ತುಮಕೂರು
ಸರ್ವರಿಗೂ ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ಬಯಸುವ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ದಾಸೋಹ ಕಾರ್ಯಕ್ಕೆ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು ಅಕ್ಕಿ ಮೂಟೆಗಳನ್ನು ವಿತರಿಸಿದರು.
ತಮ್ಮ ಗೃಹ ಕಚೇರಿಯಲ್ಲಿ ನಗರದ ಸುಮಾರು 88ಕ್ಕೂ ಹೆಚ್ಚು ಮಸೀದಿಗಳ ಮುತ್ತುವಲ್ಲಿಗಳು, ಮಸೀದಿಗಳ ಮುಖ್ಯಸ್ಥರು ಹಾಗೂ ಹಿರಿಯ ಮುಖಂಡರುಗಳ ಸಮ್ಮುಖದಲ್ಲಿ ಉಚಿತವಾಗಿ ಸಾಮೂಹಿಕ ದಾಸೋಹಕ್ಕೆ ಬಳಸಲು ಅಕ್ಕಿಮೂಟೆಗಳನ್ನು ನೀಡಿ, ಈದ್ ಮಿಲಾದ್ ಹಬ್ಬಕ್ಕೆ ಶುಭಕೋರಿದರು.
ಈ ವೇಳೆ ಮಾತನಾಡಿದ ತುಮಕೂರು ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು, 2010 ರಿಂದಲೂ ತುಮಕೂರು ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು ವಿತರಿಸುವ ಕೆಲಸವನ್ನು ನಾವು ಮಾಡಿಕೊಂಡು ಬಂದಿದ್ದೇವೆ.ಅಲ್ಲದೆ ಎಲ್ಲಾ ಸಮುದಾಯಗಳ ಹಬ್ಬ ಹರಿದಿನಗಳಲ್ಲಿ ಅವರಿಗೆ ಬೇಕಾದ ದಿನಸಿ,ಇನ್ನಿತರ ಪದಾರ್ಥಗಳನ್ನು ನೀಡಿ,ಎಲ್ಲಾ ಸಮುದಾಯ ಬಡವರು ಸಹ ಸಂತೋಷದಿಂದ ಹಬ್ಬ ಆಚರಿಸುವಂತೆ ಪ್ರೇರೆಪಿಸಿದ್ದೇವೆ. ಈ ಬಾರಿಯೂ ಮಸೀದಿಗಳಲ್ಲಿ,ಬಡಾವಣೆಗಳಲ್ಲಿ ಈದ್ ಮಿಲಾದ್ ಅಂಗವಾಗಿ ನಡೆಯುವ ಸಾಮೂಹಿಕ ದಾಸೋಹದಲ್ಲಿ ಬೋಜನ ಮಾಡುವ ಜನರಿಗೆ ಅನುಕೂಲವಾಗಲೆಂದು ಅಯಾಯ ಮಸೀದಿಯ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಅಕ್ಕಿ ಚೀಲ ವಿತರಿಸಿದ್ದೇವೆ. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಮದ್ ಪೈಗಂಬರ್ ಅವರ ಹುಟ್ಟು ಹಬ್ಬವೂ ಇದಾಗಿರುವ ಹಿನ್ನೇಲೆಯಲ್ಲಿ ಅವರ ಹೆಸರಿನಲ್ಲಿ ನಾನು ನೀಡುತ್ತಿರುವ ಪುಟ್ಟ ಸಹಾಯ ಇದು ಎಂದರು.
ಜೆಡಿಎಸ್ ಮುಖಂಡ ಇಸ್ಮಾಯಿಲ್ ಮಾತನಾಡಿ,ಕಳೆದ 2010ರಿಂದಲೂ ಗೋವಿಂದರಾಜು ರವರು ಒಂದಿಲೊಂದು ರೀತಿಯಲ್ಲಿ ಮುಸ್ಲಿಂರೆನ್ನದೆ ಎಲ್ಲಾ ಜಾತಿ, ಜನಾಂಗಗಳ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ. ಅದರ ಒಂದು ಭಾಗವಾಗಿ ಈದ್ ಮಿಲಾದ್ ಹಬ್ಬದಂದು ನಡೆಯುವ ಸಾಮೂಹಿಕ ದಾಸೋಹಕ್ಕೆ ಬೇಕಾದ ಅಕ್ಕಿಯನ್ನು ವಿತರಿಸಿ, ತಮ್ಮ ಕೈಲಾದ ಸೇವೆಯನ್ನು ಮಾಡಿದ್ದಾರೆ. ಈ ಹಿಂದಿನ 2013 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದಾಗ ಜನರು ಅವರ ಪರವಾಗಿ ನಿಂತು ಮತ ಚಲಾಯಿಸಿದ್ದಾರೆ. ಆದರೆ ಕೆಲವೇ ಮತಗಳ ಅಂತರದಿಂದ ಸೋಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಿಗೆ ಜನರು ಅಧಿಕಾರ ನೀಡಿದ್ದಾರೆ. ಹಾಗೆಯೇ ಮುಂದಿನ ಬಾರಿ ಜೆಡಿಎಸ್‍ಗೆ ಅಧಿಕಾರ ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜನರು ಆಲೋಚಿಸಬೇಕಿದೆ ಎಂದರು.
ಈ ವೇಳೆ ಮುಖಂಡರಾದ ದಾದಾಪೀರ್,ಇಸ್ಮಾಯಿಲ್, ಅಸ್ಪರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.