ಚಿಕ್ಕನಾಯಕನಹಳ್ಳಿ
ಭಾರತ ಜೋಡೋ ಯಾತ್ರೆಯ ರಾಷ್ಟ್ರಮಟ್ಟದ ರೈತರ ಅಗತ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರೈತರೊಂದಿಗೆ ಸಂವಾದ ನಡೆಸಲು ಚಿಕ್ಕನಾಯಕನಹಳ್ಳಿಯ ತರಬೇನಹಳ್ಳಿ ಷಡಕ್ಷರಿ ತೋಟ ಅಣಿಯಾಗಿದೆ
ರಾಹುಲ್ ಗಾಂಧಿಯವರು ಕಲ್ಪತರು ನಾಡಿಗೆ ನಾವೆಲ್ಲರೂ ಬರಮಾಡಿಕೊಂಡು ಈ ಭಾಗದ ವಾಣಿಜ್ಯ ಬೆಳೆಗಳಾದ ತೆಂಗು ಅಡಿಕೆ ಬಾಳೆ ಇನ್ನು ಇತರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಧಾರಣೆ ಸಮಸ್ಯೆಗಳ ಬಗ್ಗೆ ಹತ್ತು ಹಲವಾರು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಮುಂದಿನ ರೈತರ ಬದುಕು ಹಸನು ಮಾಡುವ ಮಹತ್ತರ ಕಾರ್ಯ ಇದಾಗಲಿದೆ ಎಂದು ಕೌಶಲ್ಯ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿಯ ವೀಕ್ಷಕ ಮುರಳಿಧರ್ ಹಾಲಪ್ಪ ಹೇಳಿದರು.
ಅವರು ತಾಲೂಕಿನ ಗೋಡೆ ಕೆರೆ ಪಂಚಾಯತಿ ವ್ಯಾಪ್ತಿಯ ತರಬೇನಹಳ್ಳಿ ಗ್ರಾಮದ ಷಡಾಕ್ಷರಿಯವರ ತೋಟದ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿಯವರ ಪಾದಯಾತ್ರೆ ಇಂದು ರಾತ್ರಿ ಆದಿಚುಂಚನಗಿರಿಗೆ ಬಂದು ವಾಸ್ತವ್ಯ ಮಾಡಲಿದ್ದಾರೆ ನಾಳೆ ಬೆಳಿಗ್ಗೆ 6:30ಗೆ ಆರಂಭಗೊಂಡು ಪಾದಯಾತ್ರೆ, ತುಮಕೂರು ಜಿಲ್ಲೆಯ ಗಡಿಭಾಗದ ಮೂಲಕ ಅವರನ್ನು ಬರಮಾಡಿಕೊಂಡು ತುರುವೇಕೆರೆ ಬಾಣಸಂದ್ರ ದಲ್ಲಿ ವಾಸ್ತವ ಹೂಡಿ ದಿನಾಂಕ 9 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಷಡಕ್ಷರಿ ಅವರ ತೋಟದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ರೈತರ ಮೂಲಭೂತ ಸಮಸ್ಯೆಗಳಾದ ಗೊಬ್ಬರದ ಸಮಸ್ಯೆ ಕಾಪೆರ್Çರೇಟ್ ಸಂಸ್ಥೆಗಳು ಎಪಿಎಂಸಿಯ ಮೇಲಿನ ನಿಯಂತ್ರಣಗಳ ಬಗ್ಗೆ ಕೃಷಿಗಳಲ್ಲಿ ಆಧುನಿಕ ರೀತಿಯ ಅಳವಡಿಸಿಕೊಳ್ಳುವ ಬಗ್ಗೆ ಇಂತಹ 10 ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸೂಕ್ತ ವೇದಿಕೆ ಆಗಲಿದೆ
ಜಿಲ್ಲಾ ಕೆಪಿಸಿಸಿ ಕಾರ್ಯದರ್ಶಿ ಡಾಕ್ಟರ್ ಜಿ ಪರಮೇಶ್ವರ್ ಮಾತನಾಡುತ್ತಾ ರಾಹುಲ್ ಗಾಂಧಿಯವರು ಪಾದಯಾತ್ರೆ ಮೂಲಕ ಬರುತ್ತಿರುವುದು ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ನಿಲ್ಲುವಂತಹ ಕಾರ್ಯಕ್ರಮ ಇದಾಗಿದೆ ನಾಡು ನುಡಿ ಭಾಷೆ ಎಲ್ಲವನ್ನು ಒಗ್ಗೂಡಿಸುವ ಸಂದೇಶ ಇದಾಗಿದೆ ಆದ್ದರಿಂದ ಸಾರ್ವಜನಿಕರು ಈ ಪಾದಯಾತ್ರೆಗೆ ಸಂಪೂರ್ಣ ಸಹಕಾರ ನೀಡಿ ಅವರಿಗೆ ಇಡೀ ರಾಷ್ಟ್ರವೇ ಧ್ವನಿ ಕೈಜೋಡಿಸಬೇಕಿದೆ ಶಾಂತಿ ಕಾಪಾಡುವಂತೆ ತಾಲೂಕಿನ ಪರವಾಗಿ ಮನವಿ ಮಾಡಿದರು.
