ತುಮಕೂರು

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಎರಡು ವರ್ಷಗಳ ಆಡಳಿತಾವಧಿಯಲ್ಲಿ ಹಲವಾರು ಜನಪ್ರಿಯ-ಜನಪರ ಕಾರ್ಯಕ್ರಮಗಳ ಮಹಾಪೂರಗಳನ್ನೇ ನೀಡಿದ್ದು, ಜನರಿಗೆ ತಲುಪಿಸುವ-ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡುವಂತೆ ಇಂಧನ ಖಾತೆ ಮತ್ತು ಕನ್ನಡ ಸಂಸ್ಕøತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಕರೆ ನೀಡಿದರು.
ಇವರು ಇಂದು ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಕಳೆದ 2 ವರ್ಷಗಳಲ್ಲಿ ಇಂಧನ ಖಾತೆಯಲ್ಲಿ ಪ್ರಮುಖವಾದ ಬೆಳಕು ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಯ 8500 ಮನೆಗಳಿಗೆ ವಿದ್ಯುತ್, ಅಮೃತ ಯೋಜನೆಯಡಿಯಲ್ಲಿ ಎಸ್.ಸಿ./ಎಸ್.ಟಿಯ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ 75 ಯೂನಿಟ್ ವಿದ್ಯುತ್ ಮತ್ತು ರೈತರ ಟಿ.ಸಿ. ಸುಟ್ಟ 24 ಘಂಟೆಗಳಲ್ಲಿ ಟಿ.ಸಿ.ಅಳವಡಿಕೆ ಮಾಡಲಾಗುತ್ತಿದೆ ಎಂದರು.
ಇದಲ್ಲದೆ, ರಾಜ್ಯ ಸರ್ಕಾರವು ರೈತರು ಐ.ಪಿ.ಸೆಟ್ ಅಳವಡಿಕೆ ಮಾಡಿಕೊಳ್ಳಲು ಹಲವಾರು ವರ್ಷಗಳಿಂದ ಅರ್ಜಿ ಹಾಕಿದ್ದವರಿಗೆ ಐಪಿ ಸೆಟ್ ಅಳವಡಿಕೆ ಕ್ರಮ ಆರಂಭಿಸಿದ್ದು, ತುಮಕೂರು ಜಿಲ್ಲೆಯ 65,000 ಐಪಿ ಸೆಟ್ ಅಳವಡಿಕೆಗೆ ಕ್ರಮ ಕೈಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ರೀತಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಭಾರೀ ಬದಲಾವಣೆ ಮತ್ತು ಕನ್ನಡ ಪರವಾದ ಸೇವಾ ಚಟುವಟಿಕೆ ಆರಂಭಿಸಿದ್ದು, ಎಡಪಂಥೀಯ ಧೋರಣೆ ಇಟ್ಟುಕೊಂಡು, ಗೊಂದಲದ ವಾತಾವರಣ ಮಾಡುತ್ತಿರುವವರನ್ನು ಹೊರಗಿಟ್ಟು ಕನ್ನಡ ನಾಡು, ನುಡಿ, ನೆಲ, ಭಾಷೆ ಅಭಿವೃದ್ಧಿ ಪರವಾದ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಈ ವರ್ಷ ನವಂಬರ್ ಒಂದರಿಂದ ಮಾತಾಡು-ಮಾತಾಡು ಕನ್ನಡ ಕಾರ್ಯಕ್ರಮ ಮತ್ತು ಕೋಟಿ ಜನರ ಬಳಿ ಹಾಡು-ಹಾಡು ಕನ್ನಡ ಎಂಬ ಕೋಟಿ ಕಂಠ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಅಧ್ಯಕ್ಷತೆ ವಹಿಸಿದರೆ, ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜೈವಿಕ ತಂತ್ರ ಜ್ಞಾನದ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಪ್ರಮುಖರಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ನಾಗರತ್ನಮ್ಮ, ಹೆಚ್.ಎನ್.ಚಂದ್ರಶೇಖರ್, ಕಾರ್ಯದರ್ಶಿಗಳಾದ ಅ.ನಾ.ಲಿಂಗಪ್ಪ, ಸುಜಾತ ಚಂದ್ರಶೇಖರ್, ಕಾಯಾಧಲಯ ಕಾರ್ಯದರ್ಶಿ ಪ್ರವೀಣ್.ಎಸ್.ಹೊಸಹಳ್ಳಿ, ವಕ್ತಾರ ಕೆ.ಪಿ.ಮಹೇಶ, ಸಹ ವಕ್ತಾರ ಟಿ.ಜೆ.ಸನತ್, ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಲೋಕೇಶ್, ನರಸಿಂಹಮೂರ್ತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಸಾಮಾಜಿಕ ಜಾಲತಾಣದ ಸಹ ಸಂಚಾಲಕಿ ಶಕುಂತಲಾ, ಯುವಮೋರ್ಚಾ ಜಿಲ್ಲಾಧ್ಯಕ್ಷ ಯಶಸ್ ಟಿ.ವೈ, ಉಪಾಧ್ಯಕ್ಷ ಗುರುಪ್ರಸಾದ್, ಕಾರ್ಯದರ್ಶಿ ವಿ.ರಕ್ಷಿತ್, ಒಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಗೋಕುಲ್ ಮಂಜುನಾಥ್, ಕೆ.ವೇದಮೂರ್ತಿ, ಮಹಿಳಾ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಸೌಮ್ಯ, ಕಾರ್ಯದರ್ಶಿ ಕಾವ್ಯ, ದಾವಣಗೆರೆ ವಿಭಾಗ ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಟ ಸಹ ಸಂಚಾಲಕಿ ಎಂ.ಪಿ.ಜ್ಯೋತಿ, ಫಲಾನುಭವಿ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಜಿ.ಎಸ್.ಶ್ರೀಧರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಕೋಮಲ, ನಗರ ಅಧ್ಯಕ್ಷ ಹನುಮಂತರಾಜು. ಹೆಚ್.ಟಿ, ಉಪಾಧ್ಯಕ್ಷ ಹೆಚ್.ಎಸ್.ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಗಣೇಶ್.ಜಿ.ಪ್ರಸಾದ್, ಕಾರ್ಯದರ್ಶಿ ಕೆ.ಎಸ್.ಕುಮಾರ್, ಗುಬ್ಬಿ ಮಂಡಲ ಅಧ್ಯಕ್ಷ ಬಿ.ಎಸ್.ಪಂಚಾಕ್ಷರಯ್ಯ, ಮಧುಗಿರಿ ಮಂಡಲ ಅಧ್ಯಕ್ಷ ಪುರವರ ಮೂರ್ತಿ, ಮಹಾನಗರಪಾಲಿಕೆ ಸದಸ್ಯ ಮಲ್ಲಿಕಾರ್ಜುನ್, ಜಿಲ್ಲಾ ವಕ್ಫ್‍ಬೋರ್ಡ್ ಉಪಾಧ್ಯಕ್ಷ ಶಬೀರ್ ಅಹಮ್ಮದ್ ಮುಂತಾದರು ಭಾಗವಹಿಸಿದ್ದರು.

(Visited 2 times, 1 visits today)