ಚಿಕ್ಕನಾಯಕನಹಳ್ಳಿ:
ಮತ್ತಿಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಾಲಿ ನಿರ್ದೇಶಕ ಸಚಿವರ ಕಟ್ಟಾ ಬೆಂಬಲಿಗ ನಿರಂಜನ್ ಮೂರ್ತಿ ಅಧಿಕಾರದ ಅಮಲಿನಲ್ಲಿ ಇಡೀ ಆಡಳಿತ ಮಂಡಳಿಯನ್ನೇ ದುರುಪಯೋಗಪಡಿಸಿಕೊಂಡು ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯವನ್ನು ಅರ್ಹ ಫಲಾನುಭವಿಗಳಾಗಿದ್ದರು ರಾಜಕೀಯ ದುರುದ್ದೇಶದಿಂದ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆಯುವ ಮೂಲಕ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ಷೇರುದಾರ ಓಬಳಯ್ಯ ಆರೋಪಿಸಿದರು
ಶುಕ್ರವಾರ ಹಂದನಕೆರೆ ಹೋಬಳಿ ಮತ್ತಿ ಕಟ್ಟಾ ಗ್ರಾಮದ ಸಂತೆ ಮೈದಾನದ ಆವರಣದಲ್ಲಿ ಮತ್ತಿಘಟ್ಟ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಸಂಘದ ಅಧ್ಯಕ್ಷರಾದ ನಟರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಆರೋಪಿಸಿದರು
ಓಬಳಯ್ಯ ಮಾತನಾಡುತ್ತಾ ತಾಲೂಕಿನ ಯಾವುದೇ ಸಹಕಾರಿ ಸಂಘದ ಮೂಲಕ ಅರ್ಹ ರೈತರಿಗೆ ಸಾಲ ನೀಡಲು ಜಿಲ್ಲಾ ಸಹಕಾರಿ ಬ್ಯಾಂಕ್ ಮುಂದಾಗಿದ್ದರು ರಾಜಕೀಯ ದುರುದ್ದೇಶದಿಂದ ಇಂತಹ ಪ್ರಕರಣಗಳು ಸರ್ವೇಸಾಮಾನ್ಯವಾಗಿ ಕಾಣಸಿಗುತ್ತದೆ
ಮತ್ತಿಘಟ್ಟ ಸಹಕಾರಿ ಬ್ಯಾಂಕಿನಲ್ಲಿ ರತ್ನಮ್ಮ ಎಂಬುವರಿಗೆ 3,20, 000 ಗಳು ಹಾಗೂ ಲೋಕೇಶ್ ಎಂಬವರಿಗೆ ಮೂರು ಲಕ್ಷ ವೈಯಕ್ತಿಕ ಸಾಲ ನೀಡುವ ಮೂಲಕ ಯಾವುದೇ ದಾಖಲಾತಿಗಳನ್ನು ಪಡೆಯದೆ ಆಗಿನ ಕಾರ್ಯದರ್ಶಿ ಚೆನ್ನಬಸವಯ್ಯ ಅಕ್ರಮ ಎಸಗಿದ್ದಾರೆ ಎಂದು ಸದಸ್ಯ ಹಾಗೂ ಷೇರುದಾರರು ಆರೋಪಿಸಿದರು ಇದೆ ಬ್ಯಾಂಕಿನಲ್ಲಿ 100000 ಮೇಲೆ ಯಾರಿಗೂ ಯಾವುದೇ ಸಾಲ ನೀಡುವಂತಿಲ್ಲ ಎಂದು ಮಂಡಳಿ ತೀರ್ಮಾನವಾಗಿದ್ದರೂ ಈ ಅವ್ಯಯಭಾರಕ್ಕೆ ಸಿಇಒ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸಿಇಓ ಚನ್ನಬಸವ ಎಣಿಕೆ ನೀಡಬೇಕಾದ ಸೌಲಭ್ಯವನ್ನು ತಡೆದು ಸಾರ್ವಜನಿಕರ ಹಣ ಪೆÇೀಲಾಗದಂತೆ ತಡೆಯುವಂತೆ ನಿರ್ದೇಶಕ ಹಾಗೂ ಸೇರುದಾರರ ಪರವಾಗಿ ಥಿ m ಮಹಾಲಿಂಗ ಮೂರ್ತಿ ಸರ್ವ ಸದಸ್ಯರ ಸಭೆಯಲ್ಲಿ ಬಹಿರಂಗಪಡಿಸಿದ್ದರು
ಷೇರುದಾರ ಸಿದ್ದಯ್ಯ ಮಾತನಾಡಿ ಸೇರುದಾರರ ಪರವಾಗಿ ಸದಸ್ಯರು ಮಾತನಾಡಬಹುದು ಆಡಳಿತ ಮಂಡಳಿಯ ಆಗುವ ಲೋಪವನ್ನು ಸಾರ್ವಜನಿಕರ ಎದುರು ಬಹಿರಂಗಪಡಿಸುವ ಅಧಿಕಾರ ಸಾಮಾಜಿಕ ನ್ಯಾಯದ ಅಡಿಯಲ್ಲಿದೆ ಎಂದು ಆಡಳಿತ ಮಂಡಳಿಯ ಕೆಲವರಿಗೆ ತಿಳಿಸುವ ಮೂಲಕ ಜಮ ಖರ್ಚಿನ ವಿವರದಲ್ಲಿ ಲೋಪಗಳ ಬಗ್ಗೆ ಬಹಿರಂಗಪಡಿಸಿದರು
ಆನಂದ್ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷದ ಹೆಸರು ಮಾತನಾಡುವುದು ಬೇಡ ಇದು ಸಹಕಾರಿ ಕ್ಷೇತ್ರ ಶೇರುದಾರರಿಗೆ ಹಾಸನದ ವ್ಯವಸ್ಥೆ ಮಾಡಿಲ್ಲ ಎಂದು ಆಡಳಿತ ಮಂಡಳಿಯ ಮೇಲೆ ಕಿಡಿ ಕಾರಿದರು
ಸಭೆಯಲ್ಲಿ ಅಧ್ಯಕ್ಷರಾದ ನಟರಾಜು ಅಂದನಕೆರೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸುಧಾಕರ್ ಉಪಾಧ್ಯಕ್ಷ ಲತಾ ಎಂ ಎನ್ ನಾಗರಾಜ್ ಎಂವಿ ವೇದಾಂತ ಮೂರ್ತಿ ಎಂ ಕೆ ಶಿವಾನಂದ್ ಸಂತೋಷ್ ಲೋಕೇಶ್ ಮಂಜುನಾಥ್ ಪ್ರಭಾರ ಕಾರ್ಯದರ್ಶಿ ಎಂ ಜಿ ವತ್ಸಲ ಉಪಸ್ಥಿತರಿದ್ದರು.