ತುಮಕೂರು
ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು, ಬರಹ, ಸಾಧನೆ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ
ಆದರ್ಶವಾಗಬೇಕು. ಎಲ್ಲರೂ ಅವರನ್ನು ಪೂಜ್ಯನೀಯ ಭಾವನೆಯಿಂದ ಸ್ಮರಿಸಬೇಕು ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕಲಾಶ್ರೀ ಡಾ.ಲಕ್ಷ್ಮಣ್ ದಾಸ್ ಅಭಿಪ್ರಾಯಪಟ್ಟರು.
ಈ ದೇಶದ ಎಲ್ಲಾ ನಾಗರೀಕರು ಮುಕ್ತ ಮನಸ್ಸಿನಿಂದ ಬಾಬಾ ಸಾಹೇಬರ ಚಿಂತನೆಗಳನ್ನು ಸ್ವೀಕರಿಸಬೇಕು. ಭೌದ್ಧಿಕ ಶಕ್ತಿಯನ್ನು ವಿಸ್ತರಿಸಿಕೊಳ್ಳುವುದರ ಮೂಲಕ ಸಮಾಜವನ್ನು ಅರ್ಥ ಮಾಡಿಕೊಂಡು ಸಮಾಜದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕು. ಭಾರತದ ಬಹುತ್ವದ ನೆಲೆಯೊಳಗೆ ಪ್ರತಿಯೊಂದು ಮತ, ಧರ್ಮಕ್ಕೂ ಸಮಾನತೆಯನ್ನು ಕಲ್ಪಿಸಿ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಸಂವಿಧಾನವನ್ನು ಬರೆಯಲಾಗಿದೆ ಎಂದರು.
ಸಂವಿಧಾನವು ಈ ನೆಲದ ಶ್ರೇಷ್ಠ ಗ್ರಂಥವಾಗಿ ಮಾರ್ಪಟ್ಟಿರುವುದು, ಜಗತ್ತಿನ ವಿವಿಧ ದೇಶಗಳಿಗೆ ಆದರ್ಶವಾಗಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ. ಬಾಬಾ ಸಾಹೇಬ್ ಅಂಬೇಡ್ಕರ್ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಜಗತ್ತೆ ಬೆರಗಾಗುವಂತೆ ಅತ್ಯುನ್ನತ ಪದವಿಗಳನ್ನು ಪಡೆದು ಶಿಕ್ಷಣ ಕ್ಷೇತ್ರದ ಮೇರು ಶಿಖರವಾಗಿ ಉಳಿದಿದ್ದಾರೆ. ಅವರ ಜ್ಞಾನದ ಕಾತುರತೆ ಇಂದಿನ ವಿದ್ಯಾರ್ಥಿ ಯುವ ಜನತೆಗೆ ಆದರ್ಶವಾಗಬೇಕು ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಮಲ್ಲಿಕಾರ್ಜುನ್ ಕೆಂಕೆರೆ ಮಾತನಾಡಿ, ದೇಶದ ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗ ಸೇರಿ ಆಡಳಿತದಲ್ಲಿ ಗೊಂದಲ ಉಂಟಾದಾಗ ಪರಿಹಾರ ಹುಡುವುದು ಈ ದೇಶದ ಸಂವಿಧಾನದಿಂದ. ಇಂತಹ ಬೃಹತ್ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಜ್ಞಾನ ಕ್ಷೇತ್ರದ ಮೇರು ಶಿಖರ ಹಾಗೂ ಪಾಂಡಿತ್ಯದ ವ್ಯಕ್ತಿತ್ವ. ಪ್ರತಿಭೆ ಯಾವ ಜಾತಿ, ಧರ್ಮ, ಭಾμÉ, ಪ್ರಾದೇಶಿಕತೆ ಯಾವುದನ್ನು ನೋಡುವುದಿಲ್ಲ. ನಿಜವಾದ ಪ್ರತಿಭೆ ಮತ್ತು ನಾಯಕತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರಲ್ಲಿ ಇತ್ತು. ಹಾಗಾಗಿ ಈ ದೇಶದ ರಾಷ್ಟ್ರದ ನಾಯಕರಾಗಿ, ಪ್ರತಿಭಾನ್ವಿತ ವ್ಯಕ್ತಿಯಾಗಿ ಇಂದಿಗೂ ನಮ್ಮೊಂದಿಗೆ ಇದ್ದಾರೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜಶೇಖರ್ ಸಿ ಕೋಟೆ ಅವರು ಮಾತನಾಡಿ ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಸಂವಿಧಾನಕμÉ್ಟೀ ಸಿಮೀತವಾಗಿರಲಿಲ್ಲ.ಅನೇಕ ಕೃತಿಗಳನ್ನು ಬರೆದಿದ್ದಾರೆ. ಜಾತಿ ವಿನಾಶ , ಪ್ರಭುತ್ವ ಮತ್ತು ಅಲ್ಪಸಂಖ್ಯಾತರು, ಹಿಂದೂ ಕೋಡ್ ಬಿಲ್, ಕ್ರಾಂತಿ ಮತ್ತು ಪ್ರತಿಕ್ರಾಂತಿ, ದ ಪ್ರಾಬ್ಲಂ ಆಪ್ ರುಪೀ ಮುಂತಾದ ಕೃತಿಗಳನ್ನು ಬರೆದಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್ ಮಾತನಾಡಿ ಸರ್ಕಾರದ ನಿರ್ದೇಶನದ ಮೇರೆಗೆ ವಿಶೇಷ ಘಟಕ ಯೋಜನೆಯಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ವಿದ್ಯಾರ್ಥಿಗಳ ಜ್ಞಾನ ವಿಸ್ತಾರಗೊಳ್ಳಲು ಅಂಬೇಡ್ಕರ್ ಓದು ಕಾರ್ಯಕ್ರಮ ಅನುμÁ್ಠನ ಮಾಡಿದೆ.ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನ ಬೃಹತ್ ಮತ್ತು ಲಿಖಿತ ರೂಪದಲ್ಲಿದ್ದು ಜಗತ್ತಿಗೆ ಆದರ್ಶವಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಓದು ಕುರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ಪವನ್, ದ್ವಿತೀಯ ಸ್ಥಾನ ಪಡೆದ ಭಾಗ್ಯಶ್ರೀ, ತೃತೀಯ ಬಹುಮಾನ ಗಳಿಸಿದ ರಕ್ಷಿತ್ ಅವರಿಗೆ ವಿಶ್ವವಿದ್ಯಾಲಯ ಕಲಾ ಕಾಲೇಜಿನ ಉಪನ್ಯಾಸಕ ಸಿದ್ದೇಶ್ ಸಿ ಸೋರೆಕುಂಟೆ ಬಹುಮಾನ ವಿತರಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೇಲ್ವಿಚಾರಕರಾದ ಡಿ.ವಿ ಸುರೇಶ್ ಕುಮಾರ್, ಲಕ್ಷ್ಮೀರಂಗಯ್ಯ, ಶ್ರೀನಿವಾಸ್ ರಾವ್, ಶಿವನಂಜಯ್ಯ, ಜಿ.ಡಿ ಮಂಜುನಾಥ್, ಪಿ.ಎಸ್, ಶ್ರೀನಿವಾಸ್, ನರಸಿಂಹರಾಜು,
ದರ್ಶನ್ ಉಪಸ್ಥಿತರಿದ್ದರು.