ತುಮಕೂರು


ಭಿಕ್ಷಾಟನೆ ನಿರ್ಮೂಲನೆಗಾಗಿ ಜನರಲ್ಲಿ ಅರಿವು ಮೂಡಿಸಲು ಪ್ರಚಾರ ವಾಹನದ ಮೂಲಕ ಸೆಪ್ಟೆಂಬರ್ ಮಾಹೆ ಅಂತ್ಯದವರೆಗೂ ಜನ-ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಟಿ.ಎಸ್.ಎಲ್ ಪ್ರೇಮಾ ತಿಳಿಸಿದರು.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕೇಂದ್ರ ಪರಿಹಾರ ಸಮಿತಿ, ನಿರಾಶ್ರಿತರ ಪರಿಹಾರ ಕೇಂದ್ರದ ಸಂಯುಕ್ತಾಶ್ರಯದಲ್ಲಿಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಮುಂಭಾಗದಲ್ಲಿ ಭಿಕ್ಷಾಟನೆ ನಿರ್ಮೂಲನೆಗಾಗಿ – ಜನಜಾಗೃತಿ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದು, ಕುಣಿಯುವುದು, ಭವಿಷ್ಯ ಹೇಳುವುದು, ಕೈಚಳಕಗಳನ್ನು ಮಾಡಿ ತೋರಿಸುವುದು, ಭಿಕ್ಷೆಯನ್ನು ಬೇಡುವ ನೆಪದಲ್ಲಿ ಗಾಯವನ್ನು ಪ್ರದರ್ಶಿಸುವುದು, ಪ್ರಾಣಿಗಳನ್ನು ಪ್ರದರ್ಶಿಸುವ ನೆಪದಲ್ಲಿ ಭಿಕ್ಷೆ ಬೇಡುವುದು, ಮೈಗೆ ಚಾಟಿಯನ್ನು ಹೊಡೆದುಕೊಂಡು ಪ್ರದರ್ಶನ ನೀಡುವುದು, ಕೈಕಾಲುಗಳಿಲ್ಲವೆಂದು ನಟನೆ ಮಾಡುವುದು ಇವೆಲ್ಲವುಗಳನ್ನು ಕಾನೂನು ಪ್ರಕಾರ ಭಿಕ್ಷಾಟನೆಯೆಂದು ಪರಿಗಣಿಸಲಾಗಿದೆ. ಇದನ್ನು ತಪ್ಪಿಸಿ ಅಂತಹವರಿಗೆ ಬೇರೆ-ಬೇರೆ ರೀತಿಯ ಉದ್ಯೋಗಾವಕಾಶಗಳನ್ನು ನೀಡುವ ಉದ್ದೇಶದಿಂದ ಭಿಕ್ಷಾಟನೆ ನಿರ್ಮೂಲನೆಗಾಗಿ ಜನ-ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಜಿ.ಬಿ. ಮಾರಪ್ಪ ಮಾತನಾಡಿ, ಸೆಪ್ಟೆಂಬರ್ ಮಾಹೆಯನ್ನು ಭಿಕ್ಷಾಟನಾ ನಿರ್ಮೂಲನಾ ಮಾಸವೆಂದು ಆಚರಣೆ ಮಾಡಲಾಗುತ್ತಿದ್ದು, ತಿಂಗಳಾಂತ್ಯದವರೆಗೆ ಜಿಲ್ಲಾದ್ಯಂತ ಭಿಕ್ಷಾಟನೆ ನಿರ್ಮೂಲನೆಗಾಗಿ ಜನ-ಜಾಗೃತಿ ಕಾರ್ಯಕ್ರಮದ ಪ್ರಚಾರ ವಾಹನದ ಮೂಲಕ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಕೇಶವರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್ ದಾಸ್ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು
ಹಾಜರಿದ್ದರು.

(Visited 1 times, 1 visits today)