ಪ್ರಗತಿಪರ ರೈತ ಷಡಕ್ಷರಿ ಮಾತನಾಡುತ್ತಾ ಮೊದಲನೆಯದಾಗಿ ನಮ್ಮ ತೋಟ ಆಯ್ಕೆ ಮಾಡಿಕೊಂಡಿರುವುದು ನನಗೆ ಪರಿಪೂರ್ಣವಾಗಿ ಸಂತಸ ತಂದಿದೆ ರೈತರ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ ಅದು ಸಂಕಷ್ಟದಲ್ಲಿ ಸಿಲುಕಿದೆ ರೈತನಿಗೆ ಗೌರವ ಇದೆಯಾ ಇಲ್ವಾ ಅನ್ನುವ ಪ್ರಶ್ನೆ ರೈತನೇ ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿರುವುದು ಸೂಚನೆಯ ಸಂಗತಿ ದೇಶಕ್ಕೆಲ್ಲ ಅನ್ನ ಕೊಡುವ ರೈತ ಅವನ ಸ್ಥಿತಿಯನ್ನೇ ಯೋಚಿಸಿದರೆ ಬಹಳಷ್ಟು ಕಷ್ಟಗಳ ಸರಮಾಲೆಯನ್ನೇ ಹೊತ್ತು ಇರುತ್ತಾನೆ. ಇಂತಹ ರೈತನಿಗೆ ಕಾಯಕಲ್ಪ ಕಲ್ಪಿಸಲು ರಾಹುಲ್ ಗಾಂಧಿಯವರು ಭಾರತ್ ಜೋಡೋ ಕಾರ್ಯಕ್ರಮದ ಮೂಲಕ ರೈತರ ಸಮಸ್ಯೆಯನ್ನು ಆಲಿಸುತ್ತಿರುವುದು ನಿಜಕ್ಕೂ ಪ್ರಶಂಸೆ ಪಡುವಂತಹ ವಿಷಯವಾಗಿದೆ ಈ ಮೂಲಕ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ರೈತರ ಸಮಸ್ಯೆಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಯಾವುದೇ ರೈತರ ಸಮಸ್ಯೆ ಇದ್ದರೂ ನಮ್ಮ ಮೊಬೈಲ್ ನಂಬರ್ ಗೆ ಮಾಹಿತಿ ನೀಡಿ ಸಮಸ್ಯೆಗೆ ವೇದಿಕೆಯಲ್ಲಿ ಹಂಚಿಕೊಳ್ಳಲು ಸಹಕಾರ ನೀಡಬೇಕಾಗಿ ಈ ಮೂಲಕ ಮನವಿ ಮಾಡಿದರೋ 86181 70078 ಈ ನಂಬರ್ಗೆ ವಾಟ್ಸಪ್ ಮೂಲಕ ಮಾಹಿತಿ ಹಂಚಿಕೊಳ್ಳೋಣ ಎಂದರು.
ಸಿಡಿ ಚಂದ್ರಶೇಖರ್ ಮಾತನಾಡಿ ಭಾನುವಾರ ನಡೆಯಲಿರುವ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಪ್ರಗತಿಪರ ರೈತರು ಭಾಗವಹಿಸಲಿದ್ದಾರೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಸ್ಥಳೀಯ ಮತ್ತು ರಾಷ್ಟ್ರಮಟ್ಟದ ರೈತರ ಸಮಸ್ಯೆಗಳೇನಾದರೂ ಇದ್ದರೆ ನಮ್ಮ ವಾಟ್ಸಪ್ ನಂಬರ್ ಗೆ ಮಾಹಿತಿ ನೀಡಿ ರೈತರ ಸೂಕ್ತ ಸಮಸ್ಯೆಗಳಿಗೆ ಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಇವರು ಮನವಿ ಮಾಡಿದರು ಇವರ ವಾಟ್ಸಪ್ ನಂಬರ್ 70198 85638 ಹಂಚಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದಂತ ಪ್ರಸನ್ನ ಕುಮಾರ್ ಮಹಾಲಿಂಗ ನಾಯಕ್ ಚೌದ್ರಿ ರಂಗಪ್ಪ ಪರಮೇಶ್ವರಪ್ಪ ಸಿದ್ದಣ್ಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಬಸವರಾಜು ಡಾಕ್ಟರ್ ವಿಜಯ ರಾಘವೇಂದ್ರ ಕೃಷ್ಣೆಗೌಡ ಎಚ್ ಬಿ ಎಸ್ ನಾರಾಯಣಗೌಡ ಅಣೆಕಟ್ಟೆ ವಿಶ್ವನಾಥ್ ಮುಜೀಬ್ ಸೇರಿದಂತೆ ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.