ತುಮಕೂರು


ನಮ್ಮಲ್ಲಿ ಏಕತೆ ಇದ್ದರು ಸಹ ಬಹುತ್ವಕ್ಕೆ ಅದು ವಿರುದ್ಧವಾಗಿಲ್ಲ. ಏಕ ರಸತ್ವವನ್ನು ಒಳಗೊಂಡಿರುವ ಬಹುತ್ವ ನಮ್ಮ ಭಾರತೀಯ ಸಂಸ್ಕøತಿಯನ್ನು ಒಳಗೊಂಡಿದೆ ಎಂದು ಬಹುಮುಖಿ ಸಂಸ್ಕøತಿಯ ಚಿಂತಕ ಪೆÇ್ರ. ಹೆಚ್ ಎಸ್ ಶಿವಪ್ರಕಾಶ್ ಅಭಿಪ್ರಾಯ ಪಟ್ಟರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜು ಆವರಣದಲ್ಲಿ 21, ಬುಧವಾರ ಆಯೋಜಿಸಿದ್ದ ಕಲಾಸಿರಿ ಕಾಲೇಜು ವಾರ್ಷಿಕೋತ್ಸವ ಜಾನಪದ ಕಲಾಮೇಳ ಕಾರ್ಯಕ್ರಮದಲ್ಲಿ ‘ಕಲಾಸಿರಿ’ ವಾರ್ಷಿಕ ಸಂಚಿಕೆಯನ್ನ ಉದ್ಘಾಟಿಸಿ ಮಾತನಾಡಿದ ಅವರು ಜನರ ಮುಖಾ- ಮುಖಿಯಿಂದಾಗಿ ಜನಪದ ಕಲೆ ಸಂಸ್ಕøತಿಗಳು ತಮ್ಮನ್ನು ತಾವು ಬಿಂಬಿಸಿಕೊಂಡಿವೆ. ಯುವ ಸಮುದಾಯವು ಅಕ್ಷರ ಬಲ್ಲೆವೆಂದು ಅಹಂಕಾರ ಪಡದೆ ಜನಪದ ಗೌರವಿಸುವ ಕೆಲಸವಾಗಬೇಕು ಹಾಗೆಯೇ ಅವರಿಗೆ ಪೆÇ್ರೀತ್ಸಾಹ ನೀಡಬೇಕು ಎಂದು ತಿಳಿಸಿದರು.


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪೆÇ್ರ. ಎಸ್ ಸಿದ್ದರಾಮಯ್ಯ ಮಾತನಾಡಿ, ಭಾರತವು ಬಹುತ್ವ ಸಂಸ್ಕøತಿಯನ್ನು ಒಳಗೊಂಡಿದೆ. ಆದರೆ ಇತ್ತೀಚಿಗೆ ಜನಪದ ಕಲೆಗಳನ್ನು ತಾತ್ಸಾರ ಮನೋಭಾವದಿಂದ ಕಾಣಲಾಗುತ್ತಿದೆ. ಇವತ್ತಿನ ಶಿಕ್ಷಣ ಪದ್ದತಿಯು ನೆಲಮೂಲ ಸಂಸ್ಕøತಿಯನ್ನು ಸ್ವಪೆÇೀಹನ ಪಡೆಯುತ್ತಿದೆ. ನಾವು ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಭಾರತದ ಬಹುತ್ವ ಸಂಸ್ಕøತಿಯು ಒಡೆದು ಹೋಗುತ್ತದೆ. ಆದ್ದರಿಂದಾಗಿ ಬಹುತ್ವದ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯ ಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ವಿಶ್ವವಿದ್ಯಾಲಯ ಕುಲಪತಿ ಪೆÇ್ರ. ಎಂ ವೆಂಕಟೇಶ್ವರಲು ಸಮಾಜದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಕಾರ್ಯಕ್ರಮವು ಕಣ್ಣಿಗೆ ತಂಪು ಮತ್ತು ಕಿವಿಗೆ ಹಿಂಪು
ನೀಡುವಂತಿದೆ. ಕಾಲೇಜಿನಲ್ಲಿ ವಿದ್ಯಾರ್ಥಿ ಗಳಿಗೆ ಸದೃಢ ಬುನಾದಿಯನ್ನು ಹಾಕಿ ಕೊಡುವುದು ಮುಖ್ಯ ವಿದ್ಯಾರ್ಥಿಗಳು ತಮ್ಮನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಅದರ ಜೊತೆಗೆ ಕಲೆ ಸಂಸ್ಕøತಿಯನ್ನು ಒಳಗೊಂಡಿರುವುದು ಮುಖ್ಯ, ಇದರಿಂದಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತೊಗಲುಗೊಂಬೆ ಕಲಾವಿದರಾದ ಶ್ರೀಮತಿ ಜಯಂತಮ್ಮ ಅವರ ಕಲಾ ಸೇವೆಗಾಗಿ ಹಾಗೂ ವಾಸವಿ ಸಂಘದ ಅಧ್ಯಕ್ಷರಾದ ಡಾ. ಆರ್ ಎಲ್ ರಮೇಶ್ ಬಾಬು ಅವರ ಸಮಾಜಿಕ ಸೇವೆಗಾಗಿ ಅವರನ್ನು ಸನ್ಮಾನ ಮಾಡಲಾಯಿತು. ಇದೇ ವೇಳೆ ವಿಶ್ವವಿದ್ಯನಿಲಯದ ಬೇರೆ ಬೇರೆ ವಿಭಾಗಗಳಲ್ಲಿ ರ್ಯಾಂಕ್ ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಕುಲಸಚಿವ ಪೆÇ್ರ. ಶಿವ ಚಿತ್ತಪ್ಪ , ಕನ್ನಡ ವಿಭಾಗ ಪ್ರಾಧ್ಯಾಪಕ ಡಾ. ಶಿವಣ್ಣ ಬೆಳವಡಿ, ಕಲಾ ಕಾಲೇಜು ಪ್ರಾಂಶುಪಾಲ ಪೆÇ್ರ. ಕರಿಯಣ್ಣ ಉಪಸ್ಥಿತರಿದ್ದರು.

(Visited 1 times, 1 visits today)