ತುಮಕೂರು:
ಸರ್ಕಾರವು ಮುನಿಸಿಪಲ್ ಕಾರ್ಮಿಕರು ನಡೆಸಿದ ಮುಷ್ಕರ ಸಮಯದಲ್ಲಿ ನೀಡಿದ ಭರವಸೆಯನ್ನು ಮರೆತು ಬರಿ ನೇರ ಪಾವತಿ ಯಡಿಯಲ್ಲಿನ 11 ಸಾವಿರ ಪೌರ ಕಾರ್ಮಿಕರನ್ನು ಮಾತ್ರ ಖಾಯಂ ಮಾಡುವ ಸಚಿವ ಸಂಪುಟದ ತೀರ್ಮಾನವು ಕಾರ್ಮಿಕರಲ್ಲಿ ಒಡಕು ಉಂಟುಮಾಡುವ ಉಳಿದ 35000 ಇತರೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮುನಿಸಿಪಲ್ ಕಾರ್ಮಿಕರಿಗೆ ಅನ್ಯಾಯ ಮಾಡಿದಂತೆ ಅಗುತ್ತದೆ. ಸರ್ಕಾರ ಎಲ್ಲಾರನ್ನು ಸಮಾನವಾಗಿ ನಡೆಸಿಕೊಳ್ಳಬೇಕಾದ ಸಂವಿಧಾನ ಬದ್ದ ಕರ್ತವ್ಯವನ್ನು ಹೋಂದಿದೆ ಎಲ್ಲರನ್ನು ಹಂತ ಹಂತ ವಾಗಿ ಖಾಯಂ ಮಾಡಬೆಕು ಅದುವರೆವಿಗೆ ಎಲ್ಲಾರನ್ನು ನೇರ ಪಾವತಿ ಅಡಿಯಲ್ಲಿ ತಂದು ಸಮಾನ ಕೆಲಸ ಸಮಾನ ವೇತವನ್ನು ನಿಡಬೇಕು, ಲ್ಲಾ ಗುತ್ತಿಗೆ ಮುನಿಸಿಪಾಲ್ ಕಾರ್ಮಿಕರು ಅಲ್ಪ ವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಒಳಗೊಂಡು ಉಚಿತ ನೀವೆಶನವನ್ನು ನೀಡಬೇಕು, ಎಂದು ಒತ್ತಾಯಿಸಿ ವಿವಿಧ ಮುನಿಸಿಪಲ್ ಕಾರ್ಮಿಕರು ಸೆ.23 ರಂದು ಶುಕ್ರವಾರ ಮಧ್ಯಾನ್ಹ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಜಿಲ್ಲಾಧಿಕಾರಿಗಳಾದ ಶ್ರೀ ಪಾಟಿಲ್ ಅವರು ಮನವಿ ಸ್ವಿಕರಿಸಿ ಸರ್ಕಾರದ ಗಮನಗಕೆ ತರುವುದಾಗಿ ತಿಳಿಸಿದರು. ಜಿಲ್ಲಾ ನಗರಾಭಿವೃದ್ದಿ ಕೋಶದ ನೀರ್ಧೇಶಕರು ಮನವಿ ಸ್ವಿಕರಿಸಿದಾಗ ಮುನಿಸಿಪಾಲ್ ಕಾರ್ಮಿಕರು ಪ್ರಶ್ನೆಗಳ/ ಸಮಸ್ಯೆಗಳ ಸುರಿಮಳೆ ನಡೆಸಿದರು.ಇದಕ್ಕೆ ಪ್ರತಿಕಿಯೆ ನೀಡಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ನೀರ್ದೆಶನ ನೀಡುವುದಾಗಿ ತಿಳಿದಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದರು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ನೀರು ಸರಬರಾಜು ಕಾರ್ಮಿಕರ ಸಂಘ ಕುಮಾರ್, ಕಸದ ಅಟೋಚಾಲಕ ಸಂಘದ ಶಿವರಾಜು, ಪೌರ ಕಾರ್ಮಿಕರ ಸಂಘ ವೆಂಕಟೇಶ್, ಎನ್. ಕೆ . ಸುಬ್ರಮಣ್ಯ, ಬಿಳಿಗೇರೆ ರಘು ಅವರು ಮಾತನಾಡಿದರು
