲಸವನ್ನು ಅದರದ್ದೇ ಆದಂತಹ ಸಮಿತಿ ಇದ್ದು ಅವರ ತೀರ್ಮಾನದಂತೆ ನಡೆಯುತ್ತದೆ. ಕಾಂಗ್ರೆಸ್‍ಗೆ ಬರುವವರನ್ನು ಸ್ವಾಗತಿಸುತ್ತೇವೆ ಎಂದ ಅವರು ರಾಹುಲ್‍ಗಾಂಧಿಯವರ ಕಾಲ್ನಡಿಗೆ ಜಾಥಾಗೆ ಪ್ರತಿಯೊಬ್ಬರು ಶ್ರಮಿಸಿ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಷಡಾಕ್ಷರಿ, ರಫೀಕ್‍ಅಹಮದ್, ಜಯಚಂದ್ರ ಟಿ.ಬಿ. ಕಾಂಗ್ರೆಸ್ ಆಕಾಂಕ್ಷಿಗಳಾದ ಬೆಮೆಲ್ ಕಾಂತರಾಜು, ಹೊನ್ನಗಿರಿಗೌಡ, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮುಖಂಡರಾದ ಶಂಕರಾನಂದ, ಶಶಿಧರ್ ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

(Visited 1 times, 1 visits today)