ತುಮಕೂರು


ವಿಶ್ವಕರ್ಮ ಯಜ್ಞ ಮಹೋತ್ಸವ ಸಮಿತಿ, ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ಶುಕ್ರವಾರ ಸಂಜೆಯಿಂದ ಯಜ್ಞಮಹೋತ್ಸವ,
ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಾಪುರವಾಡ್ ಗಾಯತ್ರಿ, ವಿಶ್ವಕರ್ಮ, ಕಾಳಿಕಾಂಬ ಉತ್ಸವದ ಮೆರವಣಿಗೆ ಚಾಲನೆ ನೀಡಿ ಮಾತನಾಡಿ ವಿಶ್ವಕರ್ಮ ಸಮುದಾಯ ತುಮಕೂರು ಜಿಲ್ಲೆಯಲ್ಲಿ ಸೌಹಾರ್ಧಯುತವಾಗಿ ಬಾಳ್ವೆ ನಡೆಸುತ್ತಿದ್ದು, ವಿಶ್ವಕರ್ಮರ ಕಲೆ ವಾಸ್ತುಶಿಲ್ಪ ಜಗದ್ವಿಖ್ಯಾತಿಗೊಳಿಸಿದೆ ಎಂದು ಹೇಳಿ ಶುಭ ಹಾರೈಸಿದರು.
ಜಿಲ್ಲಾಡಳಿತದ ವತಿಯಿಂದ ಆಚರಣೆ ಜಿಲ್ಲಾಡಳಿತ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಸಂಸದ ಜಿ.ಎಸ್.ಬಸವರಾಜು ಅವರು ಪುಷ್ಪಾರ್ಚನೆ ನೆರವೇರಿಸಿ ಭಾರತದ ಕಲೆಪರಂಪರೆಗೆ ವಿಶ್ವಮಟ್ಟದಲ್ಲಿ ಹಿರಿಮೆ ತಂದ ವಿಶ್ವಕರ್ಮ ಸಮುದಾಯ ಒಗ್ಗಟ್ಟನ್ನು ಸಾಧಿಸಬೇಕಿದೆ. ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ಎಸ್.ವಿ.ಆಚಾರ್‍ರಂತಹ ಮೇರು ವ್ಯಕ್ತಿತ್ವದವರು ಸಮಾಜದಲ್ಲಿ ಪ್ರಜ್ವಲಿಸಬೇಕಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ ವಿಶ್ವಕರ್ಮ ಜನಾಂಗ ಸುಸಂಸ್ಕøತರು, ಸೌಮ್ಯ ಸ್ವಭಾವದವರು ಎಲ್ಲಾ ಜಾತಿ ಜನಾಂಗದವರಿಗೆ ಬೆರೆತು ಹೋಗುವವರು. ಸಮುದಾಯ ಶಿಕ್ಷಣದ ಕಡೆ ಹೆಚ್ಚು ಒತ್ತುಕೊಡಬೇಕಿದೆ ಎಂದು ಸಲಹೆ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು, ನಿಗಮದ ವ್ಯವಸ್ಥಾಪಕ ಭಕ್ತಕುಚೇಲ ಪಾಲ್ಗೊಂಡರು.
ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ 50ನೇ ವರ್ಷದ ಜಯಂತಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು, ಸಮುದಾಯ ಮತ್ತಷ್ಟು ಸಂಘಟನೆ ಮೂಲಕ ಬಲಗೊಳ್ಳಬೇಕಿದೆ. ಸರಕಾರದ ವತಿಯಿಂದ ಜಯಂತಿ ಆಚರಿಸುತ್ತಿರುವ ವಿಶ್ವಕರ್ಮರಿಗೆ ಸಂದ ಗೌರವ ಎಂದರು.
ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮೀ ಸಂಸ್ಥಾನ ಪೀಠದ ಅಧ್ಯಕ್ಷ ಶ್ರೀನೀಲಕಂಠಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಸರಕಾರದಿಂದ ಜಯಂತಿ ಆಚರಿಸಿದರಷ್ಟೇ ಸಾಲದು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಇನ್ನೂ ಹೆಚ್ಚಿನ ಆರ್ಥಿಕ ಬಲತುಂಬಿ ಸಮಾಜ ಬಾಂಧವರಿಗೆ ನೆರವಾಗಬೇಕಿದೆ.ಪಂಚಕಸುಬುಗಳ ಸಮುದಾಯ ಇಡೀ ಜಗತ್ತಿಗೆ ಅನುಕೂಲ ಮಾಡಿಕೊಡುವವರಿದ್ದಾರೆ. ಸಮಾಜ, ಸರಕಾರ ರಾಜಕೀಯ ಪಕ್ಷಗಳು ಸಹ ಗುರುತಿಸಿ ಸೂಕ್ತ ಸೌಲಭ್ಯ ಕಲ್ಪಿಸಬೇಕಿದೆ ಎಂದರು.
ಯಜ್ಞ ಮಹೋತ್ಸವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಧನಿಯಾಕುಮಾರ್, ಸಮಿತಿ ಗೌರವಾಧ್ಯಕ್ಷ ಡಾ.ಕೆ.ವಿ.ಕೃಷ್ಣಮೂರ್ತಿ ಉಪಾಧ್ಯಕ್ಷರಾದ ಪಿ.ಟಿ.ನರಸಿಂಹಮೂರ್ತಿ, ಎಲ್.ರವಿ, ಎನ್.ಎಸ್.ರವಿ, ಕೆ.ಬಿ.ಗಜೇಂದ್ರಚಾರ್, ಜೆ.ಎನ್.ಗೋಪಾಲಕೃಷ್ಣಚಾರ್, ಸಹ ಕಾರ್ಯದರ್ಶಿಗಳಾದ ಟಿ.ವಿ.ಚೇತನ್‍ಕುಮಾರ್, ಮಂಜುನಾಥಚಾರ್, ಉಮೇಶ್, ಬಿ.ಶಶಿಧರ್, ಸತೀಶ್‍ಕುಮಾರ್, ಇತರ ಪದಾಧಿಕಾರಿಗಳು,ರ್Éೀಶಕರುಗಳು, ಪಾಂಡುರಂಗನಗರ ದೇವಸ್ಥಾನದ ವೆಂಕಟರವಣಚಾರ್, ಮೆಳೆಕೋಟೆ ದೇವಸ್ಥಾನದ ರಾಮಲಿಂಗಾಚಾರ್, ಎಲ್.ಎನ್.ಮಂಜುನಾಥ್, ಪಾಲಿಕೆ ಸದಸ್ಯರಾದ ನರಸಿಂಹಸ್ವಾಮಿ, ಟಿ.ಎಂ.ಮಹೇಶ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗರಾಜಾಚಾರ್, ನಿರ್ದೇಶಕರುಗಳು, ವಿಶ್ವಕರ್ಮ ಪತ್ತಿನ ಸಹಕಾರಿಯ ಚಂದ್ರಾಚಾರ್, ವಿಶ್ವಶಕ್ತಿ ಮಹಿಳಾ ಸಂಘದ ನಾಗರತ್ನ ಸುಧೀರ್, ಜಿ.ಲೀಲಾ, ಈಶ್ವರಿ ಜಯರಾಮಚಾರ್ ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣಮೂರ್ತಿ ಇತರ ಯುವ ಪದಾಧಿಕಾರಿಗಳು , ಹಾಜರಿದ್ದರು.
ಸನ್ಮಾನ: ಯಜ್ಞ ಮಹೋತ್ಸವದ ವೇದಿಕೆಯಲ್ಲಿ ಸಮಾಜದ ಹಿರಿಯರಾದ ವೆಂಕಟಾಚಾರ್, ಬಿ.ಲಕ್ಷ್ಮಣಚಾರ್, ನಿಟ್ಟೂರು ಡಾ.ಚಂದ್ರಶೇಖರ್, ಕೆ.ವಿ.ಪ್ರಭಾಕರಾಚಾರ್, ಎಚ್.ಸಿ.ಮೋಹನಕುಮಾರಿ ಅವರನ್ನು ಗೌರವಿಸಲಾಯಿತು. ಶುಕ್ರವಾರ ಸಂಜೆ ಋತ್ವಿಜರಿಂದ ಯಜ್ಞಮಹೋತ್ಸವ ನೆರವೇರಿತು. ಕಲಾ ಸಾಂಸ್ಕøತಿಕ ಪ್ರದರ್ಶನಗಳು ಗಮನಸೆಳೆದವು.

(Visited 11 times, 1 visits today)