ತುಮಕೂರು
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿ.ಐ.ಟಿ.ಯು. ಜಿಲ್ಲಾ ಸಮಿತಿಯಿಂದ ರಾಜ್ಯಾದ್ಯಂತ ನಡೆದ ಚಳುವಳಿಯ ಬಾಗವಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟಿಸಿ ಕಲ್ಯಾಣ ಮಂಡಳಿ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಛೇರಿ ಆಡಳಿತಾಧಿಕಾರಿ ಬಾಗ್ಯಮ್ಮನವರ ಮೂಲಕ ಸಲ್ಲಿಸಲಾಯಿತು. ರಾಜ್ಯದ ಕಾರ್ಮಿಕ ಸಚಿವರು ಮತ್ತು ವಸತಿ ಸಚಿವರು ಮಂಡಳಿ ಮೇಲೆ ಚುನಾವಣಾ ವರ್ಷದ ಕಾರಣ ಪ್ರಭಾವ ಬೀರಿ ನೈಜ ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಯನ್ನು ತಪ್ಪಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ತಿದ್ಧುಪಡಿ ಮಾಡಿರುವುದನ್ನು ವಿರೋಧಿಸಿ ಈ ಚಳುವಳಿ ನಡೆಸಲಾಯಿತು. ಚಳುವಳಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಐದು ವರ್ಷ ತುಂಬಿದ ನೈಜ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಸಾಲ / ಸಹಾಯಧನ / ಮುಂಗಡ ಹಣ ನೀಡುಬೇಕು ಬದಲಿಗೆ ಚುನಾವಣಾ ಲಾಭಕ್ಕೆ ಬಲಿಯಾಗಬಾರದು ಮಂಡಳಿ ಹಣ ಕಾರ್ಮಿಕರ ಪರಿಶ್ರಮದಿಂದ ಬಂದಿದೆ ಬಡ್ಜ್‍ಟ್ ಮೂಲಕ ಘೋಷಿಸಿ ಕಟ್ಟಡ ಕಾರ್ಮಿಕರಲ್ಲದವರಿಗೆ ನೀಡಬೇಕು. ನಕಲಿ ಕಾರ್ಮಿಕರ ನೊಂದಣೆ ಹೆಚ್ಚಾಗುತಿದ್ದು ಕೆಲವು ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಇದನ್ನು ತಡೆದು ನಿಜವಾದ ಕಾರ್ಮಿಕರಿಗೆ ಸೌಲಬ್ಯ ಸಿಗುವಂತೆ ಮಾಡಬೇಕೆಂದರು. ಮತ್ತೊಬ್ಬ ಮುಖಂಡ ಜಿಲ್ಲಾ ಖಜಾಂಚಿ ಇಬ್ರಾಹಿಂ ಖಲೀಲ್ ಮಾತನಾಡಿ ಬಾಕಿ ಇರುವ ಸೌಲಬ್ಯದ ಹಣ ತಕ್ಷಣ ಬಿಡುಗಡೆ ಮಾಡಬೇಕು, 2022-23 ನೇ ಸಾಲಿಗೆ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪೋರ್ಟಲ್ ಆರಂಭಿಸಬೇಕೆಂದರು. ಗುಬ್ಬಿ ಮುಖಂಡರಾದ ಜಯಣ್ಣ, ಪ್ರಕಾಶ್, ನಾರಾಯಣಪ್ಪ ತುಮಕೂರು ಉಪಾಧ್ಯಕ್ಷ ಶಂಕರಪ್ಪ, ನಂದೀಶ್, ರವೀಶ್ ಶಿರಾ ತಾಲೂಕು ಮುಖಂಡ ವೀರಭದ್ರಸ್ವಾಮಿ, ಮಾತನಾಡಿದರು. ‘ಸಿಜಿಎಚ್ ಆಧಾರಿತ ವೈಧ್ಯಕೀಯ ಮರುಪಾವತಿ’ ಯೋಜನೆ ರದ್ದು ಮಾಡಿ ಎಲ್ಲಾ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ ‘ಆರೋಗ್ಯ ಸಂಜೀವಿನಿ 2021’ ನಗದುರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು ಮತ್ತು ಇತರೆ 13 ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಯಿತು ಎಂ.ಟಿ. ವೆಂಕಟೇಶ್ ಕೊರಟಗೆರೆ
ಎನ್.ಟಿ. ಕೆಂಪರಾಜು, ಚಿಕ್ಕಣ್ಣ, ರವೀಶ್, ಶಿವು, ಗಂಗಾಧರ್, ವೆಂಕಟೇಶ್ ಸಿದ್ಧರಾಮಯ್ಯ, ಕೊಂಡಪ್ಪ, ಅಶ್ವತ್ಥಪ್ಪ, ಮತ್ತಿಘಟ್ಟ ಪ್ರಕಾಶ್, ನಿಟ್ಟೂರು ರವೀಶ್, ರಂಗನಹಳ್ಳ ಕಾಂತರಾಜ್, ಮಹಿಳಾಮುಖಂಡರಾದ ಅಂಜಿನಮ್ಮ, ಮಹಾಲಕ್ಷ್ಮಿ, ಮಂಜುಳ ನೇತೃತ್ವವಹಿಸಿದ್ದರು.