ಮಧುಗಿರಿ


18 ವರ್ಷವಾದರೂ ಬಾರದ ಪಿಂಚಣಿ ಸೌಲಭ್ಯ, ಹಕ್ಕುಪತ್ರವಿದ್ದರೂ ಬೇರೆಯವರಿಗೆ ನಿವೇಶನ ಪರಬಾರೆ, ಪುರಸಭೆ ಅಂಗಡಿ ಮಳಿಗೆಗಳ ಹರಾಜು, ಮದುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವಿದ್ದರೂ ಖಾಸಗಿ ಆಸ್ಪತ್ರೆಗೆ ರವಾನೆ, ಬಗರ್ ಹುಕುಂ ಅರ್ಜಿಗಳು ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಲೋಕಾಯುಕ್ತರ ಎಸ್ಪಿ ವಲಿಬಾಷ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ರಂಗಮ್ಮ ಎಂಬುವವರ ಪರವಾಗಿ ದೊಡ್ಡೇರಿ ಕಣಿಮಯ್ಯ ಮಾತನಾಡಿ ಇವರ ಪತಿ ಓಬಳರಂಗಯ್ಯ 2004 ರಲ್ಲಿ ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿವೃತ್ತಿ ಹೊಂದಿ ನಂತರದ ದಿನಗಳಲ್ಲಿ ಮೃತಪಟ್ಟಿದ್ದು, ನನ್ನ ಗಂಗನ ಸೇವಾವಧಿ ನಕಲು ನೀಡುವಂತೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಸುಖಾಸುಮ್ಮನೆ ಕಚೇರಿಗೆ ಬೆಂಕಿ ಬಿದ್ದಿದೆ ಎಂದು ಸಬೂಬು ಹೇಳುತ್ತಾ ವಿನಾ ಕಾರಣ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದಾಗ, ನಿವೃತ್ತಿ ಹೊಂದಿ 18 ವರ್ಷಗಳಾದರೂ ಏಕೆ ಸೇವಾವಧಿ ನಕಲು ನೀಡಿಲ್ಲ ಎಂದು ಲೋಕಾಯುಕ್ತ ಎಸ್ಪಿ ವಲಿಬಾಷ ಅಸಮಾಧಾನ ವ್ಯಕ್ತಪಡಿಸಿ ಟಿ.ಹೆಚ್.ಓ ಗಳಿ ಚರ್ಚಿಸಿ ಬಗೆ ಹರಿಸುವುದಾಗಿ ಭರವಸೆ ನೀಡಿದರು.
ಪುರಸಭೆ ಅಂಗಡಿ ಮಳಿಗೆಗಳಲ್ಲಿ ಹಾಲಿ ಇರುವ ಬಾಡಿಗೆದಾರರ ಗುತ್ತಿಗೆ ಅವಧಿಯನ್ನು ರದ್ದು ಪಡಿಸಿ ಬಾಡಿಗೆದಾರರನ್ನು ಕೂಡಲೇ ತೆರವುಗೊಳಿಸಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು 2019 ಆಗಸ್ಟ್ 26 ರಂದೇ ತೀರ್ಪು ನೀಡಿದ್ದರೂ ಇಲ್ಲಿಯವರೆಗೂ ಕಾಲಿ ಮಾಡಿಸಿಲ್ಲ ಆದ್ದರಿಂದ ಹೈಕೋರ್ಟ್
ಆದೇಶವನ್ನು ದಿಕ್ಕರಿಸಿದ ಪುರಸಭೆ ಮುಖ್ಯಾಧಿಕಾರಿ ಮತ್ತು ಕಂದಾಯಾಧಿಕಾರಿ ವಿರುದ್ದ ಕ್ರಮ ಕೈಗೊಂಡು ಅಂಗಡಿ ಮಳಿಗೆಗಳ ಹರಾಜು ಮಾಡಲು ಆದೇಶಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎಂ.ವೈ. ಶಿವಕುಮಾರ್ ಮನವಿ ಮಾಡಿದಾಗ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗಂಜಲಗುಂಟೆ ಗ್ರಾ.ಪಂ ವ್ಯಾಪ್ತಿಯ ಮುದ್ದೇನಹಳ್ಳಿ ಗ್ರಾಮದಲ್ಲಿ ನಮಗೆ ನಿವೇಶನ ಮಂಜೂರಾಗಿದ್ದು, ಗ್ರಾ.ಪಂ ವತಿಯಿಂದ ಹಕ್ಕುಪತ್ರ ನೀಡಿದ್ದರೂ ಈ ಹಿಂದಿನ ಪಿಡಿಓ ರವಿಚಂದ್ರರವರು ಅದೇ ಗ್ರಾಮದ ಗಂಗಮಾಳಮ್ಮ ಪುಟ್ಟದಾಸಪ್ಪ ಎಂಬುವವರಿಗೆ ಯಾವುದೇ ದಾಖಲೆಗಳಿಲ್ಲದಿದ್ದರೂ ಅವರಿಗೆ ನಿವೇಶನ ಪರಬಾರೆ ಮಾಡಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು
