ಬೆಂಗಳೂರು :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಾಂಧಿನಗರ, ರಾಜರಾಜೇಶ್ವರಿ ನಗರ ಮತ್ತು ಮಲ್ಲೇಶ್ವರಂ ವಿಭಾಗದಲ್ಲಿ ನಡೆದ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಾಸಕರು ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
2008ರಿಂದ 2012ರ ತನಕ ನಡೆದ ಅವ್ಯವಹಾರ, ನಕಲಿ ಬಿಲ್ ತಯಾರಿಕೆ, ಕಡತಗಳಿಗೆ ಬೆಂಕಿ ಹಚ್ಚಿರುವುದು ಎಲ್ಲವೂ ದೊಡ್ಡ ಹಗರಣ ನಡೆದಿದೆ ಎಂಬುದನ್ನು ಹೇಳುತ್ತಿವೆ. ಇದುವರೆಗೆ ಇದರ ಬಗ್ಗೆ ತನಿಖೆ ನಡೆಸಿದ ಸಂಸ್ಥೆಗಳು ಸಹ ಹಗರಣ ನಡೆದಿದೆ ಎಂದು ಹೇಳಿವೆ ಎಂದು ಎಎಪಿ ಹೇಳಿದೆ.
ಹೈಕೋರ್ಟ್ ಬಳಿಕ ಎನ್‌ಜಿಟಿ ಸರದಿ: ಬಿಬಿಎಂಪಿಗೆ 5 ಕೋಟಿ ದಂಡ ಗಾಂಧಿನಗರ , ರಾಜರಾಜೇಶ್ವರಿ ನಗರ ಮತ್ತು ಮಲ್ಲೇಶ್ವರಂ ವಿಭಾಗಗಳಲ್ಲಿ 2008 ರಿಂದ 2012 ರವರೆಗೆ ನಡೆದಿರುವ 1,539 ಕೋಟಿ ರೂ. ಗಳಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಲ್ಲಿನ ಅವ್ಯವಹಾರಗಳ ಬಗ್ಗೆ ಈಗಾಗಲೇ ಅನೇಕ ತನಿಖಾ ಸಂಸ್ಥೆಗಳು ವರದಿಯನ್ನು ನೀಡಿವೆ.
ಈ ಹಗರಣಗಳ ಕಡತಗಳು ಬಿಬಿಎಂಪಿ ಕೊಠಡಿಯಲ್ಲಿದ್ದವು. ಅದಕ್ಕೆ ಬೆಂಕಿ ಹಚ್ಚಲಾಗಿತ್ತು. ವಿಧಾನಸಭೆಯಲ್ಲಿ ಈ ಕುರಿತು ಭಾರಿ ಚರ್ಚೆ ನಡೆದ ಬಳಿಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.