ಪ್ರತಿಭಟನಾ ಮೇರವಣಿಗೆ ಜಿಲ್ಲಾ ಕಾರ್ಮಿಕರ ಅಧಿಕಾರಿಗಳ ಕಛೇರಿ ಎದುರು ಸಮಾವೇಶಗೊಂಡು ಎಲ್ಲಾ ಕಾರ್ಮಿಕರಿಗೆ , ಸಂಬಳದ ಚೀಟಿ, ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಟ್ರೀಯ ಹಬ್ಬಗಳ, ಹಬ್ಬಗಳರಜೆ, ಗಳಿಕೆ ರಜೆ, ಅನಾರೋಗ್ಯ ರಜೆ, ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ / ಮರಣ ಹೊಂದುವ ಮುನಿಸಿಪಲ್ ಕಾರ್ಮಿಕರು/ ಅವಲಂಬಿತರಿಗೆ ಉಪಧನ ನೀಡುವ ಸಂಬಂದ ಸ್ಪಷ್ಟವಾದ ಸಂಬಂದ
ಆದೇಶ ಹೋರಡಿಸಬೇಕು. ಎಂದು ಹಾಗು ಸೆ27 ಹೆಚ್ಚಳವಾಗಿರುವ ಕನಿಷ್ಟ ಕೂಲಿ- 928 ರೂಪಾಯಿಗಳನ್ನು ಜಾರಿ ಮಾಡದವರ ಮೇಲೆ ಕ್ರಮ ಕೈಗೋಂಡು ಬಾಕಿ ಸಮೇತ ಕೊಡಿಸುವಂತ ಒತ್ತಾಯಿಸಲಾಯಿತು.
ಮನವಿ ಸ್ವಿಕರಿಸಿದ ಜಿಲ್ಲಾ ಕಾರ್ಮಿಕರ ಅಧಿಕಾರಿಗಳಾದ ರಮೇಶ್ ಅವರು ಕಾರ್ಮಿಕ ಕಾಯಿದೆ ಗಳನ್ನು ಜಾರಿ ಮಾಡಲೆ ಬೇಕು , ಇದನ್ನು ಉಲ್ಲಂಘಿಸುವವರ ಮೇಲೆ ಕಾರ್ಮಿಕ ಇಲಾಖೆ ಮುಲಾಜಿಲ್ಲದೆ ಕ್ರಮವಹಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲ ತುಮಕೂರು ಪೌರ ಕಾರ್ಮಿಕರ ಸಂಘ. ರಿ ಖಜಾಂಚಿ ಕೆಂಪಣ್ಣ,ಮಂಜುನಾಥ್, ಹನುಮಂತರಾಯಪ್ಪ, ಸಹ ಕಾರ್ಯಧರ್ಶಿಗಳುನಾಗರಾಜು, ತುಮಕೂರು ಜಿಲಾ ್ಲ ನೀರು ಸರಬರಾಜು ನೌಕರರ ಸಂಘ[ರಿ] ಮಂಜುನಾಥ್, ಚಂದ್ರಪ್ಪ, ತುಮಕೂರು ಮಹಾ ನಗರ ಪಾಲಿಕೆ ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘ. ರಿ ಮಂಜುನಾಥ , ಮಹಾ ನಗರ ಪಾಲಿಕೆ ವಾಹನ ಚಾಲಕರ ಸಂಘದ ತಿಪ್ಪಸ್ವಾಮಿ, ಸಾಧಿಕ್ ತಿಪಟೂರು ಶಿವಣ್ಣ, ಅಸ್ಪತ್ರೆ ಕಾರ್ಮಿಕರ ಸಂಘ , ರಂಗಮ್ಮ, ಮತ್ತಿತರು ಇದ್ದರು.