ತುರುವೇಕೆರೆ
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಹಲವು ಪರೀಕ್ಷೆ ಮಾಡಲು ಸಾರ್ವಜನಿಕರಿಂದ ಲಂಚ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ದಾಖಲೆ ಸಿಡಿ ಸಹಿತ ಪೋಲೀಸ್ ಅದೀಕ್ಷಕ ಲೋಕಾಯುಕ್ತ ರಾಮರೆಡ್ಡಿಯವರಿಗೆ ಸೋಮವಾರ ದೂರು ನೀಡಿದ್ಧಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಲೋಕಾಯುಕ್ತ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಮಾಜಿಕ ಕಾರ್ಯಕರ್ತರ ವೇದಿಕೆ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಬ್ರಷ್ಟಚಾರ ಲಂಚಗುಳಿತನ ಹೆಚ್ಛಾಗಿದೆ. ಹೆರಿಗೆ ಡಾಕ್ಟರ್‍ಗಳು
ಸಿಜೇರಿಯನ್ ಮಾಡಲು ಸುಮಾರು 10 ಸಾವಿರ ಹಣ ಪಡೆಯುತ್ತಿದ್ದಾರೆ. ಇದಲ್ಲದೇ ಸರ್ಕಾರಿ ಆಸ್ಪತ್ರೆ ಡಾಕ್ಟರ್ ಗಳು ಪಟ್ಟಣದಲ್ಲಿ ಸ್ವಂತ ಕ್ಲೀನಿಕ್ ಗಳನ್ನು ಮಾಡಿಕೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳನ್ನು ನಮ್ಮ ಕ್ಲೀನಿಕ್ ಗೆ ಬರಮಾಡಿಕೊಂಡು ಹಲವು ಕೆಲವು ಪರೀಕ್ಷೆಯ ನೆಪದಲ್ಲಿ ಸಾವಿರಾರು ರೂಗಳನ್ನು ಪೀಕುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಬಡ ರೋಗಿಗಳನ್ನು ಕೈಯಿಂದ ಮುಟ್ಟಿ ಸಹ ನೋಡದೇ ದೂರದಲ್ಲಿಯೇ ನಿಂತು ಏನಾಗಿದೆ ಹೇಳಿ ಕೇಳಿ ಚೀಟಿ ಬರೆದುಕೊಡುತ್ತಿದ್ದಾರೆ ಎಂದರು.
ಲೋಕಾಯುಕ್ತ ರಾಮರೆಡ್ಡಿ ಮಾತನಾಡಿ ನಮಗೆ ವಿಡಿಯೋ ದಾಖಲೆ ನೀಡುವ ಮುನ್ನಾ ಮೊದಲೇ ಮಾಹಿತಿ ನೀಡಿ. ಹಣ ಪಡೆಯುತ್ತಿರುವ ಅಧಿಕಾರಿಗಳ ಬಗ್ಗೆ ನಮಗೆ ಮಾಹಿತಿ ನೀಡಿ ಟ್ರಾಪ್ ಮಾಡಿಸಿ ಎಂದರು. ಡಾಕ್ಟರ್‍ಗಳು ಸರ್ಕಾರಿ ಆಸ್ಪತ್ರೆಯ ಕೆಲಸ ಮುಗಿದ ನಂತರ ಸ್ವಂತ ಕ್ಲೀನಿಕ್ ತೆರೆದು ಸೇವೆ ಮಾಡುವ ಅವಕಾಶ ಇದೆ. ಸರ್ಕಾರಿ ಕೆಲಸದ ಸಮಯದಲ್ಲಿ ಸ್ವಂತ ಕ್ಲೀನಿಕ್ ನಲ್ಲಿ ಹಾಜರಿದ್ದರೆ ಅದರ ಬಗ್ಗೆ ಮಾಹಿತಿ ನೀಡಿ ಎಂದರು.
ಕೊಳಾಲದ ಪುನಿತ್ ಎಂಬುವರು ನಮ್ಮ ಜಮೀನು ವಿವಾದಲ್ಲಿದ್ದು ಪೋಲೀಸರು ನಮಗೆ ನ್ಯಾಯ ಓದಗಿಸುತ್ತಿಲ್ಲ ನಮ್ಮ ವಿರುದ್ದರ ಪರವಾಗಿ ಮಾತನಾಡಿ ನಮ್ಮ ಮೇಲೆಯೇ ಕೇಸ್ ಮಾಡುತ್ತಿನಿ ಎಂದು ಬೆದರಿಸುತ್ತಾರೆ ನಮಗೆ ನ್ಯಾಯ ಓದಗಿಸಿ ನಮ್ಮ ಜಮೀನು ನಮಗೆ ಕೊಡಿಸಿ ಎಂದು ಅರ್ಜಿ ನೀಡಿದರು.
ಕೋಳಘಟ್ಟ ಗ್ರಾಮದ ಪಕ್ಕದಲ್ಲಿ ನೆಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಕೋಳಘಟ್ಟ ಗ್ರಾಮಸ್ಥರು ಮನವಿ ನೀಡಿದರು. ತೋವಿನ ಕೆರೆ ಗ್ರಾಮದ ಶಿವಕುಮಾರ್ ಎಂಬುವರು ಅದೇ ಗ್ರಾಮದ ಸಿದ್ದಲಿಂಗಪ್ಪ ಎಂಬುವರು ನಮಗೆ ದಾರಿ ಬಿಡುತ್ತಿಲ್ಲ. ಈ ರಸ್ತೆ ಸರ್ಕಾರಿ ರಸ್ತೆಯಾಗಿದ್ದು ಈಗಾಗಲೇ ಸರ್ಕಾರದಿಂದ ಅನುದಾನವನ್ನು ಹಾಕಿ ರಸ್ತೆ ಅಭಿವೃದ್ದಿ ಮಾಡಲಾಗಿದೆ ಆದರೂ ನಮಗೆ ತಿರುಗಾಡಲು ತೊಂದರೆ ನೀಡುತ್ತಾರೆ. ಸಂಭಂದ ಪಟ್ಟ ಅಧಿಖಾರಿಗಳು ಪೋಲೀಸ್ ಠಾಣೆಗೂ ದೂರು ನೀಡಿದ್ದೇನೆ ಎಂದು ದಾಖಲೆ ಸಮೇತ ದೂರು ನೀಡಿದರು. ಸೂಳೆಕೆರೆ ಗ್ರಾಮ ಪಂಚಾಯಿತಿ ಸದಸ್ಯ ಮುನಿಸ್ವಾಮಿ ತನ್ನ ಹೆಂಡತಿ ಹೆಸರಿಗೆ ದನದ ಕೊಟ್ಟಿಗೆ ಮುಂಜೂರು ಮಾಡಿಕೊಂಡಿದ್ದು ಹಣ ಪಡೆದಿರುತ್ತಾರೆ
ಆದರೆ ಇದರೆ ಪಲಾನುಭವಿಗಳಿಗೆ ಗ್ರಾಮ ಪಂಚಾಯಿ ಹಣವನ್ನು ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ದೊರೆಸ್ವಾಮಿ ದೂರು ನೀಡಿದರು.