ಮುದ್ದೇನಹಳ್ಳಿ ಗ್ರಾಮದ ನಾಗರಾಜು ಮನವಿ ಮಾಡಿದಾಗ, ಸಂಬಂದಪಟ್ಟ ಪಿಡಿಓರವರನ್ನು ಕರೆಸಿ ಮಾಹಿತಿ ಪಡೆದು ನ್ಯಾಯ ದೊರಕಿಸಿಕೊಡಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ಟಿ.ಹೆಚ್.ಓ ರವರ ಬಳಿ ಚರ್ಚಿಸಿ ಮುಂದೆ ಇಂತಹ ಅನಾಹುತಗಳಾಗದಂತೆ ತನ್ನ ಅಧೀನದ ವೈದ್ಯರಿಗೆ ತಿಳಿಸಲು ಸೂಚಿಸಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಒಟ್ಟು 45 ಅರ್ಜಿಗಳು ಬಂದಿದ್ದು, ಅದರಲ್ಲಿ ಕಂದಾಯ ಇಲಾಖೆಯ ಸಂಬಂಧಿಸಿದ ಬಗರ್ ಹುಕುಂ ಅರ್ಜಿಗಳೇ ಹೆಚ್ಚಾಗಿ ಬಂದಿದ್ದವು, ನಂತರ ಖಾತೆ ಬದಲಾವಣೆ, ಆರೋಗ್ಯ ಇಲಾಖೆಯ ಬಗ್ಗೆ, ಗ್ರಾ.ಪಂಗಳ ಪೈಕಿ ರೆಡ್ಡಿಹಳ್ಳಿ ಮತ್ತು ಐ.ಡಿ.ಹಳ್ಳಿ ಗ್ರಾ.ಪಂ ಗಳಲ್ಲಿ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದವು.
ನ್ಯಾಯಾಲಯದಿಂದ ಶಿಕ್ಷೆಗೊಳಗಾದಾಗ ಮಾತ್ರ ನೊಂದವರಿಗೆ ಪರಿಹಾರ ಸಾದ್ಯ. ಕೇವಲ ಅರ್ಜಿಗಳಿಗೇ ಸೀಮಿತವಾದಲ್ಲಿ ಯಾವುದೇ ಪ್ರಯೋಜನವಿಲ್ಲ. ಸಾರ್ವಜನಿಕರು ಕಾನೂನು ಬಾಹಿರವಾಗಿ ಆಸ್ತಿ ಸಂಪಾದಿಸಿದವರ ವಿರುದ್ದ ಸಂಸ್ಥೆಗೆ ಮಾಹಿತಿ ನೀಡುವ ಮೂಲಕ ನೀವೂ ಸಹ ಸಂಸ್ಥೆಯೊಂದಿಗೆ ಕೈ ಜೋಡಿಸಿದಲ್ಲಿ ಕೆಲಸ ಮಾಡಲು ಸಹಾಯಕವಾಗಲಿದೆ. ಕಾನೂನು ರೀತಿ ಶಿಕ್ಷೆಗೊಳಗಾದಾಗ ಮಾತ್ರ ಸಾರ್ವಜನಿಕರ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಭಯ ಬರುತ್ತದೆ.
ಸಾರ್ವಜನಿಕರು ಭಯ ಪಡುವ ಅವಶ್ಯಕತೆಯಿಲ್ಲ. ನಿಮ್ಮ ರಕ್ಷಣೆಗೆ ಸಂಸ್ಥೆ ಸದಾ ಜೊತೆಗಿರುತ್ತದೆ. ನಿಮ್ಮಗಳ ಕೆಲಸವೂ ಸರಾಗವಾಗಿ ನಡೆಯುತ್ತದೆ
ಶೇ. 80 ರಷ್ಟು ಅರ್ಜಿಗಳು ಬಗರ್ ಹುಕುಂಗೆ ಸಂಬಂದಿಸಿದ ಅರ್ಜಿಗಳಾಗಿದ್ದು, ಸಂಬಂದಪಟ್ಟ ತಹಶೀಲ್ದಾರ್ ರೊಂದಿಗೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಲೋಕಾಯುಕ್ತ ಪೆÇೀಲೀಸ್ ಉಪಾಧೀಕ್ಷಕ ಸಿ.ಆರ್. ರವೀಶ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಲೋಕಾಯುಕ್ತ ನಿರೀಕ್ಷಕ ಕೆ. ರಾಮರೆಡ್ಡಿ ಮತ್ತು ಸಾರ್ವಜನಿಕರು ಇದ್ದರು.

(Visited 2 times, 1 visits today)